

ಚಿತ್ರದುರ್ಗ: ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರ ಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಶುಕ್ರವಾರ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. 2017-18ನೇ ಸಾಲಿನಲ್ಲಿ 1ರಿಂ ದ 5ನೇ ತರಗತಿ ಮಕ್ಕಳಿಗೆ 3 ಸಾವಿರ ರೂ.ಗಳಿಂದ 5 ಸಾವಿರ ರೂ.ವರೆಗೆ ಕೊಡುತ್ತಿದ್ದ ಸಹಾಯ ಧನವನ್ನು ಮುಂದುವರಿಸಬೇಕು. 6ರಿಂ ದ 10ನೇ ತರಗತಿ ಮಕ್ಕಳಿಗೆ 15,ಪಿಯುಸಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್‌ನಂತೆ 12 ಹಾಗೂ ಪದವಿ ವಿದ್ಯಾರ್ಥಿಗಳಿಗೆ 50 ಹಾಗೂ ಸ್ನಾತಕೋ ತ್ತರ,ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 60 ಸಾವಿರ ರೂ. ಸಹಾಯ ಧನ ಮಂಜೂರು ಮಾಡಬೇಕು.
ಹೆರಿಗೆ ಭತ್ಯೆ 60 ಸಾವಿರ ರೂ.ಗಳನ್ನು ಒಂದು ಲಕ್ಷ ರೂ.ಗೆ,ಮಕ್ಕಳ ಮದುವೆ ಸಹಾಯ ಧನವನ್ನು 65 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸಬೇಕು. ನೊಂದಾಯಿತ ಕಟ್ಟಡ ಕಾರ್ಮಿಕರು ಸಹಜ ಸಾವಿಗೀಡಾದ ರೆ 2 ಲಕ್ಷ ರೂ.,ಬಿಲ್ಡಿಂಗ್ ಕುಸಿತಕ್ಕೆ ಕಟ್ಟಡ ಕಾರ್ಮಿ ಕ ಮೃತ ಪಟ್ಟರೆ ಅಪಘಾತವೆಂದು ಪರಿಗಣಿಸಿ ಅವಲಂಭಿತ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ಘೋಷಿಸಬೇಕು.
ಪಿಂಚಣಿ ಮೊತ್ತವನ್ನು 3 ಸಾವಿರ ರೂ.ಗಳಿಂದ 5 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲಬಾಲ ಚಂದ್ರ ಬಗಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಕಿಟ್‌ಗಳನ್ನು ವಿತರಿಸ ಲಾಯಿತು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ,ಗೌರವಾಧ್ಯಕ್ಷ ಎಚ್.ಹಾಲೇಶಪ್ಪ,ಜಾವೀದ್‌ಬಾಷಾ,ಮನ್ಸೂರ್‌ಬಾಷಾ, ಲಕ್ಷ್ಮೀದೇವಿ,ಪಿ.ಈರೇಶ್,ಹನುಮಂತಪ್ಪ, ಜಗದೀಶ್,ಎಂ.ರಾಜಣ್ಣ, ಅಂಜಿನಪ್ಪ, ಟಿ.ಅಶೋಕ್, ಎಂ.ಮಲ್ಲಿಕಾರ್ಜುನ, ಸುರಂಗಿ ತಿಪ್ಪೇ ಸ್ವಾಮಿ,ಪಿ.ರಾಜಣ್ಣ,ಎಚ್.ರಮೇಶ್,ಎಂ.ಸುರೇಶ್, ಡಿ.ಲಕ್ಷ್ಮಣ ಇತರರು ಇದ್ದರು.