

ಮೈಸೂರು: ಶಾಸಕ ಕೆ.ಹರೀಶ್ ಗೌಡ ಅವರ ಜನ್ಮ ದಿನದ ಅಂಗವಾಗಿ ಮಂಚೇಗೌಡನ ಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟು ಪುಸ್ತಕ ಹಾಗೂ ಸಿಹಿ ವಿತರಣೆ ವಾಡಲಾಯಿತು.
ಕಾಂಗ್ರೆಸ್‌ನ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು ಇವರ ನೇತತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಶಾಸಕ ಕೆ.ಹರೀಶ್‌ಗೌಡ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಹರೀಶ್‌ಗೌಡ ವಾತನಾಡಿ, ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುವಾರು 450 ವಿದ್ಯಾರ್ಥಿಗಳು ಕಲಿಯುತ್ತಿರುವುದು ಸಂತಸದ ಸಂಗತಿ. ಈ ಶಾಲೆಗೆ ಏನೆಲ್ಲ ಅಭಿವೃದ್ಧಿ ಕೆಲಸಗಳಾಗಬೇಕು ಅದನ್ನು ನಾನು ವಾಡಿಕೊಡುತ್ತೇನೆ. ಈ ಬಾರಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಆಟದ ಮೈದಾನ ಅಭಿವೃದ್ಧಿಯನ್ನೂ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ರವಿ ಮಂಚೇಗೌಡನ ಕೊಪ್ಪಲು, ಡೆಲ್ಲಿ ರವಿ, ಮೂರ್ತಿ, ರಾಮಚಂದ್ರು, ಜಗದೀಶ್, ಕೇಬಲ್ ನಾಗರಾಜು, ಚೆಲುವೇಗೌಡ ಮತ್ತಿತರರಿದ್ದರು.