ನಿತ್ಯಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ

Nitya Bhavisya Vijayavani
Published on

ಮೇಷ: ಕೃಷಿಯಿಂದ ಹೆಚ್ಚು ಆದಾಯ. ಆತ್ಮವಿಶ್ವಾಸದಿಂದ ಮಾಡಿದ ಕೆಲಸ ಸಾರ್ಥಕವಾಗಲಿದೆ. ಆಸ್ತಿ ವಿಚಾರವನ್ನು ರಹಸ್ಯವಾಗಿಡಿ. ಶುಭಸಂಖ್ಯೆ: 6

ವೃಷಭ: ನಾಯಕತ್ವದ ಸ್ಥಾನಮಾನ ಪಡೆಯುವಿರಿ. ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವಿರಿ. ಅನಿರೀಕ್ಷಿತ ಧನ ಲಾಭವಾಗಲಿದೆ. ಶುಭಸಂಖ್ಯೆ: 4

ಮಿಥುನ: ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿರ್ವಹಿಸುವಿರಿ. ಮುದ್ರಣ ವೃತ್ತಿಯವರಿಗೆ ಶ್ರಮಕ್ಕೆ ತಕ್ಕ ಫಲ. ಮಕ್ಕಳ ಬಗ್ಗೆ ಗಮನಹರಿಸಿ. ಶುಭಸಂಖ್ಯೆ: 2

ಕಟಕ: ಸಾಹಿತ್ಯ, ಸಂಗೀತಶಾಸ್ತ್ರಜ್ಞರಿಗೆ ಗೌರವ ದೊರೆಯುವುದು. ಸರ್ಕಾರಿ ನೌಕರರಿಗೆ ಕೆಲಸದಲ್ಲಿ ಒತ್ತಡ, ಹಿತಶತ್ರುಗಳ ಕಾಟವಿದೆ. ಶುಭಸಂಖ್ಯೆ: 4

ಸಿಂಹ: ಸಾಮಾಜಿಕ ಜನಪ್ರಿಯತೆ ಹೆಚ್ಚಾಗಲಿದೆ. ನಿರೀಕ್ಷಿತ ಬದಲಾವಣೆಗಳು ಕಂಡು ಬರುತ್ತವೆ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಶುಭಸಂಖ್ಯೆ: 5

ಕನ್ಯಾ: ಕೃಷಿಕರಿಗೆ ಮಾರುಕಟ್ಟೆಯ ವ್ಯಾಪಾರದಲ್ಲಿ ಲಾಭ. ದ್ರವರೂಪದ ಉತ್ಪಾದಕರಿಗೆ ಲಾಭವಾಗುವುದು. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ.ಶುಭಸಂಖ್ಯೆ: 7

ತುಲಾ: ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ಹೊಸ ಉದ್ಯಮ ಸ್ಥಾಪನೆಗೆ ನಿರ್ಧಾರ. ಕೌಟುಂಬಿಕ ವಿಚಾರದಲ್ಲಿ ಪ್ರಗತಿಯಾಗುವುದು. ಶುಭಸಂಖ್ಯೆ: 6

ವೃಶ್ಚಿಕ: ಖರ್ಚಿನಲ್ಲಿ ಹಿಡಿತವಿರಲಿ. ಅಧಿಕಾರಿಗಳಿಂದ ಪ್ರೋತ್ಸಾಹ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಸಮಸ್ಯೆ ಇರದು. ಶುಭಸಂಖ್ಯೆ: 9

ಧನಸ್ಸು: ಲೆಕ್ಕ ಪರಿಶೋಧಕರಿಗೆ ಶುಭಕರ ದಿವಸ. ಅರಿವಳಿಕೆ ತಜ್ಞರಿಗೆ ವಿಶೇಷ ಮುನ್ನಡೆ. ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ. ಶುಭಸಂಖ್ಯೆ: 1

ಮಕರ: ಅವಿವಾಹಿತರಿಗೆ ವಿವಾಹ ಯೋಗ. ಹಣದ ನಿರ್ವಹಣೆ ಯಲ್ಲಿ ಯಶಸ್ಸು ಸಿಗುವುದು. ಒಡಹುಟ್ಟಿದವರಿಗೆ ಸಹಾಯ ಮಾಡುವಿರಿ.ಶುಭಸಂಖ್ಯೆ: 4

ಕುಂಭ: ಐಟಿ ಉದ್ಯೋಗಿಗಳು ಎಚ್ಚರಿಕೆಯಿಂದಿರಿ. ಖರ್ಚು ವೆಚ್ಚದಲ್ಲಿ ಅಸಮತೋಲನ, ಆರ್ಥಿಕ ಸಂಕಷ್ಟ. ಭೂ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 9

ಮೀನ: ಕಟ್ಟಡ ನಿರ್ಮಾಣದ ವ್ಯವಹಾರದಲ್ಲಿ ಗೊಂದಲ . ಧಾರ್ವಿುಕ ವಿಷಯಗಳತ್ತ ವಿಶೇಷ ಒಲವು. ರಾಜಕೀಯ ವ್ಯಕ್ತಿಗಳಿಗೆ ಅಶುಭ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net