

ಮೇಷ: ಕೃಷಿಕರಿಗೆ ಅನುಕೂಲ. ಧನಾಗಮನ. ಮಾತಿನಿಂದ ಕಲಹ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ. ಶುಭಸಂಖ್ಯೆ: 5
ವೃಷಭ: ಸಾಲ ಮಾಡುವ ಪರಿಸ್ಥಿತಿ. ಭಾವನೆ, ಆಸೆ-ಆಕಾಂಕ್ಷೆಗಳಿಗೆ ಬೆಲೆ ದೊರೆಯುವುದು. ಕಾರ್ಯ ನಿಮಿತ್ತ ಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ: 8
ಮಿಥುನ: ಅಧಿಕ ಖರ್ಚು ಮಾಡಬೇಕಾದ ಸ್ಥಿತಿ. ಪತ್ರ ವ್ಯವಹಾರಗಳಿಗೆ ಅಡೆತಡೆಗಳು. ಸ್ನೇಹಿತರಿಂದ ಧನಸಹಾಯ ಒದಗಿಬರಲಿದೆ. ಶುಭಸಂಖ್ಯೆ: 4
ಕಟಕ: ಸ್ವಯಂಕೃತ ಅಪರಾಧದಿಂದ ಸಂಕಷ್ಟ. ದೂರ ಪ್ರಯಾಣ ಮಾಡಬೇಕಾಗುವುದು. ಅಧಿಕ ನಷ್ಟ. ಸಾಲ ಮಾಡುವ ಸಂದರ್ಭ. ಶುಭಸಂಖ್ಯೆ: 2
ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಕಚೇರಿಯಲ್ಲಿ ಮಾನ ಅಪಮಾನಗಳು. ನಿದ್ರಾಭಂಗ. ಸಹೋದರರೊಂದಿಗೆ ಕಲಹ. ಶುಭಸಂಖ್ಯೆ: 6
ಕನ್ಯಾ: ತಂದೆಯಿಂದ ಲಾಭ ಮತ್ತು ಅನುಕೂಲ. ಮಿತ್ರರೊಂದಿಗೆ ಮನಸ್ತಾಪ. ದಾಯಾದಿ ಕಲಹಗಳು. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 1
ತುಲಾ: ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಇದೆ. ಕೋರ್ಟ್ ಕೇಸುಗಳಲ್ಲಿ ಜಯ ನಿಮ್ಮ ಕಡೆಗಿದೆ. ಆರ್ಥಿಕ ಅವ್ಯವಸ್ಥೆ ಉಂಟಾದೀತು. ಶುಭಸಂಖ್ಯೆ: 1
ವೃಶ್ಚಿಕ: ದಾಂಪತ್ಯದಲ್ಲಿ ಕಲಹ ಮತ್ತು ನೋವು. ಮಕ್ಕಳ ಬಗ್ಗೆ ಆತಂಕ ಕಾಡುವುದು. ಹಳೆಯ ವಸ್ತುಗಳ ಮಾರಾಟದಿಂದ ಅಧಿಕ ಲಾಭ. ಶುಭಸಂಖ್ಯೆ: 9
ಧನಸ್ಸು: ಆಕಸ್ಮಿಕವಾಗಿ ಅದೃಷ್ಟ ಒಲಿದು ಬರಲಿದೆ. ವಿಶ್ರಾಂತಿ ವೇತನ ಲಭ್ಯ. ಉದ್ಯೋಗ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ. ಶುಭಸಂಖ್ಯೆ: 4
ಮಕರ: ಸಂಗಾತಿಯಿಂದ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ. ಕಲಾವಿದರಿಗೆ ಒಳ್ಳೆಯ ಅವಕಾಶಗಳು. ರೋಗ ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ: 8
ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ. ಸಾಲದಿಂದ ತೊಂದರೆಯಾದೀತು. ಅಪ ನಿಂದನೆಗಳು. ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ. ಶುಭಸಂಖ್ಯೆ: 6
ಮೀನ: ಅಂದುಕೊಂಡಿದ್ದ ಆಕಾಂಕ್ಷೆ ಗಳಿಗೆ ಬೆಲೆ ಸಿಗಲಿದೆ. ಪತ್ರ ವ್ಯವಹಾರಗಳಿಂದ ಅನುಕೂಲ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 3