ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ

Oplus_16908288
ವಿರಾಜಪೇಟೆಯಲ್ಲಿ ಆಯ್ದ ಅಂಗವಿಕಲರಿಗೆ ಶಾಸಕ ಎ.ಎಸ್.ಪೊನ್ನಣ್ಣ ದ್ವಿಚಕ್ರ ವಾಹನಗಳನ್ನು ಮಂಗಳವಾರ ವಿತರಿಸಿದರು. ರಂಜಿ ಪೂಣಚ್ಚ, ಶಬೀರ್, ಮಂಜುನಾಥ್, ಮಹದೇವ ಇತರರಿದ್ದರು.
Published on

ವಿರಾಜಪೇಟೆ: ವಿರಾಜಪೇಟೆಯಲ್ಲಿ ಕ್ಷೇತ್ರದ ಆಯ್ದ ಅರ್ಹ ಅಂಗವಿಕಲ ಫಲಾನುಭವಿಗಳಿಗೆ, ದ್ವಿಚಕ್ರ ವಾಹನವನ್ನು ವಿರಾಜಪೇಟೆ ಶಾಸಕರ ಎ.ಎಸ್ ಪೊನ್ನಣ್ಣ ವಿತರಿಸಿದರು.

ಶಾಸಕರ ವಿಶೇಷ ನಿಧಿಯಿಂದ ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದ ಶಾಸಕರು, ಸಮಾಜದಲ್ಲಿ ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ಈ ಸೌಲಭ್ಯ ಒದಗಿಸಲಾಗುತ್ತಿದೆ. ಅಂಗವಿಕಲರು ತಮ್ಮ ನ್ಯೂನ್ಯತೆಯನ್ನು ಮರೆತು ಸಮಾಜದಲ್ಲಿ ತಮ್ಮ ಕೈಲಾದ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕೆಂದು ಎಂದು ಕಿವಿಮಾತು ಹೇಳಿದರು.

ವಿಶೇಷ ಆದ್ಯತೆ ಮೇರೆಗೆ ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡಲು ಸದಾ ಸಿದ್ಧವಿರುವುದಗಿ ಹೇಳಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಪುರಸಭೆ ಸದಸ್ಯ ರಜಿನಿಕಾಂತ್, ರಾಫಿ, ಪಕ್ಷದ ಪ್ರಮುಖರು ಜೋಕಿಮ್, ಕುಂದಚೀರ ಮಂಜು ದೇವಯ್ಯ, ಶಬೀರ್, ಮಂಜುನಾಥ್, ಮಹದೇವ, ಅಂದಾಯಿ, ಅಧಿಕಾರಿಗಳು ಫಲಾನುಭವಿಗಳು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net