ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಸ್ತಿ ಮಾರಾಟದಲ್ಲಿ ವಿಶೇಷ ಲಾಭ

Nitya Bhavisya Vijayavani
Published on

ಮೇಷ: ವಾಹನ ಮಾರಾಟದಲ್ಲಿ ಅಧಿಕ ಲಾಭ. ಭತ್ತದ ಬೇಸಾಯಗಾರರಿಗೆ ಬೆಳೆ ನಷ್ಟ ಪರಿಹಾರ ಸಿಗಲಿದೆ. ರಕ್ಷಣಾ ಕ್ಷೇತ್ರದವರಿಗೆ ಒತ್ತಡ. ಶುಭಸಂಖ್ಯೆ: 7

ವೃಷಭ: ಹೊಸ ಉದ್ಯೋಗ ಬಿಡುವ ಸಂದರ್ಭ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಅನಾಥರ ಸೇವೆಯಲ್ಲಿ ತೊಡಗಿಸಿಕೊಳ್ಳುವಿರಿ. ಶುಭಸಂಖ್ಯೆ: 1

ಮಿಥುನ: ಆಸ್ತಿ ಮಾರಾಟದಲ್ಲಿ ವಿಶೇಷ ಲಾಭವಿದೆ. ಒಡವೆ ಸಂಬಂಧಿತ ತಕರಾರು ಬರಬಹುದು. ಕುಲದೇವರ ದರ್ಶನಕ್ಕೆ ದೂರ ಪ್ರಯಾಣ. ಶುಭಸಂಖ್ಯೆ:2

ಕಟಕ: ಹೊಸ ಉದ್ಯೋಗದಲ್ಲಿ ಶಾಂತಿ. ವ್ಯಾಪಾರ ಮಳಿಗೆ ಸ್ಥಳಾಂತರ ಮಾಡಬೇಕಾಗಬಹುದು. ಬ್ಯಾಂಕ್ ವೃತ್ತಿಯವರಿಗೆ ವರ್ಗಾವಣೆ. ಶುಭಸಂಖ್ಯೆ: 4

ಸಿಂಹ: ಆದಾಯ ತೆರಿಗೆ ಇಲಾಖೆಯ ಉದ್ಯೋಗ ದೊರೆಯಲಿದೆ. ತರಕಾರಿ, ಹಣ್ಣು ವ್ಯಾಪಾರದಲ್ಲಿ ಸಾಕಷ್ಟು ಹಣ ಸಂಪಾದನೆಯಾಗಲಿದೆ. ಶುಭಸಂಖ್ಯೆ: 7

ಕನ್ಯಾ: ವಿಚ್ಛೇದನ ಪ್ರಕರಣ ಇತ್ಯರ್ಥ. ಗೃಹ ನಿರ್ವಣ, ಮಾರಾಟದಲ್ಲಿ ಅಧಿಕ ಲಾಭ. ಮದುವೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ:5

ತುಲಾ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಸಹೋದ್ಯೋಗಿಗಳಿಗಾಗಿ ಹಣ ದುಂದು ವೆಚ್ಚ. ಪಿತ್ರಾರ್ಜಿತ ಆಸ್ತಿ ಹಂಚಿಕೆ ಆಗಲಿದೆ. ಶುಭಸಂಖ್ಯೆ: 8

ವೃಶ್ಚಿಕ: ಲೋಹಗಳ ವ್ಯಾಪಾರದಲ್ಲಿ ಲಾಭ. ಮಾಡೆಲಿಂಗ್ ಕ್ಷೇತ್ರಕ್ಕೆ ಪದಾರ್ಪಣೆ. ಕೈಮಗ್ಗದ ಉತ್ಪನ್ನಗಳ ಮಾರಾಟದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ:9

ಧನಸ್ಸು: ಅರಣ್ಯ ಉತ್ಪನ್ನ ವ್ಯಾಪಾರದಲ್ಲಿ ಅಭಿವೃದ್ಧಿ. ವಾಣಿಜ್ಯ ವಿದ್ಯಾರ್ಥಿಗಳಿಗೆ ಲಾಭದ ದಿನ. ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 2

ಮಕರ: ಬಟ್ಟೆ ಕಾರ್ಖಾನೆ ಕೆಲಸಗಾರರಿಗೆ ಅತಂತ್ರ ಸ್ಥಿತಿ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರಲಿದೆ. ನಿಮ್ಮ ಪ್ರತಿಭೆ ಅನಾವರಣಗೊಳ್ಳಲಿದೆ. ಶುಭಸಂಖ್ಯೆ:6

ಕುಂಭ: ಖರ್ಚು ನಿಯಂತ್ರಿಸಿ ಹಣ ಉಳಿಸುವಿರಿ. ಪ್ರಭಾವಿ ವ್ಯಕ್ತಿಗಳ ಜತೆ ಸಂಪರ್ಕ. ದಿನಾಂತ್ಯದಲ್ಲಿ ಆತ್ಮೀಯರ ಜೊತೆಗೆ ಔತಣ ಕೂಟ. ಶುಭಸಂಖ್ಯೆ: 2

ಮೀನ: ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ. ಗೃಹ ನಿರ್ವಣಕ್ಕೆ ತಂದೆಯಿಂದ ಸಹಾಯ. ಚಲನಚಿತ್ರ ನಟರಿಗೆ ಉತ್ತಮ ಹೆಸರು ಸಿಗಲಿದೆ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net