ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ

Nitya Bhavisya Vijayavani
Published on

ಮೇಷ: ಸರ್ಕಾರಿ ಕೆಲಸಗಳಲ್ಲಿ ನಿರಾಸಕ್ತಿ. ಅಲಂಕಾರಿಕ ವಸ್ತುಗಳನ್ನು ಮಾರುವವರಿಗೆ ಆದಾಯ. ಪಶು ಆಹಾರ ತಯಾರಕರಿಗೆ ಲಾಭ. ಶುಭಸಂಖ್ಯೆ: 1

ವೃಷಭ:  ಮನೆಯಲ್ಲಿ ಸಂತಸದ ವಾತಾವರಣ. ಪ್ರವಾಸ ಕೈಗೊಳ್ಳುವಿರಿ. ಆಸ್ತಿ ವಿಚಾರದಲ್ಲಿ ದೃಢ ತೀರ್ಮಾನ ತೆಗೆದುಕೊಳ್ಳುವುದು ಕ್ಷೇಮ. ಶುಭಸಂಖ್ಯೆ: 8

ಮಿಥುನ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ರಾಜಕೀಯ ಪ್ರವೇಶಕ್ಕೆ ಸುಸಮಯ. ವಕೀಲರಿಗೆ ಆರ್ಥಿಕವಾಗಿ ಲಾಭದ ದಿನ. ಶುಭಸಂಖ್ಯೆ: 4

ಕಟಕ: ಅವಿವಾಹಿತರಿಗೆ ಶುಭ ಸುದ್ದಿ. ಅನಿರೀಕ್ಷಿತ ಧನಾಗಮನ. ದಿನಸಿ ಪದಾರ್ಥ ವ್ಯಾಪಾರ ಚುರುಕು ಸರ್ಕಾರಿ ಕೆಲಸದಲ್ಲಿ ಜಯ. ಶುಭಸಂಖ್ಯೆ:7

ಸಿಂಹ:  ಆಸ್ತಿ ಖರೀದಿಗೆ ಇದು ಸಕಾಲವಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಕಲಾವಿದರ ಪ್ರಗತಿಗೆ ತಡೆ. ಶುಭಸಂಖ್ಯೆ: 2

ಕನ್ಯಾ: ಹೊಸ ಯೋಜನೆ ಮುಂದೂಡಿ. ಹಿತ ಶತ್ರುಗಳ ಬಾಧೆ. ಕುಟುಂಬದಲ್ಲಿ ಶಾಂತಿ. ನಾಟಕ, ಯಕ್ಷಗಾನ ಕಲಾವಿದರಿಗೆ ಗೌರವ. ಶುಭಸಂಖ್ಯೆ:9

ತುಲಾ: ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯಲಿದೆ.ಆರ್ಥಿಕ ಪ್ರಗತಿಯಲ್ಲಿ ಇಳಿಮುಖ. ಗಣ್ಯ ಅಧಿಕಾರಿಗಳ ಭೇಟಿಯಿಂದ ಲಾಭ. ಶುಭಸಂಖ್ಯೆ: 3

ವೃಶ್ಚಿಕ: ಗೃಹ ನಿರ್ವಣದ ಬಗ್ಗೆ ಯೋಚನೆ ಮಾಡುವಿರಿ. ಹೈನು ವ್ಯಾಪಾರದಲ್ಲಿ ಹಿನ್ನಡೆಯಾದೀತು. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:2

ಧನಸ್ಸು: ಕಲಾವಿದರಿಗೆ ಮತ್ತು ಗಾಯಕರಿಗೆ ವಿಶೇಷ ದಿನ. ಭೂ ವ್ಯವಹಾರದಲ್ಲಿ ಶ್ರಮ ಹೆಚ್ಚಾಗಲಿದೆ. ಆಪ್ತರು ದೂರವಾಗುವ ಸಾಧ್ಯತೆ. ಶುಭಸಂಖ್ಯೆ: 1

ಮಕರ: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ. ಬಂಧುಗಳಿಂದ ತೊಂದರೆ. ವ್ಯಾಪಾರದಲ್ಲಿ ಇಳಿಮುಖ. ಸಾರ್ವಜನಿಕವಾಗಿ ಅವಮಾನ. ಶುಭಸಂಖ್ಯೆ: 4

ಕುಂಭ: ಅನವಶ್ಯಕ ಖರ್ಚು ಆದೀತು. ಕೃಷಿಕರಿಗೆ ಶುಭ. ಗುರುಹಿರಿಯರಿಂದ ಸಹಾಯ ಪಡೆದುಕೊಳ್ಳಿ. ವಿದ್ಯಾರ್ಥಿಗಳಿಗೆ ಚಿಂತೆ. ಶುಭಸಂಖ್ಯೆ:9

ಮೀನ: ಮಹತ್ವಾಕಾಂಕ್ಷೆಯ ಯೋಜನೆಯಾದ ಮಗಳ ವಿದ್ಯಾಭ್ಯಾಸದತ್ತ ಗಮನಹರಿಸಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net