

ಮೇಷ: ಕೆಲವು ವಿಚಾರಗಳಲ್ಲಿ ಅತೃಪ್ತಿ. ಭೂ ವ್ಯವಹಾರಗಳಲ್ಲಿ ಮೋಸ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಹಿರಿಯರಿಂದ ಮನ್ನಣೆ. ಶುಭಸಂಖ್ಯೆ: 9
ವೃಷಭ: ವಾಹನ ಚಾಲಕರಿಗೆ ಫಲದಾಯಕ ದಿನ. ಪ್ರಯಾಣ ದಿಂದ ಆರೋಗ್ಯದಲ್ಲಿ ತೊಂದರೆ. ಶತ್ರುಗಳ ಕಾಟ ಜಾಸ್ತಿಯಾಗಬಹುದು. ಶುಭಸಂಖ್ಯೆ:1
ಮಿಥುನ: ಬಂಧುಗಳಿಂದ ಅಶುಭವಾರ್ತೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ. ಹಣಕಾಸಿನ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 8
ಕಟಕ: ಸ್ಟಾಕ್-ಷೇರು ವ್ಯವಹಾರದಲ್ಲಿ ಅಭಿವೃದ್ಧಿ, ಸ್ನೇಹಿತರೊಂದಿಗೆ ವಾಗ್ವಾದ, ನೀರು ಸರಬರಾಜು ವ್ಯಾಪಾರದಲ್ಲಿ ಲಾಭ ಬರುವುದು. ಶುಭಸಂಖ್ಯೆ: 5
ಸಿಂಹ: ಆಸ್ಪತ್ರೆ ಉದ್ಯೋಗಿಗಳಿಗೆ ಅಶುಭ, ದುರ್ಬಲ ಮನಸ್ಸಿನಿಂದ ಕೌಟುಂಬಿಕ ಸಮಸ್ಯೆ. ಮುದ್ರಣ ಮಾಧ್ಯಮದಲ್ಲಿ ಲಾಭವಿದೆ. ಶುಭಸಂಖ್ಯೆ:6
ಕನ್ಯಾ: ಉದ್ಯೋಗದಲ್ಲಿ ಪ್ರಯತ್ನದಿಂದ ಯಶಸ್ಸು. ನಾನಾ ರೀತಿಯ ಚಿಂತೆ ಕಾಡಲಿದೆ. ಆಹಾರ ಸೇವನೆಯಲ್ಲಿ ವಿಶೇಷ ಎಚ್ಚರಿಕೆ ಇರಲಿ. ಶುಭಸಂಖ್ಯೆ:3
ತುಲಾ: ಆಲಸ್ಯ ಮನೋಭಾವದಿಂದ ಹೊರಬನ್ನಿ. ವಕೀಲರಿಗೆ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಂಪ್ಯೂಟರ್ ವ್ಯಾಪಾರಿಗಳಿಗೆ ತೊಂದರೆ. ಶುಭಸಂಖ್ಯೆ: 6
ವೃಶ್ಚಿಕ: ಸಂತಸದಿಂದ ಇರಲು ಪ್ರಯತ್ನಿಸಿ ಸೋತು ಹೋಗುವಿರಿ. ವಾದ ವಿವಾದಗಳಲ್ಲಿ ಜಯವಿದೆ. ಕೌಟುಂಬಿಕ ಕಲಹ ಅಧಿಕ. ಶುಭಸಂಖ್ಯೆ: 4
ಧನಸ್ಸು: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಮೇಲಧಿಕಾರಿಗಳಿಂದ ಮಾರ್ಗದರ್ಶನ ಸಿಗಲಿದೆ. ಆದಾಯದಲ್ಲಿ ಸ್ಥಿರತೆ. ಶುಭಸಂಖ್ಯೆ: 8
ಮಕರ: ಸಮಾಜ ಸೇವೆಯಲ್ಲಿ ಆಸಕ್ತಿ. ಹಣ ಹೂಡಿಕೆಯಲ್ಲಿ ಎಚ್ಚರ. ಸ್ಥಳೀಯ ಮಂಡಳಿಯ ಸ್ಪರ್ಧೆಯಲ್ಲಿ ಸೋಲುಂಟಾಗುವ ಸಾಧ್ಯತೆ. ಶುಭಸಂಖ್ಯೆ: 4
ಕುಂಭ: ಕಾಫಿ ಮತ್ತು ಅಡಿಕೆ ಕೃಷಿಕರಿಗೆ ಹೆಚ್ಚಿನ ಲಾಭವಾಗುವುದು. ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿ. ಗಣ್ಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ: 6
ಮೀನ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ಹಿತಶತ್ರುಗಳಿಂದ ಪದವಿಗೆ ಅಡೆತಡೆ. ವಾಹನ ಮಾಲೀಕರಿಗೆ ಲಾಭ. ಶುಭಸಂಖ್ಯೆ: 2