

ಭೋಪಾಲ್: ವಿಚ್ಛೇದಿತ ಅಕ್ಕನ ಮೇಲೆ ಇಬ್ಬರು ತಮ್ಮಂದಿರು ಅತ್ಯಾಚಾರ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಎಂಟು ತಿಂಗಳ ಹಿಂದೆಯೇ ಘಟನೆ ನಡೆದಿದ್ದರೂ ಮಹಿಳೆ (36) ಇದೀಗ ದೂರು ದಾಖಲಿಸಿದ್ದಾರೆ. ನಾನು ವಿಚ್ಛೇದಿತಳಾಗಿ ತವರು ಮನೆಯಲ್ಲೇ ಇದ್ದೆ. ಫೆಬ್ರವರಿಯಲ್ಲಿ ಇಬ್ಬರು ತಮ್ಮಂದಿರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವಿಷಯವನ್ನು ಪಾಲಕರಿಗೆ ಹೇಳಿದರೆ ಅವರೂ ನನಗೇ ಹೊಡೆದರು. ಅಲ್ಲದೆ ಪೊಲೀಸರಿಗೆ ಹೇಳದಂತೆ ಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.
ಇಬ್ಬರೂ ತಮ್ಮಂದಿರೂ ಇನ್ನೂ ಅವಿವಾಹಿತರು. ನನ್ನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ದೌರ್ಜನ್ಯ ಎಸಗುತ್ತಿದ್ದಾರೆ. ಅಷ್ಟೇ ಅಲ್ಲ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಲು ನೋಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)