

ಮೈಸೂರು: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೈಸೂರಿನ ಜಿ.ಸಿ.ಗುರುಪ್ರಸಾದ್ ಮತ್ತು ಎಂ.ಮಮತಾ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 100 ಮೀ. ಓಟದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದರು.
ಪುರುಷರ 100 ಮೀಟರ್ ಓಟದಲ್ಲಿ ಕೆ.ಆರ್.ನಗರದ ಪ್ರವೀಣ್ ದ್ವಿತೀಯ ಹಾಗೂ ಮೈಸೂರಿನ ಬಿ.ಜಿ.ಪ್ರೀತಮ್ ತೃತೀಯ ಸ್ಥಾನ ಪಡೆದರು. ಇನ್ನು ಮಹಿಳಾ ವಿಭಾಗದಲ್ಲಿ ನಂಜನಗೂಡಿನ ಜೀವಿತ ದ್ವಿತೀಯ ಹಾಗೂ ಹುಣಸೂರಿನ ಅನುಶ್ರೀ ತೃತೀಯ ಸ್ಥಾನ ಪಡೆದರು.