

ಮೇಷ: ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ. ಲೋಹಗಳ ವ್ಯಾಪಾರದಲ್ಲಿ ಲಾಭ. ತರಕಾರಿ ಮತ್ತು ಹಣ್ಣು ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 9
ವೃಷಭ: ಪ್ರಭಾವಿ ವ್ಯಕ್ತಿಗಳಿಂದ ಸಹಾಯ. ಹಿತಶತ್ರುಗಳಿಂದ ಅಪಪ್ರಚಾರ. ಮನೆ ದುರಸ್ತಿಗೆ ವೆಚ್ಚ. ಅನಿರೀಕ್ಷಿತವಾಗಿ ಆತ್ಮೀಯರ ಭೇಟಿ. ಶುಭಸಂಖ್ಯೆ: 1
ಮಿಥುನ: ಉತ್ತಮ ನಿವೇಶನ ಲಭ್ಯ. ನ್ಯಾಯಾಲಯದ ಕೆಲಸಗಳಲ್ಲಿ ನಿಧಾನ. ಹತ್ತಿರದ ಬಂಧುಗಳಿಂದ ನೆರವು. ಆರಕ್ಷಕ ವೃತ್ತಿಯಲ್ಲಿ ಬೇಸರ. ಶುಭಸಂಖ್ಯೆ: 8
ಕಟಕ: ಐಟಿ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ. ಆದಾಯ ತೆರಿಗೆಯವರಿಂದ ಒತ್ತಡ. ಕಲಾವಿದರಿಗೆ ವಿಶೇಷ ಅವಕಾಶ. ಶುಭಸಂಖ್ಯೆ: 8
ಸಿಂಹ: ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ವೈದ್ಯರಿಗೆ ವಿಶೇಷ ದಿನ. ಕಲಕುಶಲಕರ್ವಿುಗಳಿಗೆ ಲಾಭ. ರೇಷ್ಮೆ ಕೃಷಿಕರಿಗೆ ವಿಶೇಷ ದಿನ. ಶುಭಸಂಖ್ಯೆ:3
ಕನ್ಯಾ: ಪಿತ್ರಾರ್ಜಿತ ಆಸ್ತಿ ಹಂಚಿಕೆಯಲ್ಲಿ ವಿವಾದ. ಮಹಿಳೆಯರಿಗೆ ವಸ್ತ್ರ ಲಾಭ. ವಿಮಾನ ನಿಲ್ದಾಣ ಉದ್ಯೋಗಿಗಳಿಗೆ ಅತಂತ್ರ ಸ್ಥಿತಿ. ಶುಭಸಂಖ್ಯೆ:7
ತುಲಾ: ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ. ಮಾಧ್ಯಮದಲ್ಲಿ ಬಂಡವಾಳ ಹೂಡಿಕೆಗೆ ನಿರ್ಧಾರ. ಹೋಟೆಲ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 7
ವೃಶ್ಚಿಕ: ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ವಾಹನದಿಂದ ಚಿಕ್ಕಪುಟ್ಟ ಗಾಯ. ಕೃಷಿಕರಿಗೆ ಬೆಳೆ ನಷ್ಟದ ಭೀತಿ. ಇಷ್ಟ ದೇವರನ್ನು ಸ್ಮರಿಸಿ. ಶುಭಸಂಖ್ಯೆ: 5
ಧನಸ್ಸು: ವೈದ್ಯರಿಂದ ಶಸ್ತ್ರ ಚಿಕಿತ್ಸೆಯ ಸಲಹೆ ಸಿಗಲಿದೆ. ಶತ್ರುಗಳ ಸಮಾಧಾನಕ್ಕೆ ಯತ್ನ ಮಾಡುವಿರಿ. ಹೂವು, ಹಣ್ಣಿನ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ:4
ಮಕರ: ಮಕ್ಕಳ ವಿವಾಹದ ಚಿಂತೆ ಕಾಡಲಿದೆ. ಅಧಿಕಾರ ಅಯಾಚಿತವಾಗಿ ಸಿಗಲಿದೆ. ವಿಶೇಷ ವೇದಿಕೆ ಲಭ್ಯ. ದಿನಸಿ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 9
ಕುಂಭ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪದವಿ ಪ್ರಾಪ್ತಿ. ವಾಹನ ಮಾಲೀಕರಿಗೆ ಧನ ನಷ್ಟ. ಧಾರ್ವಿುಕ ಕ್ಷೇತ್ರದಲ್ಲಿರುವವರಿಗೆ ವಿಶೇಷ ದಿನ. ಶುಭಸಂಖ್ಯೆ: 2
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ ಸಾಧ್ಯತೆ. ಕಟ್ಟಡಗಳ ಕಟ್ಟಿ ಮಾರುವವರಿಗೆ ಅಧಿಕ ಧನ ಲಾಭ. ಹಳೇ ಸ್ನೇಹಿತರ ಭೇಟಿ. ಶುಭಸಂಖ್ಯೆ: 5