ನಿತ್ಯಭವಿಷ್ಯ: ಈ ರಾಶಿಯ ವಿವಾಹಾಕಾಂಕ್ಷಿಗಳಿಗೆ ಶುಭ ಫಲ

Nitya Bhavisya Vijayavani
Published on

ಮೇಷ: ಮಾತಿನಲ್ಲಿ ನಯ ವಿನಯವಿರಲಿ. ಅಲಂಕಾರಿಕ ವಸ್ತುಗಳ ಮಾರಾಟಗಾರರಿಗೆ ಲಾಭ. ಪಶು ಆಹಾರ ತಯಾರಿಕರಿಗೆ ಆದಾಯ. ಶುಭಸಂಖ್ಯೆ: 5

ವೃಷಭ: ಮನೆಯಲ್ಲಿ ಸಂತಸದ ವಾತಾವರಣ. ಪುಣ್ಯಕ್ಷೇತ್ರ ಪ್ರವಾಸ ಕೈಗೊಳ್ಳುವಿರಿ. ಮಗಳ ವಿವಾಹ ವಿಷಯದಲ್ಲಿ ದೃಢತೀರ್ಮಾನ ಕೈಗೊಳ್ಳಿ. ಶುಭಸಂಖ್ಯೆ: 9

ಮಿಥುನ: ಮಾಡುವ ಉದ್ಯೋಗದಲ್ಲಿ ಬದಲಾವಣೆಯಾದೀತು. ರಾಜಕೀಯ ಪ್ರವೇಶಕ್ಕೆ ಸುಸಮಯ. ವಕೀಲರಿಗೆ ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 3

ಕಟಕ: ವಿಮಾನ ನಿಲ್ದಾಣದ ಕೆಲಸಗಾರರಿಗೆ ಧನಾಗಮನ. ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಲಾಭ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ: 3

ಸಿಂಹ: ವಿವಾಹಾಕಾಂಕ್ಷಿಗಳಿಗೆ ಶುಭ ಫಲ. ಆಸ್ತಿ ಖರೀದಿಯನ್ನು ಸ್ವಲ್ಪ ಕಾಲ ಮುಂದೂಡಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 6

ಕನ್ಯಾ: ವ್ಯಾಪಾರ ಒಪ್ಪಂದಗಳನ್ನು ಮುಂದೂಡಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಗತಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಶುಭಸಂಖ್ಯೆ: 9

ತುಲಾ: ಬಹುಕಾಲದಿಂದ ನನೆಗುದಿಯಲ್ಲಿದ್ದ ಕೆಲಸಕ್ಕೆ ಮರುಚಾಲನೆ. ಆರ್ಥಿಕ ಪ್ರಗತಿ ಇಳಿಮುಖ. ಗಣ್ಯ ಅಧಿಕಾರಿಗಳ ಭೇಟಿಯಿಂದ ಲಾಭ. ಶುಭಸಂಖ್ಯೆ: 4

ವೃಶ್ಚಿಕ: ಗೃಹ ನಿರ್ಮಾಣದ ಯೋಚನೆ. ಹೈನು ಉತ್ಪನ್ನಗಳ ವ್ಯಾಪಾರದಲ್ಲಿ ಹೆಚ್ಚಿನ ಹಣ ಸಿಗಲಿದೆ. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1

ಧನಸ್ಸು: ಪುಸ್ತಕದ ವ್ಯಾಪಾರಿಗಳಿಗೆ ಅದೃಷ್ಟದಾಯಕ ದಿನ. ಮಹಿಳಾ ಉದ್ಯಮಿಗಳಿಗೆ ಶ್ರಮ ಹೆಚ್ಚಾಗಲಿದೆ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ಮಕರ: ನವ ದಂಪತಿಗಳಿಗೆ ಸಂತೋಷದ ಸುದ್ದಿ. ಬಂಧುಗಳಿಂದ ಸಹಾಯ. ಔಷಧ ವ್ಯಾಪಾರದಲ್ಲಿ ಹೊಸ ಜವಾಬ್ದಾರಿ ಹೆಗಲೇರುವುದು. ಶುಭಸಂಖ್ಯೆ: 3

ಕುಂಭ: ಬಾಳೆ, ತೆಂಗು ಕೃಷಿಕರಿಗೆ ಶುಭ. ಗುರುಹಿರಿಯರಿಂದ ಮಾರ್ಗದರ್ಶನ ಪಡೆದುಕೊಳ್ಳಿ. ಗಾಯಕ ಮತ್ತು ವಾದಕರಿಗೆ ಸನ್ಮಾನ. ಶುಭಸಂಖ್ಯೆ: 5

ಮೀನ: ಮಕ್ಕಳ ವಿದ್ಯಾಭ್ಯಾಸದತ್ತ ಗಮನಹರಿಸಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಆಸ್ತಿ ವಿಚಾರದ ಗೊಂದಲ ಪರಿಹಾರವಾಗಲಿದೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net