

ಪ್ರಮುಖ ಮುಖ್ಯಾಂಶಗಳು
ರಾಮನಗರ
ಸತತ ಎರಡನೇ ಬಾರಿಗೆ ಕೇಂದ್ರಸರ್ಕಾರ ಪೂರ್ಣ ಪ್ರಮಾಣದಲ್ಲಿ ನಷ್ಟಅನುಭವಿಸಿರುವ ರಾಜ್ಯದ ಮಾವು ಬೆಳೆಗಾರರಸಂಕಷ್ಟಕ್ಕೆ ಸ್ಪಂದಿಸಿ, ಆರ್ಥಿಕ ನೆರವು ಘೋಷಣೆಯನ್ನೇನೋಮಾಡಿದೆ. ಆದರೆ, ಲಾಭ ಮಾತ್ರಈ ವರ್ಷವೂ ಜಿಲ್ಲೆಯರೈತರಿಗೆ ದೊರೆಯದೇ ಇರುವುದು ಮಾವುಬೆಳೆಗಾರರಲ್ಲಿ ಬೇಸರ ತರಿಸಿದೆ.
ಕಳೆದ ಹಲವು ವರ್ಷಗಳಿಂದಲೂ ಹವಾಮಾನವೈಪರೀತ್ಯದಿಂದ ಮಾವು ಬೆಳೆಗಾರರು ನಷ್ಟಅನುಭವಿಸುತ್ತಿದ್ದು, ಈ ಬಾರಿಯೂ ಶೇ.80ಮಾವು ಇಳುವರಿ ಕುಂಠಿತವಾಗಿದೆ. ಈಹಿನ್ನೆಲೆಯಲ್ಲಿ ಜಿಲ್ಲೆಯ ಬೆಳೆಗಾರರು ಹೆಚ್ಚಿನಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳುಈ ನಿಟ್ಟಿನಲ್ಲಿ ಸ್ಪಂದಿಸಿದ್ದರೂಮಾವು ಪೂರ್ಣ ಮುಗಿಯುವ ಹಂತದಲ್ಲಿರುವಕಾರಣ ಜಿಲ್ಲೆಯ ರೈತರು ಇದರಲಾಭ ಪಡೆದುಕೊಳ್ಳಲುಸಾಧ್ಯಯವಾಗುತ್ತಿಲ್ಲ. ಪ್ರತಿ ಟನ್ ಮಾವಿಗೆಅದರಲ್ಲೂ ತೋತಾಪುರಿ ಮಾವಿಗೆ 1750 ರೂ. ಆರ್ಥಿಕ ಬೆಂಬಲವನ್ನುಕೇಂದ್ರ ಸರ್ಕಾರ ಘೋಷಣೆ ಮಾಡಿದೆ.ನಿಗದಿತ ಬೆಲೆಗಿಂತ ದರ ಕುಸಿತ ಕಂಡರೆಈ ಸಂದಭರ್ದಲ್ಲಿ ಕೇಂದ್ರಮತ್ತು ರಾಜ್ಯ ಸರ್ಕಾರಗಳು 50:50ರಅನುಪಾತದಲ್ಲಿ ರೈತರಿಗೆ ನಷ್ಟ ತುಂಬಿಕೊಡುವ ಕೆಲಸ ಮಾಡುತ್ತವೆ.
ಕೊಯ್ಲುಮುಗಿದಿದೆ: ಜಿಲ್ಲೆಯಲ್ಲಿ ಸುಮಾರು 70 ಸಾವಿರ ಎಕರೆ ಪ್ರದೇಶದಲ್ಲಿಮಾವು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಬಾದಾಮಿ, ಸೇಂದೂರ, ತೋತಾಪುರಿಮತ್ತು ರಸಪೂರಿ ಮಾವಿನ ಹಣ್ಣುಗಳುಬಹುತೇಕ ಮಾರ್ಚ್ ಮೊದಲ ವಾರದಲ್ಲಿಮಾರುಕಟ್ಟೆ ಪ್ರವೇಶ ಮಾಡುತ್ತವೆ. ಹೆಚ್ಚಿನಪ್ರಮಾಣದ ಮಾವು ಪಲ್ಪ್ ಉತ್ಪಾದನೆಗೆರಫ್ತಾದರೆ, ಉಳಿದ ಭಾಗ ಮಾರುಕಟ್ಟೆಗೆಪ್ರವೇಶ ಮಾಡಿ ಗ್ರಾಹಕರ ಬಾಯಿಯನ್ನುಸಿಹಿಗೊಳಿಸುತ್ತದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ2.5 ಲಕ್ಷ ಟನ್ ಮಾವು ಉತ್ಪಾದನೆಯನ್ನುಅಂದಾಜಿಸಲಾಗುತ್ತದೆಯಾದರೂ ಈ ಬಾರಿ ವಾತಾವರಣದಕಣ್ಣಾಮುಚ್ಚಾಲೆ ಆಟದಿಂದ ಎರಡು ಬಾರಿಫಲ ಬಿಟ್ಟಿರುವುದು ಹಾಗೂ ಜೋನಿ ಸೇರಿಇತರ ಕಾರಣಗಳಿಗೆ ತೀವ್ರ ಕಷ್ಟ ಉಂಟಾಗಿದೆ.
