ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ? ಮಗಳ ಸಾವಿನ ಬೆನ್ನಲ್ಲೇ ತಂದೆ-ತಾಯಿ ದುರಂತ ಅಂತ್ಯ

sucide pic
Published on

ಹೈದ್ರಾಬಾದ್: ಮಗಳ ಸಾವಿನ ದುಃಖವನ್ನು ತಾಳಲಾರದೆ ಮನನೊಂದ ಪೋಷಕರು ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುರ್ಗಂಪಾದ್ ಜಿಲ್ಲೆಯಲ್ಲಿ ನಡೆದಿದೆ.

ಹೈದ್ರಾಬಾದ್ ಇಸಿಐಎಲ್ ಪ್ರದೇಶದ ನಿವಾಸಿಗಳಾದ ಪಮ್ಮಿ ಹೇಮಲತಾ (48) ಮತ್ತು ಅವರ ಪತಿ ಪಮ್ಮಿ ಲಕ್ಷ್ಮಣ ಚರ್ರಿ (55) ಮೃತ ದಂಪತಿಗಳು. ಸಾವಿಗೂ ಮುನ್ನ ದಂಪತಿ ಬರೆದ ಡೆತ್ ನೋಟ್ ಸಿಕ್ಕಿದ್ದು, ಇದರಲ್ಲಿ ಮಗಳು ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಹತ್ತು ದಿನಗಳ ಹಿಂದೆ ಅನಾರೋಗ್ಯದಿಂದ ಹೈದ್ರಾಬಾದ್ ಮನೆ ತೊರೆದಿದ್ದ ಈ ದಂಪತಿ, ಇತ್ತೀಚೆಗೆ ಮಗಳು ಸಾವನ್ನಪ್ಪಿರುವ ವಿಚಾರವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಹೇಮಲತಾ ಅವರ ಸಹೋದರನ ಮನೆಗೆ ತೆರಳಿದ್ದ ದಂಪತಿ ನಂತರ ಬುರ್ಗಾಂಪಾದ್ ಜಿಲ್ಲೆಯ ಗೋದಾವರಿ ನದಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬುರ್ಗಾಂಪಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net