ಇದೆಲ್ಲಾ ನನಗೇನು ಹೊಸದಲ್ಲ! ಇದೇ ಜೀವನವೂ ಅಲ್ಲ: ನಿರ್ದೇಶಕನ ಖಡಕ್​ ಮಾತಿಗೆ ನೆಟ್ಟಿಗರು ಫಿದಾ

ವಿಜಯವಾಣಿ - 2024-08-19T161710.767
Published on

ತೆಲಂಗಾಣ: ಸೆಲೆಬ್ರಿಟಿ ಅಂದಮೇಲೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರಲೇಬೇಕು. ಒಂದು ಸಿನಿಮಾ ಟೈಟಲ್​ನಿಂದ ಹಿಡಿದು ಚಿತ್ರೀಕರಣ, ಹೊಸ ಅಪ್ಡೇಟ್​, ಲಿರಿಕಲ್​ ಹಾಡುಗಳು, ಟೀಸರ್​, ಟ್ರೇಲರ್​ ಹೀಗೆ ಹಲವಾರು ಮಾಹಿತಿಗಳನ್ನು ಇದೇ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು. ಆಯಾ ಚಿತ್ರತಂಡ ಹಾಕುವ ವಿಷಯಗಳು ಪ್ರತಿಯೊಬ್ಬರಿಗೂ ಮೆಚ್ಚುಗೆ ಆಗಬೇಕು ಎಂದೇನಿಲ್ಲ. ಕೆಲವರಿಗೆ ಇಷ್ಟವಾಗದೆ ಇರಬಹುದು. ಇನ್ನೂ ಕೆಲವರು ಅದನ್ನು ಟ್ರೋಲ್ ಮೂಲಕ ಟೀಕೆಯೂ ಮಾಡಬಹುದು. ಇದು ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಆಗಿದೆ. ಸಾಮಾನ್ಯವಾಗಿ ಟ್ರೋಲ್​ ಎಂಬ ವಿಷಯ ಬಂದಾಗ ಅದು ನಟ ಅಥವಾ ನಟಿಗೆ ಹೆಚ್ಚಾಗಿ ಮೀಸಲಿರುತ್ತದೆ. ಆದ್ರೆ, ಇಲ್ಲೊಬ್ಬರು ಚಿತ್ರ ನಿರ್ದೇಶಕರು ನಾನು ನಟ-ನಟಿಯರಿಗಿಂತಲೂ ಹೆಚ್ಚು ಟ್ರೋಲ್​, ಟೀಕೆಗಳನ್ನು ಎದುರಿಸಿದ್ದೇನೆ ಎಂದಿದ್ದಾರೆ.

ತೆಲುಗು ಚಿತ್ರ ನಿರ್ದೇಶಕ ಹರೀಶ್​ ಶಂಕರ್​ ಇತ್ತೀಚೆಗಷ್ಟೇ ತಮ್ಮ ಮಿಸ್ಟರ್​ ಬಚ್ಚನ್​ ಸಿನಿಮಾ ಕುರಿತಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದು, ತಮ್ಮ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವರು ಕೆಟ್ಟ ಅಭಿಪ್ರಾಯಗಳನ್ನು ಹಾಕುವುದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಟ್ರೋಲ್​ ಮೂಲಕ ನೆಗೆಟಿವ್​ ಕಮೆಂಟ್ ಮಾಡೋದು, ಇದೆಲ್ಲವೂ ನನ್ನ ಗಮನಕ್ಕೆ ಬಂದಿದೆ. ಆದ್ರೆ, ಇದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕೆ ರಿಯಾಕ್ಟ್ ಕೂಡ ಮಾಡೋಲ್ಲ ಎಂದರು.

ಇಂತಹ ಟ್ರೋಲ್​, ಟೀಕೆಗಳನ್ನು ಆದಷ್ಟು ಕಡೆಗಣಿಸುವುದು ಒಳ್ಳೆಯ ಅಭ್ಯಾಸ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ನೆಗೆಟಿವ್ ಟ್ರೋಲ್​ಗಳು ನನಗೇನು ಹೊಸದಲ್ಲ. ಇದು ನನ್ನ ಜೀವನವೂ ಅಲ್ಲ. ಕೆಟ್ಟ ಪೋಸ್ಟ್​ಗಳನ್ನು ನೋಡಿದ್ದೇನೆ, ವ್ಯಂಗ್ಯವಾಡುವ ಟೀಕೆಗಳನ್ನು ಎದುರಿಸಿದ್ದೇನೆ. ಒಂದಷ್ಟು ಟ್ರೋಲ್​ಗಳು ವೈಯಕ್ತಿಕವಾಗಿ ನನ್ನನ್ನೇ ಟಾರ್ಗೆಟ್​ ಮಾಡಿದ್ದು, ನನ್ನನ್ನು ಬಹಳ ಕೆಟ್ಟದಾಗಿ ತೋರಿಸುವ ಪ್ರಯತ್ನ ನಡೆಸುತ್ತಿದೆ ಎಂದು ತಮ್ಮ ಚಿತ್ರದ ಬಗ್ಗೆ ಮಾತನಾಡುವಾಗ ಒಂದಷ್ಟು ವಿಚಾರಗಳಿಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net