ನಾಟಿಕೋಳಿ ಸಾಕಣೆಯಿಂದ ಆರ್ಥಿಕ ಲಾಭ

09BTP01
Published on

ಬೆಟ್ಟದಪುರ: ನಾಟಿಕೋಳಿ ಸಾಕಣೆಯಿಂದ ಗ್ರಾಮೀಣ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆ ಮತ್ತು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯಿಂದ ಆಯೋಜಿಸಿದ್ದ ಗ್ರಾಮೀಣ ಮಹಿಳೆಯರಿಗೆ ಉಚಿತ ನಾಟಿ ಕೋಳಿಮರಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ತಾಲೂಕಿನ 80 ಜನರಿಗೆ ಮಾತ್ರ ಕೋಳಿಮರಿಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿ ನಮ್ಮ ತಾಲೂಕಿನ ಸಾವಿರ ಜನರಿಗೆ ವಿತರಣೆ ಮಾಡುವಂತೆ ತಿಳಿಸಿದ್ದೆ. ಈ ದಿನ 500 ಜನಕ್ಕೆ ಮಾತ್ರ ತಲಾ 20 ನಾಟಿಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ.

ಸದ್ಯದಲ್ಲೇ ಇನ್ನುಳಿದ 500 ಜನಕ್ಕೆ ಪಿರಿಯಾಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಿ ಅವರಿಗೆ ಕೋಳಿಮರಿ ವಿತರಿಸಲಾಗುವುದು ಎಂದು ಹೇಳಿದರು.
ನಾಟಿ ಕೋಳಿಮರಿಗಳನ್ನು ಕೊಡುವ ವಿಚಾರದಲ್ಲಿ ಕೆಲವರು ಹಾಸ್ಯ ಮಾಡಬಹುದು. ಆದರೆ ಮಹಿಳೆಯರು ಕೋಳಿ ಮರಿಗಳನ್ನು ಚೆನ್ನಾಗಿ ಆರೈಕೆ ಮಾಡಿ ಚಿಕ್ಕದಾಗಿ ಉದ್ಯಮ ಆರಂಭಿಸಿದರೆ ಆರ್ಥಿಕವಾಗಿ ಲಾಭ ಕಾಣಬಹುದು. ಈಗಾಗಲೇ ಕುಕ್ಕುಟ ಇಲಾಖೆಯಿಂದ ವಿತರಿಸುತ್ತಿರುವ ಕೋಳಿ ಮರಿಗಳಿಗೆ ಅಗತ್ಯವಾದ ಔಷಧಗಳನ್ನು ನೀಡಲಾಗಿದೆ ಎಂದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಕುಕ್ಕುಟ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಸರ್ಕಾರ ಮಟ್ಟದಲ್ಲಿ ಪ್ರೋತ್ಸಾಹ ಸಿಗುತ್ತಿದೆ ಎಂದರು.

ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಕರ್ನಾಟಕ ಸಹಕಾರ ಕುಕ್ಕುಟ ಮಂಡಳಿಯ ಉಪಾಧ್ಯಕ್ಷ ಹರೀಶ್, ವಿಭಾಗದ ಜಂಟಿ ನಿರ್ದೇಶಕ ವೀರಭದ್ರಯ್ಯ, ತಾಲೂಕು ಪಶುಸಂಗೋಪನಾ ಸಹಾಯಕ ನಿರ್ದೇಶಕ ಸೋಮಯ್ಯ, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮುಖಂಡರಾದ ಕುಂಜಪ್ಪ ಕಾರ್ನಾಡ್, ಸರಸ್ವತಿ, ಅನಿತಾ ತೋಟಪ್ಪಶೆಟ್ಟಿ, ಹೊಲದಪ್ಪ, ಬಿ.ಟಿ ಸಣ್ಣಸ್ವಾಮಿಗೌಡ, ಲೋಕೇಶ್, ಪುಟ್ಟರಾಜು, ಜವರೇಗೌಡ, ಸೋಮೇಗೌಡ, ಪರಮೇಶ್, ಶೇಖರ್, ಕುಮಾರ್, ತಹಸೀಲ್ದಾರ್ ಕುಂಜಿ ಅಹಮದ್, ಇ.ಒ ಸುನಿಲ್ ಕುಮಾರ್, ಫಲಾನುಭವಿಗಳು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net