

ಮೇಷ: ದಾಂಪತ್ಯ ಕಲಹಕ್ಕೆ ಪರಿಹಾರ ದೊರೆತು ಪರಸ್ಪರ ಸಮಾಧಾನ. ಮಕ್ಕಳ ವಿಷಯದಲ್ಲಿ ಸಂತಸ. ಶಿಕ್ಷಕರಿಗೆ ಉತ್ತಮ ಫಲ. ಶುಭಸಂಖ್ಯೆ: 5
ವೃಷಭ: ಅಧಿಕಾರಿಗಳಿಂದ ಪ್ರಶಂಸೆ. ಆಭರಣ ವ್ಯಾಪಾರಿಗಳಿಗೆ ಶುಭವಾಗುವುದು. ವೇದಾಂತ ಮತ್ತು ಯೋಗ ಅಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ: 9
ಮಿಥುನ: ಅತಿಯಾದ ಪ್ರಯಾಣ. ಕೊಟ್ಟ ಸಾಲ ಮರುಪಾವತಿಯಾಗಿ ನೆಮ್ಮದಿ. ನವ ವಿವಾಹಿತರಿಗೆ ಸಂತಾನ ಪ್ರಾಪ್ತಿಯಾಗುವ ಯೋಗ. ಶುಭಸಂಖ್ಯೆ: 8
ಕಟಕ: ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ. ಪ್ರಯಾಣದಿಂದ ಅಧಿಕ ಖರ್ಚು. ಮಹಿಳೆಯರಿಗೆ ಮಾನಸಿಕ ಅಶಾಂತಿ ಉಂಟಾದೀತು. ಶುಭಸಂಖ್ಯೆ: 7
ಸಿಂಹ: ಅಧ್ಯಾತ್ಮದತ್ತ ಒಲವು ತೋರುವಿರಿ. ಅಭ್ಯಾಸದಿಂದ ವಿಶೇಷ ಪ್ರತಿಭೆ ಹೊರಹೊಮ್ಮಲಿದೆ. ಗಣ್ಯವ್ಯಕ್ತಿಗಳ ಭೇಟಿಯಿಂದ ಸಂತಸ. ಶುಭಸಂಖ್ಯೆ:1
ಕನ್ಯಾ: ಆಸ್ತಿ ಇತ್ಯರ್ಥಕ್ಕೆ ಬಂಧುಗಳ ವಿರೋಧ. ಸಹೋದರರ ನೆರವಿನಿಂದ ಸಾಲ ತೀರಿಸುವಿರಿ. ವಿದ್ಯಾರ್ಥಿಗಳಿಗೆ ಸರಾಸರಿ ಫಲಿತಾಂಶ. ಶುಭಸಂಖ್ಯೆ:1
ತುಲಾ: ವಾಣಿಜ್ಯ ವಿಭಾಗದ ಕೆಲಸದಲ್ಲಿ ಬಡ್ತಿ. ಮಾತೃ ವರ್ಗದವರಿಂದ ಸಹಾಯ. ಕಲಾವಿದರಿಗೆ ಆಕಸ್ಮಿಕ ಧನಲಾಭವಾಗುವುದು. ಶುಭಸಂಖ್ಯೆ:9
ವೃಶ್ಚಿಕ: ಔತಣ ಕೂಟಕ್ಕೆ ಹಣ ವ್ಯಯವಾಗುವುದು. ದೈಹಿಕ ಅಸ್ವಸ್ಥತೆ. ಅನವಶ್ಯಕ ವಾಗ್ವಾದ. ಧಾರ್ವಿುಕ ಕ್ಷೇತ್ರದವರಿಗೆ ಹೆಚ್ಚಿದ ಒತ್ತಡ. ಶುಭಸಂಖ್ಯೆ:3
ಧನಸ್ಸು: ಸ್ಥಿರಮನಸ್ಸು ಚಂಚಲವಾಗಲು ಬಿಡದಿರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಬುದ್ಧಿವಂತಿಕೆಯಿಂದ ವ್ಯವಹರಿಸಿ. ಶುಭಸಂಖ್ಯೆ:6
ಮಕರ: ಮಂಡಿ ನೋವಿನ ಸಮಸ್ಯೆ ಕಾಡಬಹುದು. ಕಚೇರಿಯಲ್ಲಿ ಅಧಿಕ ಕೆಲಸದೊತ್ತಡ. ದಿನಸಿ ವ್ಯಾಪಾರಿಗಳಿಗೆ ಅನಿರೀಕ್ಷಿತ ಚಿಂತೆ. ಶುಭಸಂಖ್ಯೆ:3
ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು ಆದೀತು. ಪತ್ನಿಯೊಂದಿಗೆ ವಾಗ್ವಾದ ನಿಯಂತ್ರಿಸಿ. ದುಡುಕಿನ ನಿರ್ಧಾರದಿಂದ ಹಾನಿ. ಶುಭಸಂಖ್ಯೆ:2
ಮೀನ: ಸಂಗಾತಿಯ ಆರೋಗ್ಯದಲ್ಲಿ ತೊಂದರೆ. ಮನಸ್ಸಿನಲ್ಲಿ ಅಚ್ಚಳಿಯದೆ ಉಳಿವ ಘಟನೆ ನಡೆಯಲಿದೆ. ಮಾತಿನಲ್ಲಿ ನಿಯಂತ್ರಣವಿರಲಿ. ಶುಭಸಂಖ್ಯೆ: 7