ಅಹಿಂಸಾತ್ಮಕ ಹೋರಾಟ ನಡೆಸೋಣ

Published on

ಕೊಪ್ಪಳ:ಕೇಂದ್ರ ಸಚಿವ ಅಮಿತ್​ ಷಾ ಹೇಳಿಕೆ ಖಂಡಿಸಿ ಜ.6ರಂದು ಕೊಪ್ಪಳ ಬಂದ್​ ಮಾಡೋಣ. ಅಹಿಂಸಾತ್ಮಕ ಹೋರಾಟಕ್ಕೆ ಆದ್ಯತೆ ಇರಲಿ. ನಾವು ಹೋಗಿ ನಮಸ್ಕಾರ ಮಾಡಿದರೆ ಜನ ಬೆಂಬಲ ಸೂಚಿಸುತ್ತಾರೆಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬಂದ್​ ಅಂಗವಾಗಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಅಹಿಂಸಾತ್ಮಕವಾಗಿಯೇ ನಮ್ಮ ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದಿಸಲು ಅವಕಾಶವಿದೆ. ಇಲ್ಲದಿದ್ದರೆ ಸಂಟನೆಗಳ ಬಗ್ಗೆ ತಪು$್ಪ ಅಭಿಪ್ರಾಯ ಬರಲಿದೆ. ಬೆಳಗ್ಗೆ 11 ಗಂಟೆಯೊಳಗೆ ಪ್ರತಿಭಟನೆ ಆರಂಭಿಸೋಣ. ಈಗ ನಡೆವ ಮಾದರಿಯಲ್ಲಿ ಮುಂದೆ ಅಣು ಸ್ಥಾವರ ಹಾಗೂ ಎಂಎಸ್​ಪಿಎಲ್​ ಕಾರ್ಖಾನೆ ವಿಸ್ತರಣೆ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಹನುಮೇಶ ಕಡೆಮನಿ ಮಾತನಾಡಿ, 10 ಸಾವಿರ ಜನಗೆ ಆಗುವಷ್ಟು ಊಟದ ವ್ಯವಸ್ಥೆ ಮಾಡಲಾಗಿದೆ. ಆಟೋಗಳ ಮೂಲಕ ಬಂದ್​ ಬಗ್ಗೆ ಪ್ರಚಾರ ನಡೆಸಲಾಗುತ್ತಿದೆ. ಕುಡಿವ ನೀರಿನ ಟ್ಯಾಂಕ್​ ನಿಲ್ಲಿಸಲಾಗುವುದು. 150ಕ್ಕೂ ಹೆಚ್ಚು ಬೈಕ್​ ರ್ಯಾಲಿ ನಡೆಸಲಿವೆ. ಆಟೋ, ವರ್ತಕರು ಸ್ವಯಂ ಬಂದ್​ ಮಾಡುವ ಮೂಲಕ ಬೆಂಬಲ ಸೂಚಿಸಲಿದ್ದಾರೆ. ಕುಕನೂರು, ಯಲಬುರ್ಗಾದಿಂದ ಅನೇಕರು ಆಗಮಿಸಲಿದ್ದಾರೆ ಎಂದರು.

ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಮಾತನಾಡಿದರು. ವಿವಿಧ ಸಂಟನೆಗಳ ಮುಖಂಡರಾದ ಬಸವರಾಜ ಶೀಲವಂತರ, ರಾಮಣ್ಣ ಚೌಡ್ಕಿ, ಚನ್ನಬಸಪ್ಪ, ಪರಶುರಾಮ್​ ಕೆರೆಹಳ್ಳಿ, ಗವಿಸಿದ್ದಪ್ಪ ಬೆಲ್ಲದ್​, ಸಿದ್ದರಾಮ ಹೊಸಮನಿ, ಎಸ್​.ಎ.ಗಫಾರ್​, ಗಾಳೆಪ್ಪ ಮುಂಗೊಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net