ಭೂಮಿ ಮೇಲಿದ ಡೈನೋಸಾರ್‌ನ ಸೋದರ ಸಂಬಂಧಿ! ಅದರಲ್ಲೂ ಇವೆ 23 ಉಪಜಾತಿ

crocodile
Published on

ಮುಂದುವರಿದ ಭಾಗ...

ನೀರಿನಲ್ಲಿ ಹಾದು ಹೋಗುವ ಪ್ರಾಣಿಗಳನ್ನು ಮೊಸಳೆ ಹಿಡಿದು ತಿನ್ನುವ ಸನ್ನಿವೇಶವನ್ನು ನೋಡಿದಾಗ, ಮೊಸಳೆ ಖಳನಾಯಕನನ್ನಾಗಿ ಊಹಿಸಿಕೊಳ್ಳುತ್ತೇವೆ. ಆದರೆ ಅದೇ ರೀತಿ ಈ ಪ್ರಾಣಿಗಳನ್ನು ಮನುಷ್ಯ ತಿನ್ನುವಾಗ ಯಾರೂ ಮರುಕಪಡುವುದಿಲ್ಲ. ಮೊಸಳೆಗಳು ಕೆರೆ, ನದಿ ಮತ್ತು ಕಡಲ ತೀರದ ಪರಿಸರ ಮತ್ತು ಅಲ್ಲಿ ವಾಸಿಸುವ ಪ್ರಾಣಿಗಳನ್ನು ಬೇಟೆಯಾಡಿ ಆ ಸಂತತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತವೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ.

ಮೊಸಳೆ ಸರೀಸೃಪ ಮತ್ತು ಮಾಂಸಾಹಾರಿ, ಇದು ಡೈನೋಸರ್‌ನ ಸೋದರ ಸಂಬಂಧಿ. ಮೊಸಳೆ ಕಳೆದ ಇಪ್ಪತ್ತು ಕೋಟಿ ವರ್ಷಗಳ ಅಂತರದಲ್ಲಿ ಹಲವಾರು ಪ್ರಳಯಗಳನ್ನು ಎದುರಿಸಿ ಬದುಕಿ 23 ಉಪಜಾತಿಗಳಾಗಿ ವಿಂಗಡಣೆಯಾಗಿ ವಿಕಾಸಗೊಂಡಿವೆ. ಇವುಗಳ ಉಪಜಾತಿಯ ಆಕಾರ, ರೂಪ, ಅಭ್ಯಾಸಗಳು ಮತ್ತು ಜೀವನಶೈಲಿಯಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಕೆಲವು ಸಿಹಿ ನೀರಿನಲ್ಲಿ ವಾಸಿಸುತ್ತವೆ, ಇನ್ನು ಕೆಲವು ಉಪ್ಪು ನೀರಿನಲ್ಲಿ ವಾಸಿಸುತ್ತವೆ, ಕೆಲವು ಗಲೀಜು ನೀರಿನಲ್ಲಿ ವಾಸಿಸುತ್ತವೆ. ಇವು ಅಂದಾಜು ಐನೂರರಿಂದ ಸಾವಿರ ಕೆ.ಜಿ. ತೂಕ ಹೊಂದಿರುತ್ತವೆ.

ಇವುಗಳು ಬೇಟೆಯಾಡುವುದಲ್ಲದೆ ನೀರಿನಲ್ಲಿ ಸತ್ತ ಪ್ರಾಣಿಗಳ ದೇಹವನ್ನು ತಿಂದು ನೀರನ್ನು ಸ್ವಚ್ಛ ಮಾಡುತ್ತವೆ. ಇತರ ಪ್ರಾಣಿಗಳು ನದಿಯ ನೀರನ್ನು ದಾಟುವಾಗ ಕಾರಣಾಂತರಗಳಿಂದ ಸತ್ತುಹೋಗುತ್ತವೆ. ಆ ದೇಹವು ನೀರಿನಲ್ಲಿ ಕರಗಿ ನೀರನ್ನು ಕಲುಷಿತಗೊಳಿಸುತ್ತದೆ ಮತ್ತು ಹಲವು ಕಿ.ಮೀ. ದೂರದವರೆಗೆ ತೇಲಿ ಬರುತ್ತವೆ. ಅಂತಹ ಕೊಳೆತ ದೇಹವನ್ನು ಈ ಮೊಸಳೆಗಳು ತಿನ್ನುತ್ತವೆ. ಕೆಲವೊಮ್ಮೆ ಸತ್ತ ದೇಹದಲ್ಲಿ ಹಲವು ರೀತಿಯ ಬ್ಯಾಕ್ಟೀರಿಯ, ಕ್ರಿಮಿ ಕೀಟಗಳು ಉತ್ಪಾದನೆಯಾಗಿ ವಾಸನೆ ಬರಲಾರಂಬಿಸಿದ ಮೇಲೆ ಅದನ್ನು ತಿನ್ನುತ್ತವೆ. ಕೊಳೆತ ದೇಹವನ್ನು ಮೊಸಳೆಗಳು ತಿಂದು ಕರಗಿಸಿ ನದಿಯ ನೀರನ್ನು ಶುದ್ಧಗೊಳಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net