ವಿವಿಧ ಕ್ರೀಡೆಯಲ್ಲಿ ರಾಜೇಶ್ವರಿ ಕಾಲೇಜ್​ ಮಕ್ಕಳು ಪ್ರಥಮ ಸ್ಥಾನ

4-RNR-06
Published on

ರಾಣೆಬೆನ್ನೂರ: ಹಾವೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2024&-25ನೇ ಸಾಲಿನ ಜಿಲ್ಲಾ ಮಟ್ಟದ ಪದವಿ-ಪೂರ್ವ ಕಾಲೇಜ್​ಗಳ ಕ್ರೀಡಾಕೂಟದಲ್ಲಿ ನಗರದ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣು ಮಕ್ಕಳ ಸಂಯುಕ್ತ ಪದವಿ -ಪೂರ್ವ ಕಾಲೇಜ್​ನ ವಿದ್ಯಾಥಿರ್ನಿಯರು ಗುಂಪು ಮತ್ತು ವೈಯಕ್ತಿಕ ಆಟಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ಗುಂಪು ಆಟ:- ಖೋ ಖೋನಲ್ಲಿ ದ್ವೀತಿಯ ಸ್ಥಾನ ಪಡೆದು ವಿದ್ಯಾಥಿರ್ನಿ ಸುಮಂಗಲಾ ಕರಿಯಣ್ಣನವರ, ಭೂಮಿಕಾ ಖಂಡೆಪ್ಪನವರ, ದೀಪಾ ದೊಡ್ಡಗೌಡ್ರ, ಶೀವಲಿಲಾ ಮಕರಬ್ಬಿ ಹಾಗೂ ಥ್ರೋ ಬಾಲ್​ನಲ್ಲಿ ನೀಲವ್ವ ಲಮಾಣಿ, ಶಶಿಕಲಾ ಲಮಾಣಿ, ಕುಸುಮವ್ವ ಪೂಜಾರ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ಆಟ: ಜಾವಲಿನ್​ನಲ್ಲಿ ದೀಪಾ ದೊಡ್ಡಗೌಡ್ರ ಪ್ರಥಮ, 800 ಮೀಟರ್​ ಓಟದಲ್ಲಿ ಶೀವಲಿಲಾ ಮಕರಬ್ಬಿ ದ್ವೀತಿಯ ಸ್ಥಾನ, ಶಶಿಕಲಾ ಹಿತ್ತಲಮನಿ ವೇಗದ ನಡಿಗೆಯಲ್ಲಿ ದ್ವೀತಿಯ ಸ್ಥಾನ, ಸಂಗಿತಾ ತಳಗೇರಿ ಮತ್ತು ಅನು ಗ್ವಾರಪ್ಪನವರ ಗುಡ್ಡಗಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜ್​ನ ಪ್ರಾಚಾಯೆರ್ ಸುರೇಖಾ ಕಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net