ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪಿತ್ರಾರ್ಜಿತ ಆಸ್ತಿ ಹಂಚಿಕೆಗೆ ಸಂಧಾನ ಸೂತ್ರ

Nitya Bhavisya Vijayavani
Published on

ಮೇಷ: ನಿರುದ್ಯೋಗಿಗಳಿಗೆ ಉದ್ಯೋಗ. ಹಾರ್ಡ್​ವೇರ್ ಅಂಗಡಿ ಮಾಲೀಕರಿಗೆ ಲಾಭ. ಪಿತ್ರಾರ್ಜಿತ ಆಸ್ತಿ ಹಂಚಿಕೆಗೆ ಸಂಧಾನ ಸೂತ್ರ. ಶುಭಸಂಖ್ಯೆ:1

ವೃಷಭ: ಕೈಮಗ್ಗದ ಮಾಲೀಕರಿಗೆ ಸಹಾಯ ಸಿಗಲಿದೆ. ಉನ್ನತ ವೈದ್ಯಕೀಯ ವಿದ್ಯಾಭ್ಯಾಸದ ಕನಸು ಸಾಕಾರ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:9

ಮಿಥುನ: ಕೇಂದ್ರ ಸರ್ಕಾರಿ ಮಹಿಳಾ ನೌಕರರಿಗೆ ಬಡ್ತಿ. ಸಗಟು ವ್ಯಾಪಾರದಲ್ಲಿ ಲಾಭ. ಧಾರ್ವಿುಕ ಕ್ಷೇತ್ರದ ಕೆಲಸಗಾರರಿಗೆ ಸಾಮಾಜಿಕ ಕೀರ್ತಿ. ಶುಭಸಂಖ್ಯೆ:7

ಕಟಕ: ಯಕ್ಷಗಾನ ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಟೆನ್ನಿಸ್ ಕ್ರೀಡಾಳುಗಳಿಗೆ ಸನ್ಮಾನ. ಬರಹಗಾರರಿಗೆ ಹಣದ ಮುಗ್ಗಟ್ಟು. ಶುಭಸಂಖ್ಯೆ:5

ಸಿಂಹ: ಹಸು -ಕುರಿ ಸಾಕಾಣಿಕೆಯಲ್ಲಿ ಆದಾಯ ಹೆಚ್ಚಲಿದೆ. ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ. ಆರಕ್ಷಕರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ:3

ಕನ್ಯಾ: ಉಡುಪುಗಳ ಮಾರಾಟದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ. ಆಭರಣ ಖರೀದಿ ಮುಂದೂಡಿ. ಉದ್ಯೋಗಿ ಸ್ತ್ರೀಯರಿಗೆ ಹಣ ಲಾಭ. ಶುಭಸಂಖ್ಯೆ:6

ತುಲಾ: ನಿವೇಶನ ಖರೀದಿಗೆ ಸೂಕ್ತ ಸಮಯ. ಕೋರ್ಟಿನಲ್ಲಿದ್ದ ದಾಂಪತ್ಯ ವಿವಾದ ಇತ್ಯರ್ಥ. ಸಾಲ ತೀರಿಸಲು ಮಾರ್ಗ ಗೋಚರ. ಶುಭಸಂಖ್ಯೆ:2

ವೃಶ್ಚಿಕ: ವಾಹನ ಚಾಲನೆಯಲ್ಲಿ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಇದ್ದ ಗೊಂದಲ ನಿವಾರಣೆ. ಮನೆ ನಿರ್ಮಾಣ ಕಾರ್ಯ ಪ್ರಾರಂಭ. ಶುಭಸಂಖ್ಯೆ:8

ಧನಸ್ಸು: ಕುಟುಂಬದೊಂದಿಗೆ ರ್ಚಚಿಸಿ ನಿರ್ಧಾರ ಕೈಗೊಳ್ಳಿ. ಸರ್ಕಾರಿ ಉದ್ಯೋಗದಲ್ಲಿ ಪ್ರಗತಿ. ರಾಜಕೀಯ ನೇತಾರರಿಗೆ ಜನಪ್ರಿಯತೆ. ಶುಭಸಂಖ್ಯೆ:9

ಮಕರ: ಯಂತ್ರೋಪಕರಣಗಳ ಖರೀದಿಯಲ್ಲಿ ಕೃಷಿಕರಿಗೆ ಲಾಭ. ಜೇನು ಕೃಷಿಯಿಂದ ಆದಾಯ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ:3

ಕುಂಭ: ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗ ಪ್ರಾಪ್ತಿ. ವಿದೇಶದಲ್ಲಿರುವ ಮಕ್ಕಳಿಂದ ಸಹಾಯ. ಅನಾರೋಗ್ಯದಿಂದ ತಂದೆ ಚೇತರಿಕೆ. ಶುಭಸಂಖ್ಯೆ: 7

ಮೀನ: ಸಹೋದ್ಯೋಗಿಗಳಿಂದ ಕೆಲಸಕ್ಕೆ ಸಹಾಯ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಉದ್ಯೋಗ ಬದಲಾವಣೆಗೆ ಸೂಕ್ತ ಸಮಯ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net