

ಮೇಷ: ಪ್ರಯಾಣದಲ್ಲಿ ಆತ್ಮೀಯರ ಭೇಟಿ. ಉನ್ನತ ಕಲಿಕೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ. ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8
ವೃಷಭ: ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ಸಿಗಲಿದೆ. ಆದಾಯ ತೆರಿಗೆ ಅಧಿಕಾರಿಗಳಿಗೆ ವರ್ಗಾವಣೆ. ಆರಕ್ಷಕ ವೃತ್ತಿಯವರಿಗೆ ಬಡ್ತಿ. ಶುಭಸಂಖ್ಯೆ:6
ಮಿಥುನ: ಮಧುಮೇಹಿಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ವಾಹನ ಮಾಲೀಕರಿಗೆ ಖರ್ಚು. ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ:2
ಕಟಕ: ನೀರಿನಿಂದ ಅಪಾಯ. ದೃಢ ನಿರ್ಧಾರ ತೆಗೆದು ಕೊಳ್ಳುವಲ್ಲಿ ಎಚ್ಚರವಾಗಿರಿ. ಸ್ವಂತ ಉದ್ಯಮದ ಮಹಿಳೆಯರಿಗೆ ಮನ್ನಣೆ. ಶುಭಸಂಖ್ಯೆ: 9
ಸಿಂಹ: ಪತ್ನಿಗಾಗಿ ಖರ್ಚು. ವಿಚ್ಛೇದನ ಕಟ್ಟಳೆ ಇತ್ಯರ್ಥ. ವಕೀಲರಿಗೆ ಅನಿರೀಕ್ಷಿತ ತಿರುವು. ಫ್ಯಾನ್ಸಿ ಸ್ಟೋರ್ಸ್ ಮಾಲೀಕರಿಗೆ ಅಧಿಕ ಲಾಭ. ಶುಭಸಂಖ್ಯೆ:1
ಕನ್ಯಾ: ಔಷಧಗಳ ಸಗಟು ವ್ಯಾಪಾರದಲ್ಲಿ ನಷ್ಟ. ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ಅರಣ್ಯ ಉತ್ಪನ್ನಗಳ ಖರೀದಿಯಲ್ಲಿ ಲಾಭ. ಶುಭಸಂಖ್ಯೆ:3
ತುಲಾ: ಕಾನೂನು ಉಲ್ಲಂಘನೆಗೆ ದಂಡ ಕಟ್ಟುವಿರಿ. ಆಸೆಗೆ ಅನುಗುಣವಾದ ನಿವೇಶನ ಸಿಗಲಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:6
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ಭಾಗವಾಗಲಿದೆ. ಆಸ್ಪತ್ರೆ ಉದ್ಯೋಗಿಗಳಿಗೆ ವೇತನ ಹೆಚ್ಚಾಗಲಿದೆ. ದೊಡ್ಡ ವಾಹನಗಳ ಚಾಲಕರಿಗೆ ಲಾಭ. ಶುಭಸಂಖ್ಯೆ:5
ಧನಸ್ಸು: ನಿರುದ್ಯೋಗಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ. ಆದಾಯ ಅಧಿಕಾರಿಗಳಿಂದ ಸಮಸ್ಯೆ. ರಾಜಕಾರಣಿಗಳಿಗೆ ವಿದೇಶ ಪ್ರಯಾಣ . ಶುಭಸಂಖ್ಯೆ: 8
ಮಕರ: ಕೂಡಿಟ್ಟ ಹಣ ದುರಾಸೆಯಿಂದಾಗಿ ನಷ್ಟವಾಗಲಿದೆ. ಸಂಗಾತಿಯೊಂದಿಗೆ ತೀರ್ಥಯಾತ್ರೆ. ಅಡಕೆ, ಏಲಕ್ಕಿ, ಭತ್ತ ಕೃಷಿಕರಿಗೆ ಲಾಭ. ಶುಭಸಂಖ್ಯೆ:4
ಕುಂಭ: ಸಾಲ ಮಾಡುವ ಸಂಭವ. ಕೃಷಿಕರಿಗೆ ಕಾರ್ವಿುಕರ ಕೊರತೆಯಿಂದ ನಷ್ಟವಾಗುವುದು. ನೂತನ ಮನೆ ಖರೀದಿಸಲು ನಿರ್ಧಾರ. ಶುಭಸಂಖ್ಯೆ:6
ಮೀನ: ಹಳೆಯ ಸ್ನೇಹಿತೆಯ ಭೇಟಿ. ಸೌಂದರ್ಯವರ್ಧಕ ವ್ಯಾಪಾರದಲ್ಲಿ ಆದಾಯ. ಷೇರು ವ್ಯವಹಾರದಲ್ಲಿ ಬಂಡವಾಳ ಹೂಡಿಕೆಯಿಂದ ಲಾಭ. ಶುಭಸಂಖ್ಯೆ: 7