ಪ್ರಿಯಾಂಕಾ ಚೋಪ್ರಾ ಸುಂದರವಾಗಿಲ್ಲ ಎಂದಿದ್ದರು: ನಟಿಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಹಿರಿಯ ನಿರ್ದೇಶಕ!

priyanka
Published on

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು ಎಂದು ಹಿರಿಯ ನಿರ್ದೇಶಕ ಗುಡ್ಡು ಧನೋವಾ ಹೇಳಿದ್ದಾರೆ.

ನಟನೆಯ ಅರಿವಿಲ್ಲದೆಯೇ ಪ್ರಿಯಾಂಕಾ ಸಿನಿ ಇಂಡಸ್ಟ್ರಿಗೆ ಕಾಲಿಟ್ಟರು. ಆಕೆಗೆ ಕಲಿಯಬೇಕೆಂಬ ಆಸೆ ಇತ್ತು. ನಾನು ಆಕೆಯೊಂದಿಗೆ 'ಬಿಗ್ ಬ್ರದರ್' ಸಿನಿಮಾ ಮಾಡಿದೆ. ಆ ಸಿನಿಮಾದ ಶೂಟಿಂಗ್ ವೇಳೆ ಪ್ರಿಯಾಂಕಾ ನನ್ನ ಬಳಿ ಬಂದು ‘ಸಾರ್.. ದಯವಿಟ್ಟು ಈ ಸೀನ್ ಮಾಡೋದು ಹೇಗೆ ಅಂತ ಹೇಳಿಕೊಡಿ’ ಎನ್ನುತ್ತಿದ್ದಳು. ತನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದಳು ಎಂದರು.

ಚಿತ್ರೀಕರಣವಾದ ಸುಮಾರು 20 ದಿನಗಳ ನಂತರ ಮುಂಬೈನಿಂದ ಆಕೆ ಸುಂದರವಾಗಿಲ್ಲ ಮತ್ತು ಆಕೆಯ ನಟನೆಯೂ ಚೆನ್ನಾಗಿಲ್ಲ ಎಂಬ ವರದಿಗಳು ಬಂದಿದ್ದವು. ಅಲ್ಲಿಯವರೆಗೂ ಮಾಡಿದ ರಷೇಸ್ ಶಾಟ್ ನೋಡುವಂತೆ ಸೂಚಿಸಿದರು. ಅದರಂತೆ ಸನ್ನೀದೇವೋಲ್​ ಮತ್ತು ನಾನು ರಷೇಸ್ ನೋಡಿ ಆಕೆಯೊಂದಿಗೇ ಈ ಚಿತ್ರ ಮಾಡಲು ನಿರ್ಧರಿಸಿದೆವು. ಆಕೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ರೀತಿ ನಮಗೆ ಇಷ್ಟವಾಯಿತು. ಆಕೆ ತನ್ನ ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾಳೆ ಎಂದು ಅಂದೇ ನಾವು ಅಂದುಕೊಂಡಿದ್ದೆವು ಎಂದು ಅವರು ಹೇಳಿದರು.

ವಿಜಯ್ ಅಭಿನಯದ 'ತಮಿಳನ್' ಚಿತ್ರದ ಮೂಲಕ ಪ್ರಿಯಾಂಕಾ ಅವರು ನಟನೆಗೆ ಪಾದಾರ್ಪಣೆ ಮಾಡಿದರು. ಆ ಚಿತ್ರದ ನಂತರ ಅವರು ಬಾಲಿವುಡ್‌ಗೆ ಎಂಟ್ರಿಕೊಟ್ಟರು. ಸಲ್ಮಾನ್, ಶಾರುಖ್, ಅಕ್ಷಯ್ ಕುಮಾರ್, ಅಜಯ್ ಜಗನ್ ಅವರಂತಹ ಯುವ ನಾಯಕರೊಂದಿಗೆ ತೆರೆ ಹಂಚಿಕೊಂಡರು. ನಿಕ್ ಜೋನಾಸ್ ಅವರನ್ನು ಮದುವೆಯಾದ ನಂತರ, ಅವರು ವಿದೇಶದಲ್ಲಿ ನೆಲೆಸಿದರು. ಪ್ರಸ್ತುತ ಹಾಲಿವುಡ್ ಯೋಜನೆಗಳಿಗೆ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net