ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಾಹನ ಖರೀದಿ ಯೋಗ

Nitya Bhavisya Vijayavani
Published on

ಮೇಷ: ಸಹೋದರರಿಗೆ ಆಸ್ತಿ ಸಮಸ್ಯೆ ಕಾಡಲಿದೆ. ಇಂದು ವಿವಾಹದ ಪ್ರಯತ್ನಗಳೆಲ್ಲವೂ ಕೈಗೂಡುತ್ತವೆ. ವಿದೇಶ ಪ್ರಯಾಣ ರದ್ದು. ವಾಹನ ಖರೀದಿ ಯೋಗ

ವೃಷಭ: ನೂತನ ವಸ್ತ್ರಾಭರಣ ಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ. ತೀರ್ಥಯಾತ್ರೆಗೆ ಯೋಜನೆ. ತರಕಾರಿ ವ್ಯಾಪಾರದಲ್ಲಿ ನಷ್ಟ. ವಾಹನ ಖರೀದಿ ಯೋಗ

ಮಿಥುನ: ಹೆಂಡತಿಯಿಂದ ಅದೃಷ್ಟ. ಕಟ್ಟಡಗಳ ಸಾಮಗ್ರಿಗಳ ಮಾರಾಟದಲ್ಲಿ ಧನ ಲಾಭ. ಮಹಿಳೆಯರಿಗೆ ಅನುಕೂಲಗಳು ಹೆಚ್ಚುತ್ತವೆ. ಶುಭಸಂಖ್ಯೆ: 3

ಕಟಕ: ಹಿರಿಯರಿಂದ ಧನಾಗಮನ. ಬಿಸಿನೆಸ್ ಟೂರ್​ನಿಂದ ಲಾಭ. ಶತ್ರುಗಳ ಮೇಲೆ ವಿಜಯ. ಹೂವಿನ ವ್ಯಾಪಾರಿಗಳಿಗೆ ಧನ ಲಾಭ. ಶುಭಸಂಖ್ಯೆ:7

ಸಿಂಹ: ಕೃಷಿ ಮೂಲಗಳಿಂದ ಆದಾಯ. ಕೈಗೊಂಡ ಕೆಲಸ ನೆರವೇರುತ್ತದೆ. ಮನೆಗೆ ಹೊಸ ವಸ್ತು ಖರೀದಿ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ:3

ಕನ್ಯಾ:  ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಮೇಲಧಿಕಾರಿಗಳಿಂದ ಅನುಕೂಲ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಸುಖ ಭೋಜನ. ಶುಭಸಂಖ್ಯೆ:2

ತುಲಾ:  ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ. ಸಂಗಾತಿಯೊಂದಿಗೆ ಮನಸ್ತಾಪ. ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಉದಾಸೀನ ಬೇಡ. ಶುಭಸಂಖ್ಯೆ:7

ವೃಶ್ಚಿಕ: ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ಕೇಂದ್ರ ಸರ್ಕಾರಿ ನೌಕರರಿಗೆ ವಿಪರೀತ ಕಾರ್ಯದೊತ್ತಡ. ಕಣ್ಣಿನ ತೊಂದರೆ ಕಾಡಲಿದೆ. ಶುಭಸಂಖ್ಯೆ: 2

ಧನಸ್ಸು: ಅಲಂಕಾರಿಕ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಪೊಲೀಸ್ ಸಿಬ್ಬಂದಿಗೆ ಒತ್ತಡ. ಹೋಟೆಲ್ ಮಾಲೀಕರಿಗೆ ಹಣಕಾಸಿನ ಅನುಕೂಲ ಆಗಲಿದೆ. ಶುಭಸಂಖ್ಯೆ: 1

ಮಕರ: ವಾಹನ ಖರೀದಿ ಯೋಗ ದಾನ ಧರ್ಮಗಳಲ್ಲಿ ಆಸಕ್ತಿ. ಹೊಸ ಸ್ನೇಹಿತರ ಪರಿಚಯ. ಸಹೋದರರೊಡನೆ ಒಡನಾಟ. ಉನ್ನತ ಶಿಕ್ಷಣದ ಆಸೆ ಫಲಿಸಲಿದೆ. ಶುಭಸಂಖ್ಯೆ: 4

ಕುಂಭ: ಕೌಟುಂಬಿಕ ಜೀವನದಲ್ಲಿ ಸುಖ. ವ್ಯಾಪಾರ ನಿಮಿತ್ತ ಪ್ರಯಾಣ. ಮನರಂಜನೆಗಾಗಿ ಕಾಲಹರಣ. ಆಸ್ತಿ ನೋಂದಣಿಗೆ ಸುದಿನ. ಶುಭಸಂಖ್ಯೆ:9

ಮೀನ: ಕೃಷಿಕರಿಗೆ ಆಕಸ್ಮಿಕ ಧನ ಲಾಭ. ತಾಯಿಯೊಂದಿಗೆ ಬಾಂಧವ್ಯ ವೃದ್ಧಿ. ವಾಹನ ಖರೀದಿ ಯೋಗ. ಹೈನುಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net