ಅಂಗವಿಕಲ ಮಕ್ಕಳು ದೇವರಿದ್ದಂತೆ

fiesta programme
ಶಿವಮೊಗ್ಗದ ಕಂಟ್ರಿಕ್ಲಬ್ನಲ್ಲಿ ಬುದ್ಧಿಮಾಂಧ್ಯರು ಹಾಗೂ ಅಂಗವಿಕಲರ ಕಿಡ್ಸ್ ಫಿಯೆಸ್ಟಾ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಡಾ. ಧನಂಜಯ ಸರ್ಜಿ, ಡಾ. ಶಿವರಾಮಕೃಷ್ಣ, ಡಾ. ಕೆ.ಆರ್.ಶ್ರೀಧರ್, ಚುಡಾಮಣಿ ಪವಾರ್, ಡಾ. ಸ್ವರೂಪ್ ಮಲ್ಲೇಶ್ ಇದ್ದರು.
Published on

ಶಿವಮೊಗ್ಗ: ಅಂಗವಿಕಲ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ನಗರದ ಕಂಟ್ರಿಕ್ಲಬ್ನಲ್ಲಿ ಬುಧವಾರ ಸರ್ಜಿ ಫೌಂಡೇಶನ್ ಹಾಗೂ ರೌಂಡ್ ಟೇಬಲ್‌ನಿಂದ ಮಕ್ಕಳ ದಿನಾಚರಣೆ ಅಂಗವಾಗಿ ಬುದ್ಧಿಮಾಂಧ್ಯರು ಹಾಗೂ ಅಂಗವಿಕಲರ ಕಿಡ್ಸ್ ಫಿಯೆಸ್ಟಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೌಂಡ್ ಟೇಬಲ್ ಘಟಕವು ಸರ್ಕಾರದ ಜತೆಗೆ ಸೇರಿ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುತ್ತಾ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಅಭಿನಂದನೀಯ. ಹಾಗೆಯೇ ಅಂಗವಿಕಲ ಮಕ್ಕಳ ಕೊರತೆ ನೀಗಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ, ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಇಡೀ ಭಾರತದಲ್ಲಿ ಪ್ರತಿದಿನ ಸರಾಸರಿ ಎರಡು ಶಾಲಾ ಕೊಠಡಿ ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ಮಾಡುತ್ತಿರುವ ರೌಂಡ್ ಟೇಬಲ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಂತಹ ಸಂಸ್ಥೆಯಲ್ಲಿ ನಾನೂ ಒಬ್ಬ ಸದಸ್ಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.

ವೈದ್ಯ ಡಾ. ಪಿ.ನಾರಾಯಣ್, ನರರೋಗ ತಜ್ಞ ಡಾ. ಶಿವರಾಮಕೃಷ್ಣ, ಮನೋರೋಗ ತಜ್ಞ ಡಾ. ಕೆ.ಆರ್.ಶ್ರೀಧರ್, ಕಂಟ್ರಿಕ್ಲಬ್ನ ಉಪಾಧ್ಯಕ್ಷ ಚುಡಾಮಣಿ ಪವಾರ್, ಕಾರ್ಯಕ್ರಮ ಸಂಚಾಲಕರಾದ ಡಾ. ಸ್ವರೂಪ್ ಮಲ್ಲೇಶ್, ಶ್ರದ್ದಿತ್, ರೌಂಡ್ ಟೇಬಲ್ ಅಧ್ಯಕ್ಷ ಆದಿತ್ಯ ಆಚಾರ್ಯ, ಉಪಾಧ್ಯಕ್ಷ ಈಶ್ವರ್ ಸರ್ಜಿ, ಕಾರ್ಯದರ್ಶಿ ಗುರು ಹಂಜಿ ಹಾಜರಿದ್ದರು.

ಮನಗೆದ್ದ ಅಂಗವಿಕಲ ಮಕ್ಕಳು

ಶಾರದಾದೇವಿ ಅಂಧರ ವಿಕಾಸ, ಸರ್ಜಿ ಇನ್‌ಸ್ಟಿಟ್ಯೂಟ್‌ನ ಬುದ್ಧಿಮಾಂದ್ಯ ಮಕ್ಕಳು, ತರಂಗ ಶಾಲೆಯ ಕಿವುಡ ಮತ್ತು ಮೂಗ ಮಕ್ಕಳು, ಹ್ಯಾಪಿ ಹೋಂನ ಅಂಗವಿಕಲರು, ಮಾದವನೆಲೆ ಅನಾಥ ಮಕ್ಕಳು ಹಾಗೂ ತಾಯಿ ಮನೆಯ 170ಕ್ಕೂ ಮಕ್ಕಳು ಹಾಡು, ನೃತ್ಯ ಹಾಗೂ ಕಾಟನ್ ಕ್ಯಾಂಡಿ, ಚಾಕೋಲೇಟ್ ಫೌಂಟೆನ್, ಜಂಪಿಂಗ್ ಕ್ಯಾಸಲ್ ಸೇರಿ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರೆಕ್ಷಕರ ಮನ ಗೆದ್ದರು. ವಿವಿಧ ತಿನಿಸುಗಳನ್ನು ಸವಿದು ಸಂತಸಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net