ದಿನ ಭವಿಷ್ಯ: ಈ ರಾಶಿಯವರಿಗಿಂದು ದಿನಾಂತ್ಯದಲ್ಲಿ ಶುಭ ಸುದ್ದಿ

Nitya Bhavisya Vijayavani
Published on

ಮೇಷ: ದವಸ ಧಾನ್ಯ ವ್ಯಾಪಾರದಲ್ಲಿ ಲಾಭ. ಅನವಶ್ಯಕ ಮಾತಿನಿಂದ ಕಲಹ. ಕುಟುಂಬದಲ್ಲಿ ಸಂತಸ. ಚಿಕ್ಕ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 8

ವೃಷಭ: ಕುಟುಂಬದ ವ್ಯವಹಾರದಲ್ಲಿ ಸಹನೆಯಿಂದ ಇರಿ. ಯಂತ್ರಗಳ ಕಾರ್ವಿುಕರು ಎಚ್ಚರಿಕೆಯಿಂದ ಇರಿ. ಆರಕ್ಷಕ ವೃತ್ತಿಯಲ್ಲಿ ಲಾಭ. ಶುಭಸಂಖ್ಯೆ: 9

ಮಿಥುನ: ನಿಮ್ಮ ಪ್ರತಿಭೆಗೆ ಕಂಪನಿಯಿಂದ ಯೋಗ್ಯ ಪುರಸ್ಕಾರ. ಹೊಸ ವಾಹನ ಖರೀದಿಯಲ್ಲಿ ಗೊಂದಲ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 4

ಕಟಕ: ಪರಿಶ್ರಮಕ್ಕೆ ಸೂಕ್ತ ಫಲ. ದೇಹ ದಂಡಿಸಿ ಅನಾರೋಗ್ಯ. ಕೃಷಿಕರಿಗೆ ಬೆಳೆ ನಷ್ಟದಿಂದ ಯೋಚನೆ. ಸಾಲ ಮಾಡುವಾಗ ಯೋಚಿಸಿ. ಶುಭಸಂಖ್ಯೆ: 1

ಸಿಂಹ: ಹೊಸ ಮನೆ ಖರೀದಿಗೆ ನಿರ್ಧಾರ. ಹೂಡಿಕೆದಾರ ರಿಂದ ಕಿರಿಕಿರಿ. ಉದ್ಯೋಗ ನಷ್ಟದ ಭೀತಿ ಕಾಡಲಿದೆ. ಕೈಗೆ ಬಂದುದು ಬಾಯಿಗಿಲ್ಲ. ಶುಭಸಂಖ್ಯೆ: 7

ಕನ್ಯಾ: ಉನ್ನತ ಹುದ್ದೆಗೆ ಆಯ್ಕೆಯಾಗುವಿರಿ. ತಾಂತ್ರಿಕ ವರ್ಗದವರಿಗೆ ಲಾಭ. ಹಣ ತಿರುಗಿ ಬರುವುದಿಲ್ಲ. ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ: 6

ತುಲಾ: ಪುಣ್ಯಕ್ಕಾಗಿ ಕುಲದೇವರತ್ತ ಪ್ರಯಾಣ. ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಸ್ಪರ್ಧೆ. ದುಂದು ವೆಚ್ಚ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 2

ವೃಶ್ಚಿಕ: ಅವಲಂಬನೆಯಿಂದ ಅಸಮಾಧಾನ. ಲೆಕ್ಕಪತ್ರ ಪರಿಶೋಧಕರಿಗೆ ವಿಶೇಷ ದಿನ. ತೀರ್ಥಕ್ಷೇತ್ರದಲ್ಲಿ ಧರ್ಮಕಾರ್ಯ ಮಾಡುವಿರಿ.ಶುಭಸಂಖ್ಯೆ: 9

ಧನಸ್ಸು: ಷಷ್ಠ ಗುರುವಿನಿಂದ ಆರ್ಥಿಕ ನಷ್ಟ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಸಾಧ್ಯತೆ. ಉತ್ತಮ ವರ ನೊಂದಿಗೆ ಪುತ್ರಿ ವಿವಾಹ ನಿಶ್ಚಯ. ಶುಭಸಂಖ್ಯೆ: 6

ಮಕರ:  ಆಸ್ತಿಗಾಗಿ ಕುಟುಂಬದಲ್ಲಿ ಕಲಹ. ಅನಿರೀಕ್ಷಿತ ಘಟನೆ ನಡೆಯಲಿದೆ. ಹೊಸ ವಾಹನ ಖರೀದಿಸುವಿರಿ. ನಿರೀಕ್ಷಿತ ಪ್ರಯಾಣ ರದ್ದು. ಶುಭಸಂಖ್ಯೆ: 4

ಕುಂಭ: ಕೆಲಸಗಳಲ್ಲೆಲ್ಲ ವೈಫಲ್ಯ ಕಾಡಲಿದೆ. ಹೃದಯ ಸಂಬಂಧಿ ಕಾಯಿಲೆ ಉಲ್ಬಣ. ನಿರೀಕ್ಷಿತ ವಿವಾಹ ಸಿದ್ದಿ. ಮಕ್ಕಳ ಭವಿಷ್ಯದಲ್ಲಿ ಪ್ರಗತಿ. ಶುಭಸಂಖ್ಯೆ: 5

ಮೀನ: ಉನ್ನತ ಹುದ್ದೆಯ ಆಕಾಂಕ್ಷಿಗಳಿಗೆ ಶುಭ. ರೇಷ್ಮೆ ಕೃಷಿಯಲ್ಲಿ ಲಾಭ. ಅಡಿಕೆ ಮಂಡಿಯಲ್ಲಿ ಸಾಲ. ವೀಸಾ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net