ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಕಿರುಕುಳಕ್ಕೆ ಯತ್ನಿಸಿದ ವ್ಯಕ್ತಿ: ಕೆಲವೇ ನಿಮಿಷಗಳಲ್ಲಿ ಅನಿರೀಕ್ಷಿತ ಟ್ವಿಸ್ಟ್..

lonely woman
ಸಾಂದರ್ಭಿಕ ಚಿತ್ರ
Published on

ನಂದ್ಯಾಲ: ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ತನಗೆ ಕಿರುಕುಳ ನೀಡಲು ಯತ್ನಿಸಿದ ಹಿನ್ನೆಲೆಯಲ್ಲಿ ರೈತ ಮಹಿಳೆಯೊಬ್ಬರು ದಿಶಾ ಆ್ಯಪ್ ಮೂಲಕ ಪೊಲೀಸರಿಗೆ ಮಾಹಿತಿ ತಲುಪಿಸಿ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲದಲ್ಲಿ ನಡೆದಿದೆ.

ಆಂಧ್ರಪ್ರದೇಶ ಸರ್ಕಾರವು ಮಹಿಳೆಯರ ರಕ್ಷಣೆಗಾಗಿ ವಿಶೇಷವಾಗಿ ದಿಶಾ ಆ್ಯಪ್​​ನ್ನು ತಂದಿದ್ದು, ಇದರ ಸಹಾಯದಿಂದ ಅಪಾಯದಲ್ಲಿರುವ ಅನೇಕ ಯುವತಿಯರು ಮತ್ತು ಹುಡುಗಿಯರನ್ನು ರಕ್ಷಿಸಲಾಗಿದೆ. ಶುಕ್ರವಾರದಂದು ಮಹಿಳೆ ಕಂಬಳೂರು ಗ್ರಾಮದ ಹೊರವಲಯದಲ್ಲಿರುವ ತನ್ನ ಹೊಲದಿಂದ ಹಿಂತಿರುಗುತ್ತಿದ್ದಾಗ ಅದೇ ಗ್ರಾಮದ ಪ್ರಸಾದ್ ಎಂಬ ವ್ಯಕ್ತಿ ನಿರ್ಜನ ಪ್ರದೇಶದಲ್ಲಿ ಕಿರುಕುಳ ನೀಡಲು ಯತ್ನಿಸಿದ್ದಾನೆ.

ಇದನ್ನೂ ಓದಿ: ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಮೊಬೈಲ್​ ಕಳ್ಳರು: ಕಂಬಕ್ಕೆ ಕಟ್ಟಿಹಾಕಿ ಥಳಿತ

ಬಳಿಕ ಆಕೆ ಸಹಾಯಕ್ಕಾಗಿ ಕೂಗಿಕೊಂಡಾಗ ಅಕ್ಕಪಕ್ಕದ ರೈತರು ಸ್ಥಳಕ್ಕೆ ಧಾವಿಸಿದ್ದು, ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸಂತ್ರಸ್ತ ಮಹಿಳೆ ಕೂಡಲೇ ದಿಶಾ ಎಸ್‌ಒಎಸ್‌ಗೆ ಕರೆ ಮಾಡಿ ಇಲ್ಲಿ ನಡೆದಿದ್ದನ್ನು ತಿಳಿಸಿದ್ದಾರೆ. ದಿಶಾ ಪೊಲೀಸರು ಹತ್ತೇ ನಿಮಿಷದಲ್ಲಿ ಸಂತ್ರಸ್ತೆ ಇರುವ ಪ್ರದೇಶವನ್ನು ತಲುಪಿದ್ದಾರೆ.

ತದನಂತರ ಆರೋಪಿಯು ಸಿರವೆಲ್ಲಾ ಕಡೆಗೆ ಪರಾರಿಯಾಗುತ್ತಿರುವುದು ಕಂಡು ಬಂದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಗ್ರಾಮ ಸಚಿವಾಲಯದ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ದಿಶಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಆ್ಯಪ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ವಿವರಿಸಿದರು. ಆ ವೇಳೆ ಆ್ಯಪ್ ಬಳಕೆ ಬಗ್ಗೆ ಸೆಕ್ರೆಟರಿಯೇಟ್ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದೆ ಎಂದು ದಿಶಾ ಹೇಳಿದ್ದಾರೆ. ಆದರೆ ಅದೇ ದಿಶಾ ಆಪ್ ಇಂದು ಅವರಿಗೆ ಬೆಂಬಲವಾಗಿ ನಿಂತಿದೆ.ಆ್ಯಪ್ ಈ ರೀತಿ ಉಪಯೋಗವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net