

ಮೇಷ: ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ. ಕ್ರೀಡಾಪಟುಗಳಿಗೆ ಸರ್ಕಾರದಿಂದ ಧನಸಹಾಯ. ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 6
ವೃಷಭ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ. ಭದ್ರತಾ ವಿಭಾಗದ ಕೆಲಸಗಾರರ ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಶುಭಸಂಖ್ಯೆ:1
ಮಿಥುನ: ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ರದ್ದು. ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಗತಿ. ಸಹಕಾರಿ ಉದ್ಯೋಗಿಗಳಿಗೆ ಸಮಸ್ಯೆ. ಶುಭಸಂಖ್ಯೆ: 9
ಕಟಕ: ಸಾಲ ತೀರಿಸುವ ಚಿಂತೆ. ದಾಂಪತ್ಯದಲ್ಲಿ ಸಮಸ್ಯೆ. ಹಿರಿಯರ ಮಧ್ಯಪ್ರವೇಶದಿಂದ ಇತ್ಯರ್ಥವಾಗಲಿದೆ. ಮಿತ್ರರಿಂದ ಅನುಕೂಲ. ಶುಭಸಂಖ್ಯೆ:1
ಸಿಂಹ: ಕಿರಾಣಿ ಅಂಗಡಿ ಮಾಲೀಕರಿಗೆ ಕೆಲಸಗಾರರಿಂದ ನಷ್ಟ. ಬಂಧುಗಳ ಪ್ರವೇಶದಿಂದ ನೆಮ್ಮದಿ ಭಂಗ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ:2
ಕನ್ಯಾ: ವಾಹನ, ಭೂಮಿಯಿಂದ ಲಾಭವಾಗುವುದು. ಆಸ್ತಿ ಖರೀದಿಯ ಸಮಸ್ಯೆ ಬಗೆಹರಿಯುವುದು. ಆಕಸ್ಮಿಕ ಧನ ಸಹಾಯ ಸಿಗಲಿದೆ. ಶುಭಸಂಖ್ಯೆ:2
ತುಲಾ: ಉದ್ಯೋಗ ಬದಲಾವಣೆಯಿಂದ ಅನುಕೂಲ. ಮಾತಿನಿಂದ ಸಮಸ್ಯೆ. ಮಹಿಳಾ ಅಧಿಕಾರಿಗೆ ಕಿರಿಕಿರಿ. ಬಟ್ಟೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1
ವೃಶ್ಚಿಕ: ತಂದೆಯಿಂದ ಮಗನಿಗೆ ಆಸ್ತಿ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆ. ಗೃಹ ಕೈಗಾರಿಕೆಯ ಮಾಲೀಕರಿಗೆ ಆರ್ಥಿಕ ಪರಿಸ್ಥಿತಿ ಏರುಪೇರು. ಶುಭಸಂಖ್ಯೆ: 5
ಧನಸ್ಸು: ಏಲಕ್ಕಿ, ಕಾಳುಮೆಣಸು ಕೃಷಿಕರಿಗೆ ಅನುಕೂಲಕರ ದಿನ. ಐಟಿ ಉದ್ಯೋಗಿಗಳಿಗೆ ಅತಂತ್ರ ಸ್ಥಿತಿ. ಕುಸುರಿ ಕಾರ್ವಿುಕರಿಗೆ ಅಧಿಕ ಲಾಭ. ಶುಭಸಂಖ್ಯೆ: 8
ಮಕರ: ಪಾಲುದಾರಿಕೆಯಲ್ಲಿ ನಷ್ಟ. ಕೆಟ್ಟ ಆಲೋಚನೆ, ಕೆಟ್ಟ ನಿರ್ಧಾರದಿಂದ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಉದ್ಯೋಗ ಸ್ಥಳದಲ್ಲಿ ಒತ್ತಡ. ಶುಭಸಂಖ್ಯೆ: 7
ಕುಂಭ: ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲದ ಸಹಾಯ ಸಿಗುವುದು. ಗೃಹ ನಿರ್ಮಾಣ ಯೋಚನೆ ಜಾರಿ. ಉದ್ಯೋಗದಲ್ಲಿ ಉತ್ತಮ ಅವಕಾಶ. ಶುಭಸಂಖ್ಯೆ: 9
ಮೀನ: ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಮಹಿಳೆಯರಿಗೆ ಪದವಿ ಪ್ರಾಪ್ತಿಯಲ್ಲಿ ಶತ್ರು ಕಾಟ. ಬ್ಯಾಂಕಿಂಗ್ ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ:4