ಅಮೆರಿಕದಲ್ಲಿ ಭಾರತೀಯರಿಗೆ ತಾರತಮ್ಯ! ಸಮೀಕ್ಷೆಯಿಂದ ಸ್ಫೋಟಕ ಮಾಹಿತಿ ಬಯಲು

America
Published on

ವಾಷಿಂಗ್ಟನ್​: ಅಮೆರಿಕದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾದ ಭಾರತೀಯ ಮೂಲದವರು ದೊಡ್ಡ ಪ್ರಮಾಣದಲ್ಲಿ ತಾರತಮ್ಯ ಅನುಭವಿಸುತ್ತಿದ್ದಾರೆ ಎಂಬ ಆತಂಕದ ವಿಚಾರ ಸಮೀಕ್ಷೆ ಒಂದರಲ್ಲಿ ಬಯಲಾಗಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ನೇತೃತ್ವದಲ್ಲಿ ನಡೆದ ಈ ಸಮೀೆಯಲ್ಲಿ, ಅಮೆರಿಕದಲ್ಲಿ ನೆಲೆಸಿರುವ ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರು ಒಂದಿಲ್ಲೊಂದು ಸಂದರ್ಭದಲ್ಲಿ ತಾರತಮ್ಯ ನೀತಿಗೆ ಗುರಿಯಾಗಿದ್ದಾರೆ ಎಂಬುದು ಬಹಿರಂಗವಾಗಿದೆ. ಅಂದರೆ ಅಮೆರಿಕದಲ್ಲಿ ಶೇಕಡ 50 ಭಾರತೀಯ ಮೂಲದವರು ತಾರತಮ್ಯಕ್ಕೆ ತುತ್ತಾಗಿದ್ದಾರೆ.

1200 ಭಾರತೀಯ ಅಮೆರಿಕನ್ನರನ್ನು ಆನ್​ಲೈನ್​ ಮೂಲಕ ಸಂಪರ್ಕ ಮಾಡಿ, ಮಾಹಿತಿ ಕಲೆಹಾಕಲಾಗಿದೆ. 2020ರ ಸೆಪ್ಟೆಂಬರ್​ 1ರಿಂದ 20ರ ನಡುವೆ ಈ ಸಮೀೆ ನಡೆಸಲಾಗಿದೆ. ಕಳೆದೊಂದು ವರ್ಷದಿಂದ ಭಾರತೀಯ ಮೂಲದವರು ಮೇಲಿಂದ ಮೇಲೆ ತಾರತಮ್ಯಕ್ಕೆ ಗುರಿಯಾಗಿದ್ದಾರೆ. ಚರ್ಮದ ಬಣ್ಣ (ಕಪು$್ಪವರ್ಣೀಯರು) ಪ್ರಮುಖ ಕಾರಣಗಳಲ್ಲಿ ಒಂದು. ಅಮೆರಿಕದಲ್ಲಿ ಜನಿಸಿದ ಭಾರತೀಯ ಮೂಲದ ವ್ಯಕ್ತಿಗಳೇ ಹೆಚ್ಚು ತಾರತಮ್ಯಕ್ಕೆ ಒಳಗಾಗುತ್ತಿರುವ ವಿಚಾರ ಕಂಡುಬಂದಿದೆ. ಇತರ ದೇಶದ ಜನರಿಗೆ ಹೋಲಿಕೆ ಮಾಡಿದರೆ ಭಾರತೀಯರೇ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ ಎಂದು ಸಮೀೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಜಾತಿಯೂ ಕಾರಣ?: ಸರ್ವೇಗೆ ಪ್ರತಿಕ್ರಿಯೆ ನೀಡಿದ ಶೇ.50 ಮಂದಿ ತಮ್ಮನ್ನು ಜಾತಿ ಮೂಲಕ ಗುರುತಿಸಿಕೊಳ್ಳುತ್ತಾರೆ. 10ರಲ್ಲಿ 8 ಮಂದಿ ಸಾಮಾನ್ಯ ಅಥವಾ ಮೇಲ್ವರ್ಗಕ್ಕೆ ಸೇರಿದವರಾಗಿದ್ದಾರೆ. ಕ್ರಿಶ್ಚಿಯನ್​ ಬಾಹುಳ್ಯವಿರುವ ಅಮೆರಿಕದಲ್ಲಿ ಜಾತಿ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಕಾರಣ ಕೆಲ ಸಂದರ್ಭಗಳಲ್ಲಿ ತಾರತಮ್ಯ ಅನುಭವಿಸಬೇಕಾಗುತ್ತದೆ ಎಂದು ಸಮೀೆ ಪರೋಕ್ಷವಾಗಿ ಹೇಳಿದೆ.

ಅಮೆರಿಕದಲ್ಲಿ ಭಾರತೀಯರ ಸಂಖ್ಯೆ: ಅಮೆರಿಕದ ಒಟ್ಟು ಜನಸಂಖ್ಯೆಯ ಶೇ.1ಕ್ಕಿಂತ ತುಸು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಮೂಲದವರು ನೆಲೆಸಿದ್ದಾರೆ. ಒಟ್ಟು ಮತದಾರರಲ್ಲಿ ಶೇ. 1ಕ್ಕಿಂತ ತುಸು ಕಡಿಮೆ ಪ್ರಮಾಣದಲ್ಲಿ ಭಾರತೀಯ ಮೂಲದವರು ಇದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಎರಡನೇ ಅತಿದೊಡ್ಡ ಸಮುದಾಯ ಎಂಬ ಖ್ಯಾತಿಗೆ ಭಾರತೀಯ ಸಮುದಾಯ ಪಾತ್ರವಾಗಿದೆ. ಚೀನಾ ಮೊದಲ ಸ್ಥಾನದಲ್ಲಿದೆ.

2018 ಗಣತಿ ಪ್ರಕಾರ, 4.2 ಮಿಲಿಯನ್​ ಭಾರತೀಯ ಮೂಲದವರು ಅಮೆರಿಕದಲ್ಲಿ ನೆಲೆಸಿದ್ದಾರೆ.

ಭಾರತೀಯರೇ ಏಕೆ?

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಸಾಮಾನ್ಯವಾಗಿ ತಮ್ಮದೇ ಸಮುದಾಯದವರ ಜತೆ ವಿವಾಹ ಆಗುತ್ತಾರೆ. ಹೆಚ್ಚಿನವರು ಭಾರತದ ಆಚಾರ&ವಿಚಾರಗಳನ್ನು ಪಾಲಿಸುತ್ತಾರೆ. ಅವರು ಅಮೆರಿಕದಲ್ಲೇ ಜನಿಸಿದ್ದರೂ, ಸಂಪೂರ್ಣವಾಗಿ ಅಮೆರಿಕದ ಸಂಸತಿಯನ್ನು ಅಳವಡಿಕೆ ಮಾಡಿಕೊಂಡಿರುವುದಿಲ್ಲ. ಧಾರ್ಮಿಕ ಕಾರಣಕ್ಕಾಗಿಯೂ ಅವರು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಸಮೀೆ ತಿಳಿಸಿದೆ. ಸಮೀೆಗೆ ಒಳಪಟ್ಟ ಶೇ.40 ಜನರು ದಿನಕ್ಕೆ ಒಮ್ಮೆಯಾದರೂ ಮನೆಯಲ್ಲಿ ಪೂಜೆ ಮಾಡುತ್ತಾರೆ. ಶೇ.27 ಜನರು ವಾರಕ್ಕೆ ಒಮ್ಮೆಯಾದರೂ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net