

ಮೇಷ: ನಿಮ್ಮ ಸಮಾಜ ಸೇವೆಗೆ ಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 9
ವೃಷಭ: ಶ್ರಮಕ್ಕೆ ತಕ್ಕ ಪ್ರತಿಫಲ. ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ. ಸರ್ಕಾರಿ ಕೆಲಸದಲ್ಲಿ ನಿರೀಕ್ಷಿತ ಫಲ. ಅಪರಿಚಿತದಿಂದ ಮೋಸ. ಶುಭಸಂಖ್ಯೆ: 2
ಮಿಥುನ: ವಿದೇಶ ಪ್ರವಾಸಕ್ಕೆ ಸಾಧ್ಯತೆ. ಕೃಷಿಕರಿಗೆ ನಷ್ಟದ ಭೀತಿ. ವಿಚ್ಛೇದಿತರಿಗೆ ವಿವಾಹಸಿದ್ಧಿ. ದೀನದಲಿತರಿಗೆ ಸಹಾಯ ಹಸ್ತ ಚಾಚಿ. ಶುಭಸಂಖ್ಯೆ:4
ಕಟಕ: ಸಗಟು ವ್ಯವಹಾರದಲ್ಲಿ ನಷ್ಟವಾಗಲಿದೆ. ಅನಿರೀಕ್ಷಿತ ಧನ ಸಂಪತ್ತು ಪ್ರಾಪ್ತಿ. ಅಧಿಕಾರ ಪ್ರಾಪ್ತಿಯಲ್ಲಿ ಅಡೆತಡೆ ಎದುರಾಗಬಹುದು. ಶುಭಸಂಖ್ಯೆ:3
ಸಿಂಹ: ಮಾನಸಿಕವಾಗಿ ಸದೃಢರಾಗಿರಿ. ಸಾಲ ತೀರಿಸಲು ಹಣಸಹಾಯ ಒದಗಿ ಬರಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ:8
ಕನ್ಯಾ: ತಾಯಿಯ ಆರೋಗ್ಯ ಬಿಗಡಾಯಿಸೀತು. ಸಂಕೋಚ ಪ್ರವೃತ್ತಿಯಿಂದ ತೊಂದರೆ. ಖರೀದಿಯಲ್ಲಿ ಮೋಸ. ವಿದ್ಯಾರ್ಥಿಗಳಿಗೆ ಶುಭ. ಶುಭಸಂಖ್ಯೆ: 4
ತುಲಾ: ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ. ಸ್ನೇಹಿತನಿಂದ ಆರ್ಥಿಕ ಸಹಾಯ. ಸಾಲಗಾರರಿಂದ ಕಿರುಕುಳ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 2
ವೃಶ್ಚಿಕ: ಸ್ತ್ರೀಯರಿಗೆ ಶುಭದಿನ. ನಂಬಿದವರಿಂದಲೇ ಮೋಸ ಸಾಧ್ಯತೆ. ಅನಿರೀಕ್ಷಿತ ಅತಿಥಿ ಆಗಮನ. ಸಾರ್ವಜನಿಕ ಜೀವನದಲ್ಲಿ ಮನ್ನಣೆ. ಶುಭಸಂಖ್ಯೆ: 7
ಧನಸ್ಸು: ಸಹೋದ್ಯೋಗಿಗಳಿಂದ ನೆರವು. ಆಭರಣ ವ್ಯಾಪಾರಿಗಳಿಗೆ ನಷ್ಟ. ರಿಯಲ್ ಎಸ್ಟೇಟ್ನಲ್ಲಿ ಲಾಭ. ತಾಯಿಯ ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 8
ಮಕರ: ಆಹಾರ ಸೇವಿಸುವಾಗ ಎಚ್ಚರವಿರಲಿ. ಅನವಶ್ಯಕ ಖರ್ಚು ತಲೆದೋರಬಹುದು. ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ. ಶುಭಸಂಖ್ಯೆ: 6
ಕುಂಭ: ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ. ಸ್ತ್ರೀ ಅಥವಾ ಪುರುಷ ವಿಚಾರದಲ್ಲಿ ಅಪವಾದ. ಹೃದಯ ಸಂಬಂಧಿ ರೋಗ ಉಲ್ಬಣ. ಶುಭಸಂಖ್ಯೆ: 6
ಮೀನ: ಉನ್ನತ ವ್ಯಾಸಂಗ ಆರಂಭ. ಅವಿವಾಹಿತರಿಗೆ ಶುಭ ಸುದ್ದಿಬರಲಿದೆ. ನನೆಗುದಿಗೆ ಬಿದ್ದ ಕೆಲಸದ ಪುನರಾರಂಭ. ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ: 1