ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಋಣವಿಮೋಚನೆ

Nitya Bhavisya Vijayavani
Published on

ಮೇಷ: ಕಲಾಕ್ಷೇತ್ರದವರಿಗೆ ಒತ್ತಡ. ಋಣವಿಮೋಚನೆ. ವಾಹನ ಮಾಲೀಕರಿಗೆ ಅನುಕೂಲ. ದೈವಾನುಗ್ರಹದಿಂದ ಕೆಲಸ ನೆರವೇರುವುದು. ಶುಭಸಂಖ್ಯೆ: 6

ವೃಷಭ: ಗೃಹ ನಿರ್ಮಾಣ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಶತ್ರುಬಾಧೆ ನಿವಾರಣೆ. ಮೇಲಧಿಕಾರಿಗಳಿಂದ ಕಿರುಕುಳ. ತೀರ್ಥ ಕ್ಷೇತ್ರ ದರ್ಶನ. ಶುಭಸಂಖ್ಯೆ: 9

ಮಿಥುನ: ಕೃಷಿಕರಿಗೆ ಲಾಭ. ಊರಜಾತ್ರೆಯ ಸಂಭ್ರಮ. ಹಾಲು ವ್ಯಾಪಾರದಲ್ಲಿ ಆದಾಯ. ಸಕಾಲಕ್ಕೆ ಭೋಜನ ಮಾಡಲಾಗದಷ್ಟು ಕೆಲಸ. ಶುಭಸಂಖ್ಯೆ: 7

ಕಟಕ: ಹಿರಿಯರ ಭೇಟಿ. ವಾಹನ ರಿಪೇರಿಗೆ ಖರ್ಚು. ಖಾಸಗಿ ಉದ್ಯೋಗಿಗಳಿಗೆ ಆದಾಯಕ್ಕಿಂತ ಖರ್ಚು ಜಾಸ್ತಿ. ವಿವಾಹಕ್ಕೆ ಅಡೆತಡೆ. ಶುಭಸಂಖ್ಯೆ: 3

ಸಿಂಹ: ಕುಟುಂಬದಲ್ಲಿ ಆಶಾಂತಿ. ಶಿಕ್ಷಕರಿಗೆ ವಿಶೇಷ ದಿನ. ವಿದೇಶದಿಂದ ಮಕ್ಕಳ ಆಗಮನ. ಸಹೋದ್ಯೋಗಿಗಳೊಂದಿಗೆ ವೈಮನಸ್ಸು. ಶುಭಸಂಖ್ಯೆ:5

ಕನ್ಯಾ: ಶರೀರದಲ್ಲಿ ತಳಮಳ. ಆತ್ಮೀಯರಲ್ಲಿ ವಿಶ್ವಾಸ. ಬುದ್ಧಿಶಕ್ತಿಯಿಂದ ಕಾರ್ಯಸಿದ್ಧಿ. ಮಾತಿನಲ್ಲಿ ಹಿಡಿತವಿರಲಿ. ಪರರಿಂದ ಮೋಸ. ಶುಭಸಂಖ್ಯೆ:7

ತುಲಾ:  ಧಾರ್ವಿುಕ ಕಾರ್ಯದತ್ತ ಒಲವು. ಉದ್ಯೋಗದಲ್ಲಿ ಕಿರಿಕಿರಿ. ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಹಣದ ವಿಷಯದಲ್ಲಿ ಜಾಗ್ರತೆ. ಶುಭಸಂಖ್ಯೆ: 4

ವೃಶ್ಚಿಕ: ದಿನಸಿ ಅಂಗಡಿಯವರಿಗೆ ನಷ್ಟ. ಅನಿಯಂತ್ರಿತ ಕೋಪದಿಂದ ಅನಾಹುತ. ದಾಂಪತ್ಯದಲ್ಲಿ ಕಲಹ. ಮಾತಿನ ವೈಖರಿ ಬದಲಾಯಿಸಿ. ಶುಭಸಂಖ್ಯೆ: 1

ಧನಸ್ಸು: ಇಷ್ಟವಸ್ತು ಖರೀದಿ. ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ತಾಳ್ಮೆ ಅಗತ್ಯ. ಪ್ರಭಾವಿಗಳ ಭೇಟಿ. ವೈಯಕ್ತಿಕ ಕೆಲಸ ಕೈಗೂಡುವುದು. ಶುಭಸಂಖ್ಯೆ:6

ಮಕರ: ಮಹಿಳೆಯರಿಗೆ ತೊಂದರೆ. ಅಪರಿಚಿತರಿಂದ ದೂರವಿರಿ. ಆಲಸ್ಯ ಭಾವ. ಹೃದಯ ಸಂಬಂಧಿ ಬೇನೆ. ಸ್ನೇಹಿತರಿಂದ ಹಸ್ತಕ್ಷೇಪ. ಶುಭಸಂಖ್ಯೆ:9

ಕುಂಭ: ಮನೆ ಬದಲಾವಣೆಗೆ ಮಿತ್ರರ ಸಹಾಯ. ಪೊಲೀಸರ ಭಯ. ಆರೋಗ್ಯದಲ್ಲಿ ಏರುಪೇರು ಆಗಬಹುದು. ದುಷ್ಟ ಜನರ ಸಹವಾಸ. ಶುಭಸಂಖ್ಯೆ: 5

ಮೀನ: ನೂತನ ನಿವೇಶನ ಖರೀದಿಗೆ ನಿರ್ಧಾರ. ಹಿರಿಯರ ಮಾತಿಗೆ ಗೌರವ. ವ್ಯಾಪಾರದಲ್ಲಿ ಸಮಸ್ಯೆ. ಆಸ್ತಿ ವಿಷಯದಲ್ಲಿ ಮನಸ್ತಾಪ. ಶತ್ರುಬಾಧೆ. ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net