ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಾಲದ ಸಹಾಯ ದೊರೆಯಲಿದೆ

Nitya-Bhavisya-FILEminimizer
Published on

ಮೇಷ: ರಾಜಕೀಯದವರಿಂದ ಅನುಕೂಲ. ಅಪಮಾನ. ಆತ್ಮಗೌರವಕ್ಕಾಗಿ ಸ್ನೆಹಿತರಿಂದ ದೂರ. ಮಕ್ಕಳ ನಡವಳಿಕೆಯಿಂದ ಬೇಸರ. ಶುಭಸಂಖ್ಯೆ: 5

ವೃಷಭ: ಕುಟುಂಬದವರೊಂದಿಗೆ ಮನಸ್ತಾಪ. ಮಾನಸಿಕ ವೇದನೆ. ಆರೋಗ್ಯದಲ್ಲಿ ವ್ಯತ್ಯಾಸ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ಶುಭಸಂಖ್ಯೆ: 9

ಮಿಥುನ: ಅನಿರೀಕ್ಷಿತ ಪ್ರಯಾಣ. ವೈಯಕ್ತಿಕ ವಿಷಯದಲ್ಲಿ ಸಮಸ್ಯೆ. ಪ್ರಯಾಣದಲ್ಲಿ ಅನನುಕೂಲ. ಮಕ್ಕಳ ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 3

ಕಟಕ: ಆರ್ಥಿಕವಾಗಿ ಮೋಸ. ಭೂಮಿ ಖರೀದಿಯಲ್ಲಿ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಸ್ನೇಹಿತರ ನಡುವೆ ಸಮಸ್ಯೆ. ಶುಭಸಂಖ್ಯೆ: 3

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಗೌರವಕ್ಕೆ ಧಕ್ಕೆ. ಭೂ ವ್ಯವಹಾರದಲ್ಲಿ ಸ್ಪರ್ಧೆ. ಇಂಧನ ನಷ್ಟ. ಪ್ರೇಮದ ವಿಷಯಗಳಿಂದ ಚಿಂತೆ. ಶುಭಸಂಖ್ಯೆ: 7

ಕನ್ಯಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ನಿದ್ರಾಭಂಗ. ಕೆಟ್ಟ ಕನಸುಗಳು ಬೀಳುವವು. ಶುಭಸಂಖ್ಯೆ: 2

ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆಯಾಗುವರು. ಆತ್ಮಗೌರವಕ್ಕೆ ಚ್ಯುತಿ ಬರುವ ಸಾಧ್ಯತೆ. ಉತ್ತಮ ಅವಕಾಶಗಳು ಪ್ರಾಪ್ತಿ. ಶುಭಸಂಖ್ಯೆ: 1

ವೃಶ್ಚಿಕ: ದುರಾಲೋಚನೆಗಳನ್ನು ನಿಯಂತ್ರಿಸಿಕೊಳ್ಳಿ. ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಶುಭಸಂಖ್ಯೆ: 9

ಧನಸ್ಸು: ಸಾಲದ ಸಹಾಯ ದೊರೆಯಲಿದೆ. ಮಾನಸಿಕ ವೇದನೆ. ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ. ಕುಲದೇವತಾ ದರ್ಶನ ಮಾಡುವಿರಿ. ಶುಭಸಂಖ್ಯೆ: 3

ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ಸಮಸ್ಯೆ. ಆತ್ಮೀಯರು, ಪ್ರೀತಿಪಾತ್ರರು ದೂರ. ಭಾವನೆಗಳಿಗೆ ಕಲ್ಪನೆಗಳಿಗೆ ಪೆಟ್ಟು. ಶುಭಸಂಖ್ಯೆ: 6

ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ. ದಾಂಪತ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತನೆಗಳು ಮತ್ತು ಆತಂಕ ಕಾಡೀತು. ಶಕ್ತಿ ದೇವತೆಗಳ ದರ್ಶನ. ಶುಭಸಂಖ್ಯೆ: 9

ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ ಸೃಷ್ಟಿಯಾಗಿ ಬೇಸರ. ಮಕ್ಕಳು ಪೆಟ್ಟು ಮಾಡಿಕೊಳ್ಳುವರು. ಆರೋಗ್ಯದಲ್ಲಿ ಏರುಪೇರು ಆದೀತು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net