ಸಾರ್ವಜನಿಕರ ಗಮನ ಸೆಳೆದ ಮಾನವ ಸರಪಳಿ ನಿರ್ಮಾಣ; ಪ್ರಜಾಪ್ರಭುತ್ವ ದಿನಾಚರಣೆ

15-RNR-01B
Published on

ರಾಣೆಬೆನ್ನೂರ: ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಎನ್ನುವುದು ಹೆಮ್ಮೆಯ ಸಂಗತಿ. ಆದರೆ, ಇಂದಿನ ದಿನಮಾನದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಹಾಗೂ ಮೌಲ್ಯಗಳು ಕಡಿಮೆಯಾಗುತ್ತಿವೆ. ಅವುಗಳನ್ನು ಎತ್ತಿಹಿಡಿಯುವ ಕೆಲಸವಾಗಬೇಕು ಎಂದು ಹಿರೇಕೆರೂರ ಶಾಸಕ ಯು.ಬಿ. ಬಣಕಾರ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಆರ್​.ಟಿ.ಇ.ಎಸ್​. ಕಾಲೇಜ್​ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವಸಂಸ್ಥೆಯು 2007ರಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಜಾರಿಗೆ ತಂದಿತು. 2008ರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ. ಮಹಾತ್ಮಗಾಂ-ಧೀಜಿ ಸೇರಿ ಸ್ವಾತಂತ್ರ$್ಯ ಹೋರಾಟಗಾರರು ಸಂವಿಧಾನ ಕರಡು ಸಮಿತಿ ರಚಿಸಿದರು. ಎಲ್ಲರಿಗೂ ಸಮಾನ ಅವಕಾಶ ದೊರೆಯುವ ಬಹುದೊಡ್ಡ ಲಿಖಿತ ಸಂವಿಧಾನ ನೀಡಿದ ಡಾ. ಬಿ.ಆರ್​. ಅಂಬೇಡ್ಕರ್​ ಅವರನ್ನು ನಾವು ಸ್ಮರಿಸಬೇಕು ಎಂದರು.
ದೇಶದಲ್ಲಿ 2,500 ರಾಜಕೀಯ ಪಗಳಿವೆ. ವಿವಿಧ ರಾಜ್ಯಗಳಲ್ಲಿ 20 ಪದವರು ಅಧಿಕಾರ ನಡೆಸುತ್ತಿದ್ದಾರೆ. ನಮ್ಮ ದೇಶದಲ್ಲಿ ವಿವಿಧ ಭಾಷೆ, ವಿವಿಧ ಸಂಸತಿಗಳಿದ್ದರೂ ಇಂದು ಭಾರತ ಅಖಂಡತೆಯಿಂದ ಇರಲು ಡಾ. ಬಿ.ಆರ್​. ಅಂಬೇಡ್ಕರ ಅವರು ರಚಿಸಿದ ಸಂವಿಧಾನ ಕಾರಣವಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಭಾರತ ದೇಶದ ಪ್ರತಿ ಪ್ರಜೆಗೂ ಸಾಮಾಜಿಕ, ಆಥಿರ್ಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದು ಸಂವಿಧಾನ ಉದ್ದೇಶವಾಗಿದೆ. ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರ್ಥೆಸಿಕೊಂಡು ಪಾಲಿಸಬೇಕು. ಚುನಾವಣೆ ಮೂಲಕ ಹೊಸ ಸರ್ಕಾರಗಳ ಆಯ್ಕೆ ಪ್ರಜಾಪ್ರಭುತ್ವದಲ್ಲಿ ಮಾತ್ರ ಮಾಡಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾನಹಕ್ಕು, ಪ್ರಜಾಸ್ವಾತಂತ್ರ$್ಯ ಹಾಗೂ ಕಾನೂನು ಸೌಲಭ್ಯ ಸೇರಿ ಅನೇಕ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ.
ಆದರೆ, ಬೇರೆ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಅವರಿಗೆ ಪ್ರಜಾಸ್ವಾತಂತ್ರ$್ಯ ಇರುವುದಿಲ್ಲ. ಪ್ರಜಾಪ್ರಭುತ್ವದ ಅರಿವು ಮೂಡಿಸಲು ಸರ್ಕಾರ ವಿನೂತನ ಕಾರ್ಯಕ್ರಮ ಹಾಕಿಕೊಂಡು ರಾಜ್ಯದ ಬೀದರ್​ ಜಿಲ್ಲೆಯಿಂದ ಚಾಮರಾಜನಗರವರೆಗೆ 2,500 ಕಿ.ಮೀ. ಮಾನವ ಸರಪಳಿ ನಿರ್ಮಾಣದಲ್ಲಿ 25 ಲ ಜನರ ಪಾಲ್ಗೊಳ್ಳುವಿಕೆ, 10 ಲ ಸಸಿ ನೆಡುವ ಮೂಲಕ ಅವಿಸ್ಮರಣೀಯವಾಗಿ ಆಚರಿಸಲಾಗುತ್ತಿದೆ ಎಂದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇಶ ಪ್ರೇಮ ಬಿಂಬಿಸುವ ಅನೇಕ ಹಾಡುಗಳಿಗೆ ವಿವಿಧ ಶಾಲಾ ಮಕ್ಕಳು ನೃತ್ಯಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ರಸ್ತೆ ಉದ್ದಕ್ಕೂ ಶಾಲಾ ಮಕ್ಕಳು, ಸಾರ್ವಜನಿಕರು, ವಿವಿಧ&ಸಂ&ಸಂಸ್ಥೆಗಳ ಪದಾಧಿಕಾರಿಗಳು ಉತ್ಸಾಹದಿಂದ ಮಾನವ ಸರಪಳಿ ನಿಮಿರ್ಸುವಲ್ಲಿ ಕೈ ಜೋಡಿಸಿದರು.
ಅಪರ ಜಿಲ್ಲಾ-ಧಿಕಾರಿ ಪೂಜಾರ ವೀರಮಲ್ಲಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯ ಎಸ್​.ಆರ್​. ಪಾಟೀಲ, ಹಾವೇರಿ ನಗರಸಭೆ ಅಧ್ಯೆ ಶಶಿಕಲಾ ಮಾಳಗಿ, ಉಪಾಧ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ, ಜಿಪಂ ಸಿಇಒ ಅಯ ಶ್ರೀಧರ, ಎಸ್ಪಿ ಅಂಶುಕುಮಾರ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net