ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿ

sports
Published on


ಮೈಸೂರು: ಮೈಸೂರು ಜಿಲ್ಲಾ ಅಮೆಚೂರ್ ಥ್ರೋಬಾಲ್ ಸಂಸ್ಥೆ, ಸೈಕಲ್ ಪ್ಯೂರ್ ಅಗರಬತ್ತಿ ವತಿಯಿಂದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ತಂಡಗಳಿಗೆ ಥ್ರೋಬಾಲ್ ಪಂದ್ಯಾವಳಿಯನ್ನು ಆ.18 ರಂದು ನಗರದಲ್ಲಿ ಆಯೋಜಿಸಲಾಗಿದೆ.

ಬೆಳಗ್ಗೆ 9.30ಕ್ಕೆ ನಗರದ ವಿಜಯನಗರ 1ನೇ ಹಂತದ ಮಾನಸ ಸರೋವರ ಪುಷ್ಕರಿಣಿ ವಿದ್ಯಾಶ್ರಮದಲ್ಲಿ ಆಯೋಜಿಸಿರುವ ಪಂದ್ಯಾವಳಿಯನ್ನು ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಡಾ.ಎಂ.ಆರ್.ಸವಿತಾ ಪ್ರಶಾಂತ್ ಉದ್ಘಾಟಿಸುವರು. ಮೈಸೂರು ಜಿಲ್ಲಾ ಅಮೆಚೂರ್ ಥ್ರೋಬಾಲ್ ಸಂಸ್ಥೆ ಅಧ್ಯಕ್ಷೆ ಮಶ್ಹೂದಾ ಜಾವೀದ್ ಅಧ್ಯಕ್ಷತೆ ವಹಿಸುವರು. ಸುಧೀರ್ ಭಟ್, ಡಾ.ಪಿ.ಕೃಷ್ಣಯ್ಯ, ಸ್ವರೂಪಿಣಿ, ಭವಾನಿ ನಾಗೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net