ನಾಲ್ಕು ಸಾವಿರ ಗೇರು ಗಿಡಗಳ ವಿತರಣೆ

03Koppa01
ಹರಿಹರಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗೇರು ಗಿಡಗಳನ್ನು ವಿತರಿಸಲಾಯಿತು.
Published on

ಕೊಪ್ಪ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿಜಯಲಕ್ಷ್ಮೀ ಫೌಂಡೇಷನ್‌ನಿಂದ ಹರಿಹರಪುರ ಹಾಗೂ ಕೊಪ್ಪ ಭಾಗದಲ್ಲಿ ಭಾನುವಾರ ರೈತರಿಗೆ ಸುಮಾರು 4,000 ಗೇರು ಗಿಡಗಳನ್ನು ವಿತರಣೆ ಮಾಡಲಾಯಿತು.
ಕೃಷಿ ಮೇಲ್ವಿಚಾರಕ ದಿನೇಶ್ ಮಾತನಾಡಿ, ಪ್ರಸ್ತುತ ಅಡಕೆ ಗಿಡಗಳನ್ನು ಹೆಚ್ಚು ರೈತರು ನಾಟಿ ಮಾಡುತ್ತಿದ್ದಾರೆ. ಇದರ ಜತೆಗೆ ರೈತರು ಪರ್ಯಾಯ ಬೆಳೆಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಗೇರು, ಜಾಯಿಕಾಯಿ, ಲಿಂಬು, ಏಲಕ್ಕಿ, ಸಪೋಟ, ಇನ್ನಿತರ ಗಿಡಗಳನ್ನು ಬೆಳೆಯುವುದರಿಂದ ನಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಕಸಿಕಟ್ಟಿದ ಉತ್ತಮ ತಳಿಯ ಗೇರು ಗಿಡಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ಗಿಡದಿಂದ ಗಿಡಕ್ಕೆ 7 ಮೀಟರ್ ಅಂತರದಲ್ಲಿ ನಾಟಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಹರಿಹರಪುರ ವಲಯದ ಮೇಲ್ವಿಚಾರಕ ವಿಜಯಕುಮಾರ್, ಕೊಪ್ಪ ವಲಯ ಮೇಲ್ವಿಚಾರಕ ರವಿ, ಸೇವಾ ಪ್ರತಿನಿಧಿ ಜ್ಯೋತಿ, ರಾಧ, ಜ್ಯೋತಿ ಮತ್ತು ರೈತರು ಉಪಸ್ಥಿತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net