ಕಾಮಿಡಿ ಜಾನರ್‌ನ ‘ಜಂಬೂ ಸರ್ಕಸ್’: ಎಂ.ಡಿ.ಶ್ರೀಧರ್ ನಿರ್ದೇಶನದ ಸಿನಿಮಾ

jambu
Published on

ಬೆಂಗಳೂರು: ‘ಚೆಲ್ಲಾಟ’, ‘ಕೃಷ್ಣ’, ‘ಪೊರ್ಕಿ’, ‘ಬುಲ್ ಬುಲ್’ ಹಾಗೂ ‘ಒಡೆಯ’ ನಿರ್ದೇಶಕ ಎಂ.ಡಿ.ಶ್ರೀಧರ್ ಬಹು ದಿನಗಳ ಬಳಿಕ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ‘ಜಂಬೂ ಸರ್ಕಸ್’ ಎಂದು ಹೆಸರಿಡಲಾಗಿದ್ದು, ಇದೊಂದು ಕಾಮಿಡಿ ಜಾನರ್ ಸಿನಿಮಾವಾಗಿದೆ.

‘ಜಿಗರ್’ ಖ್ಯಾತಿಯ ಪ್ರವೀಣ್ ತೇಜ್ ನಾಯಕ ನಟನಾಗಿದ್ದು, ‘ಪದವಿ ಪೂರ್ವ’ ಖ್ಯಾತಿಯ ಅಂಜಲಿ ಎಸ್.ಅನೀಶ್ ಜೋಡಿಯಾಗಿದ್ದಾರೆ. ಸ್ನೇಹ ಹಾಗೂ ಪ್ರೀತಿಯ ಮಹತ್ವ ಸಾರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗೊಡೆಗೊಂಡಿದೆ.

ನಿರ್ದೇಶಕ ಶ್ರೀಧರ್, ‘‘ಒಡೆಯ’ ಗ್ಯಾಪ್ ಬಳಿಕ ಈ ಸಿನಿಮಾ ನಿರ್ದೇಶಿಸುತ್ತಿದ್ದೇನೆ. ಇದು ಗೆಳೆಯರಿಬ್ಬರ ಕಥೆ. ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ. ಒಂದೇ ಮಂಟಪದಲ್ಲಿ ಒಂದೇ ದಿನ ಮದುವೆ ಆಗುತ್ತಾರೆ. ಒಂದೇ ಏರಿಯಾದಲ್ಲಿ ಮನೆ ಮಾಡುತ್ತಾರೆ. ಕೊನೆಗೆ ಅವರಿಗೆ ಒಂದೇ ದಿನ ಮಕ್ಕಳು ಆಗುತ್ತವೆ. ಇವರ ಗೆಳೆತನ ಅವರ ಹೆಂಡತಿಯರಿಗೆ ಇಷ್ಟ ಇರಲ್ಲ. ಹಾಗಾಗಿ ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ದಾಯಾದಿಗಳಂತೆ ಬೆಳೆದ ನಾಯಕ-ನಾಯಕಿ ಮುಂದೆ ಏನೆಲ್ಲ ಮಾಡುತ್ತಾರೆ ಎಂಬುದೇ ಕಥೆ. ಮೂರು ೈಟ್, ಸಾಂಗ್‌ಗಳಿವೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ’ ಎಂದರು.

ನಾಯಕ ಪ್ರವೀಣ್, ‘ನನ್ನ ಮೊದಲ ಸಿನಿಮಾದ ನಿರ್ದೇಶಕರ ಜತೆ ಮತ್ತೆ ಕೆಲಸ ಮಾಡಿರುವುದು ವಿಶೇಷವಾಗಿದೆ’ ಎಂದರು. ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅಚ್ಯುತ್‌ಕುಮಾರ್, ಕುಮಾರ್, ರವಿಶಂಕರ್ ಗೌಡ, ಅವಿನಾಶ್ ಕಲಾ ಬಳಗದಲ್ಲಿದ್ದಾರೆ. ಚಿತ್ರಕ್ಕೆ ಕೃಷ್ಣಕುಮಾರ್ ಛಾಯಾಗ್ರಹಣ, ರಘ ನಿಡುವಳ್ಳಿ ಸಂಭಾಷಣೆ, ಜ್ಲಾನೇಶ್ ಸಂಕಲನ, ಜಯಂತ್ ಕಾಯ್ಕಿಣಿ, ಡಾ.ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ, ವಾಸುಕಿ ವೈಭವ್ ಸಂಗೀತ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net