ಶಮಿ ಬೆನ್ನಲ್ಲೇ ಅಜಿಂಕ್ಯಾ ರಹಾನೆ ಗರಂ! ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿನುಡಿ | Ajinkya Rahane

ajit
Published on

ನವದೆಹಲಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ತಮ್ಮನ್ನು ಕೈಬಿಟ್ಟ ಅಜಿತ್ ಅಗರ್ಕರ್​​ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ವೇಗಿ ಮೊಹಮ್ಮದ್​ ಶಮಿ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದರು. ಫಿಟ್​ ಆಗಿದ್ದರೂ ತಂಡದಿಂದ ಹೊರಗಿಟ್ಟಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಇದೀಗ ಟೀಮ್ ಇಂಡಿಯಾ ಕ್ರಿಕೆಟಿಗ ಅಜಿಂಕ್ಯಾ ರಹಾನೆ (Ajinkya Rahane) ಕೂಡ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.

"ವಯಸ್ಸು ಒಂದು ಸಂಖ್ಯೆಯಷ್ಟೇ! ಒಬ್ಬ ಆಟಗಾರನಾಗಿ ನಿಮಗೆ ಅನುಭವವಿದ್ದರೆ, ಅದರಲ್ಲೂ ದೇಶಿಯ ಕ್ರಿಕೆಟ್​ ಅನ್ನು ಇಂದಿಗೂ ಆಡುತ್ತಿದ್ದರೆ ಮತ್ತು ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಖಂಡಿತ ನಿಮ್ಮನ್ನು ಬಿಸಿಸಿಐ ಆಯ್ಕೆಗೆ ಪರಿಗಣಿಸಬೇಕು. ಇಷ್ಟು ವರ್ಷಗಳ ಕಾಲ ಕ್ರಿಕೆಟ್​ ಆಡಿರುವ ನನಗೆ, ಅನುಭವಿ ಆಟಗಾರರನ್ನು ತಂಡದಿಂದ ಕೈಬಿಡುವ ಪ್ರವೃತ್ತಿ ನೋಡಿದಾಗ ಬೇಸರವಾಗುತ್ತೆ. ನನ್ನ ಪ್ರಕಾರ, ನಾವು ಅವಕಾಶಕ್ಕೆ ಅರ್ಹರು. ಆದರೆ, ಸಂಪರ್ಕವೇ ಇಲ್ಲ ಅನ್ನೋದು ಬೇಸರದ ಸಂಗತಿ" ಎಂದಿದ್ದಾರೆ ರಹಾನೆ.

"ಈಗಲೂ ಆಟವನ್ನು ಆನಂದಿಸುತ್ತೀನಿ. ನನ್ನಿಂದ ಎಷ್ಟು ಬೆಸ್ಟ್​ ಕೊಡಲು ಸಾಧ್ಯವೋ, ಅದನ್ನು ಕೊಡುವುದಷ್ಟೇ ನನ್ನ ಧ್ಯೇಯ. ಅವರ ಆಯ್ಕೆಯಿಂದ ನಾನು ದೂರವಿದ್ದರೂ ನನಗನಿಸಿದ್ದು, ಆಸೀಸ್​ ಸರಣಿಗೆ ನನ್ನನ್ನು ಪರಿಗಣಿಸಬೇಕಿತ್ತು. ಕಾರಣ, ನಾನು ಸಂಪೂರ್ಣವಾಗಿ ಸಜ್ಜಾಗಿದ್ದೆ" ಎಂದು ರಹಾನೆ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net