ಸುವಾರು40 ಸಾವಿರ ರೈತರು ವಾವು ಬೆಳೆಯುತ್ತಾರೆ.ವಾರ್ಷಿಕವಾಗಿ ಅಂದಾಜು 2.65 ಲಕ್ಷ ಮೆಟ್ರಿಕ್ ಟನ್ವಾವು ಉತ್ಪಾದಿಸಲಾಗುತ್ತದೆ. ಬೆಳೆ ಪ್ರದೇಶದ ಪೈಕಿಒಟ್ಟು 22,820 ಹೆಕ್ಟೇರ್ ವಾವು ಹಾನಿಯಾಗಿದೆ ಎಂದುವರದಿಯಲ್ಲಿ ತಿಳಿಸಲಾಗಿದೆ.
ರಾಮನಗರಮಾತ್ರವಲ್ಲದೇ ರಾಜ್ಯದ ಬಹುತೇಕ ಮಾವುಬೆಳೆಯುವ ಜಿಲ್ಲೆಗಳ ರೈತರ ಪರಿಸ್ಥಿತಿಯೂ ಒಂದೇಆಗಿರುವ ಕಾರಣ ಸರ್ಕಾರ ಬೆಂಬಲಬೆಲೆ ನೀಡುವ ಸಾಧ್ಯತೆ ಇದೆ. ಈಹಿನ್ನೆಲೆಯಲ್ಲಿ ಜಿಲ್ಲೆಯಿಂದಲೂ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅಂದಾಜು ಪಟ್ಟಿಯನ್ನುಮಾರುಕಟ್ಟೆಗೆ ಬಂದ ಆವಕದ ಮೇಲೆಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದೆ. ಎನ್ಡಿಆರ್ಎ್/ಎಸ್ಡಿಆರ್ಎ್ಮಾನದಂಡದಂತೆ ಪರಿಹಾರ ನೀಡುವಂತೆ ಕೋರಲಾಗಿದೆ.ಆದರೆ, ರೈತರು ಪ್ರತಿ ಹೆಕ್ಟೇರ್ಗೆ45 ಸಾವಿರ ರೂ. ಪರಿಹಾರ ನೀಡುವಂತೆಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಇದೇವಾದವನ್ನು ಸರ್ಕಾರದ ಮುಂದೆಯೂ ಇಟ್ಟಿದ್ದಾರೆ.ಇದರ ನಡುವೆ ಕೇಂದ್ರ ಮಾವಿಗೆಬೆಂಬಲ ಬೆಲೆ ನೀಡಿದ್ದರೂ, ಇದರಪ್ರಯೋಜನ ಜಿಲ್ಲೆಯ ರೈತರಿಗೆ ಸಿಗದೇಇರುವ ಕಾರಣ ರಾಜ್ಯಮತ್ತು ಕೇಂದ್ರ ಸರ್ಕಾರ ಜಿಲ್ಲೆಯಮಾವು ಬೆಳೆಗಾರರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿಮಾವು ಕೊಯ್ಲು ಮುಗಿದಿದೆ. ಕೇಂದ್ರಸರ್ಕಾರ ಆರ್ಥಿಕ ಬೆಂಬಲ ಘೋಷಣೆಮಾಡಿದ್ದರೂ, ಇದರ ಲಾ‘ ಬೆಂಗಳೂರುದಕ್ಷಿಣ ಜಿಲ್ಲೆಯ ರೈತರಿಗೆ ಸಿಗುವುದಿಲ್ಲ.
ಡಿ.ಮಂಜುನಾಥ್, ಜಂಟಿನಿರ್ದೇಶಕ ತೋಟಗಾರಿಕೆ ಇಲಾಖೆ ರಾಮನಗರ
ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್ಡಿಆರ್ಎಫ್)ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್ಡಿಆರ್ಎಫ್)ವಾರ್ಗಸೂಚಿ ಪ್ರಕಾರ, ಜಿಲ್ಲೆಯಾಲ್ಲಾಗಿರುವ ಬೆಳೆನಷ್ಟಕ್ಕೆ ಅಂದಾಜು51.36 ಕೋಟಿ ರೂ. ಪರಿಹಾರ ನೀಡುವಂತೆಪತ್ರದಲ್ಲಿ ಜಿಲ್ಲಾಧಿಕಾರಿ ಕೋರಿದ್ದಾರೆ. ಜಿಲ್ಲೆಯಲ್ಲಿ ಸುವಾರು 28,574 ಹೆಕ್ಟೇರ್ ಪ್ರದೇಶದಲ್ಲಿ ವಾವು ಬೆಳೆಯಲಾಗುತ್ತಿದೆ. ಸುವಾರು40 ಸಾವಿರ ರೈತರು ವಾವು ಬೆಳೆಯುತ್ತಾರೆ.ವಾರ್ಷಿಕವಾಗಿ ಅಂದಾಜು 2.65 ಲಕ್ಷ ಮೆಟ್ರಿಕ್ ಟನ್ವಾವು ಉತ್ಪಾದಿಸಲಾಗುತ್ತದೆ. ಬೆಳೆ ಪ್ರದೇಶದ ಪೈಕಿಒಟ್ಟು 22,820 ಹೆಕ್ಟೇರ್ ವಾವು ಹಾನಿಯಾಗಿದೆ ಎಂದುವರದಿಯಲ್ಲಿ ತಿಳಿಸಲಾಗಿದೆ.