Director Arrested | ತಿರುಪತಿ ಬಳಿಕ ಪಳನಿ ದೇವಸ್ಥಾನ ಪ್ರದಾದದಲ್ಲೂ ವಿವಾದ?: ತಮಿಳು ನಿರ್ದೇಶಕ ಬಂಧನ!

palani temple tamil directer arrested
Published on

ಚೆನ್ನೈ: ಪಳನಿ ದೇವಸ್ಥಾನದಲ್ಲಿ ನೀಡುವ 'ಪಂಚಾಮೃತ' ಪ್ರಸಾದಕ್ಕೆ ಪುರುಷರಲ್ಲಿ ದುರ್ಬಲತೆ ಉಂಟುಮಾಡುವ ಔಷಧಿ ಬೆರೆಸಿದ್ದಾರೆ ಎಂದು ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮೋಹನ್ ಜಿ ( Director Arrested ) ಅವರನ್ನು ಬಂಧಿಸಲಾಗಿದೆ.

ತಿರುಮಲ ಶ್ರೀವಾರಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬೆರಸಿದ್ದಾರೆ ಎಂಬ ಆರೋಪದ ಬಗ್ಗೆ ಯೂಟ್ಯೂಬ್‌ ಚಾನೆಲ್‌ವೊಂದರ ಸಂದರ್ಶನದಲ್ಲಿ ಮೋಹನ್‌ ಮಾತನಾಡಿದ್ದರು.

ಈ ಸಂದರ್ಭದಲ್ಲಿ ಪಳನಿ ದೇವಸ್ಥಾನದಲ್ಲಿ ಬಡಿಸುವ ಪಂಚಾಮೃತ ಪ್ರಸಾದಕ್ಕೆ ಪುರುಷರಲ್ಲಿ ದುರ್ಬಲತೆ ಉಂಟುಮಾಡುವ ಔಷಧಿ ಬೆರಸಲಾಗಿದೆ ಎಂದು ಆರೋಪಿಸಿದ್ದರು. ಅವರ ಈ ಹೇಳಿಕೆಯನ್ನು ಆಧರಿಸಿ ತಿರುಚ್ಚಿ ಸೈಬರ್‌ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಂಗಳವಾರ ಚೆನ್ನೈನಲ್ಲಿ ಬಂಧಿಸಿದ್ದು, ತಿರುಚ್ಚಿಗೆ ಕರೆತರಲಾಗುವುದು ಎಂದು ತಿರುಚ್ಚಿ ಜಿಲ್ಲಾ ವರಿಷ್ಠಾಧಿಕಾರಿ ವರುಣ್ ಕುಮಾರ್ ತಿಳಿಸಿದ್ದಾರೆ.

ನಿರ್ದೇಶಕ ಮೋಹನ್‌ ಸಂದರ್ಶನದಲ್ಲಿ ಮಾತನಾಡುವಾಗ, ತಮಿಳುನಾಡಿನಲ್ಲೂ ಇಂತಹ ಘಟನೆಗಳು ನಡೆದಿವೆ. ಪಳನಿ ದೇವಸ್ಥಾನ ಪ್ರಸಾದದಲ್ಲಿ ಪುರುಷರಲ್ಲಿ ಶಕ್ತಿಹೀನತೆ ಉಂಟುಮಾಡುವ ಔಷಧ ಬೆರಸಿದ್ದರು ಅಂತ ಕೇಳಿದ್ದೆ. ಆದ್ರೆ ಅದನ್ನು ಮರೆಮಾಚಲಾಯಿತು. ನಮ್ಮ ಬಳಿ ಸಾಕ್ಷಿಯಿಲ್ಲದ ಕಾರಣ ಏನನ್ನೂ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಪಂಚಾಮೃತದ ಬಗ್ಗೆ ಸುಳ್ಳು ಹಬ್ಬಿಸಿದರೆ ಕಠಿಣ ಕ್ರಮ Director Arrested

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂ ಧಾರ್ಮಿಕ ಮತ್ತು ಧರ್ಮ ದತ್ತಿ ಸಚಿವ ಸೇಕರ್ ಬಾಬು, ಪಳನಿ ದೇವಸ್ಥಾನದ ಪಂಚಾಮೃತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

tamilnadu palani telmle

2016ರಲ್ಲಿ ಪಜ್ಯ ವನ್ನರಪೆಟ್ಟೈ ಚಿತ್ರದ ಮೂಲಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮೋಹನ್ ಜಿ. ಅನೇಕ ಹಿಟ್ಸ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 2020ರಲ್ಲಿ ಇವರು ದ್ರೌಪತಿ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಅಲ್ಲದೇ ‘ರುದ್ರ ತಾಂಡವಂ’, ‘ಬಕಾಸುರನ್’ ಅಂತಹ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.

ತಿರುಪತಿ ದೇವಸ್ಥಾನದಲ್ಲಿ ಪ್ರಾಣಿಯ ಕೊಬ್ಬು ಬಳಕೆ ಕನ್ಫರ್ಮ್ : ಸಿಎಂ

ಜಗತ್ತಿನ ಅತ್ಯಂತ ಪ್ರಸಿದ್ಧ ದೇಗುಲ ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂದು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದರು. ಬಳಿಕ ತಿಮ್ಮಪ್ಪನ ಪ್ರಸಾದ ಲಡ್ಡುವಿಗೆ ಬಳಸೋ ತುಪ್ಪದಲ್ಲಿ ಮೀನಿನ ಎಣ್ಣೆ, ಬೀಫ್ ಟ್ಯಾಲೋ ಮತ್ತು ಹಂದಿ ಕೊಬ್ಬು ಇತ್ತು ಎಂದು ಲ್ಯಾಬ್​ ರಿಪೋರ್ಟ್​ ಧೃಡಪಡಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಆಂಧ್ರದ ಡಿಸಿಎಂ ಪವನ್​ ಕಲ್ಯಾಣ್​​​ ಅವರು ತಿರುಪತಿ ತಿಮ್ಮಪ್ಪನ ಕ್ಷಮೆ ಕೋರಿದ್ದಾರೆ. ಅಷ್ಟೇ ಅಲ್ಲದೇ ಇಂದಿನಿಂದ 11 ದಿನಗಳ ಕಾಲ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ಇದರ ಮಧ್ಯೆ ತಮಿಳು ನಟ ಕಾರ್ತಿಯವರು ಈ ಬಗ್ಗೆ ಮಾತಾಡಿದ್ದು, ಭಾರೀ ಸದ್ದು ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net