

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಂಘಕ್ಕೆ ಹಾಲು ಪೂರೈಸುತ್ತಿದ್ದು ಅಕಾಲಿಕ ಮರಣಹೊಂದಿದ ಸದಸ್ಯರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಸಂಘದ ಸದಸ್ಯ ಕೃಷ್ಣಶೆಟ್ಟಿ ಎಂಬುವರು ಇತ್ತೀಚೆಗೆ ಅಕಾಲಿಕ ಸಾವಿಗೀಡಾಗಿದ್ದರಿಂದ ಸಂಘದ ಧರ್ಮದರ್ಶಿನಿ ನಿಧಿಯಿಂದ 10 ಸಾವಿರ ರೂ.ಗಳ ಚೆಕ್‌ಅನ್ನು ಮೃತರ ಪತ್ನಿ ಗೌರಮ್ಮ ಅವರಿಗೆ ಡೇರಿ ಅಧ್ಯಕ್ಷ ಟಿ ಆರ್.ರಮೇಶ್ ನಾಯಕ ವಿತರಿಸಿದರು.
ಸಂಘದ ಕಾರ್ಯನಿರ್ವಾಹಕ ಎಂ.ಮಾದಪ್ಪ, ಮೇಲ್ವಿಚಾರಕ ಮಂಜೇಶ, ನಿರ್ದೇಶಕರಾದ ತಮ್ಮಯ್ಯ, ನಾಗರಾಜು, ಮಹೇಶನಾಯ್ಕ, ರಮೇಶ್, ಬಸವನಾಯ್ಕ ಹಾಗೂ ಇತರರು ಇದ್ದರು.