

ಮೇಷ: ಮನೆ ನಿರ್ಮಾಣ ಕಾರ್ಯಗಳಲ್ಲಿ ಅನುಕೂಲ. ಸ್ಥಿರಾಸ್ತಿ ಮತ್ತು ವಾಹನ ಖರೀದಿಗೆ ಸಕಾಲ. ಆರ್ಥಿಕ ಸಂಕಷ್ಟ ಬಗೆಹರಿಯುವುದು. ಶುಭಸಂಖ್ಯೆ:5
ವೃಷಭ: ಆಸ್ತಿ ವಿಚಾರದ ಗೊಂದಲ ಇತ್ಯರ್ಥವಾಗಲಿದೆ. ಸಾಲದ ಸುಳಿಯಿಂದ ಹೊರಬರುವ ಸಾಧ್ಯತೆ. ಲೆಕ್ಕ ಪರಿಶೋಧಕರಿಗೆ ಆದಾಯ. ಶುಭಸಂಖ್ಯೆ:7
ಮಿಥುನ: ಮನೆ ನವೀಕರಣಕ್ಕೆ ನಿರ್ಧಾರ. ರಾಜಕೀಯ ವ್ಯಕ್ತಿಯಿಂದ ಆರ್ಥಿಕ ಸಹಾಯ. ದೀರ್ಘಕಾಲದ ಕಾಯಿಲೆ ನಿಯಂತ್ರಣಕ್ಕೆ ಬರಲಿದೆ. ಶುಭಸಂಖ್ಯೆ:2
ಕಟಕ: ಹೊಸ ಹೋಟೆಲ್ ಪ್ರಾರಂಭದಿಂದ ಲಾಭ. ಕಚೇರಿಯಲ್ಲಿ ಅಹಂಭಾವದ ಮಾತು ಬೇಡ. ಬಂಧುಗಳಿಗೆ ಸಹಾಯ ಮಾಡುವಿರಿ. ಶುಭಸಂಖ್ಯೆ: 6
ಸಿಂಹ: ಮಹಿಳಾ ನಿರುದ್ಯೋಗಿಗಳಿಗೆ ಉದ್ಯೋಗ ಲಾಭದ ಖುಷಿ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಉದ್ಯೋಗ ನಿಮಿತ್ತ ದೂರಪ್ರಯಾಣ. ಶುಭಸಂಖ್ಯೆ: 1
ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಮಾಡಲು ಪ್ರಯಾಣ. ಹೊಸ ಉದ್ಯಮ ಸ್ಥಾಪನೆಯಿಂದ ನಷ್ಟದ ಆತಂಕ. ತಂದೆಯ ಮಿತ್ರರಿಂದ ಲಾಭ. ಶುಭಸಂಖ್ಯೆ: 7
ತುಲಾ: ಬಾಹ್ಯಾಕಾಶ ಉದ್ಯೋಗಿಗಳಿಗೆ ಕಚೇರಿ ಬದಲಾವಣೆ ಸಾಧ್ಯತೆ. ಆತ್ಮಗೌರವ ವೃದ್ಧಿ. ಕಲಾವಿದರಿಗೆ ಅದೃಷ್ಟ ಒಲಿದು ಬರುವುದು. ಶುಭಸಂಖ್ಯೆ: 5
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಮಿತ್ರರೊಂದಿಗೆ ಔತಣಕೂಟದ ಸಂಭ್ರಮ. ಮಗನ ಮದುವೆಗೆ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ:2
ಧನಸ್ಸು: ನಿಮ್ಮ ಕಚೇರಿಗೆ ಆದಾಯ ಅಧಿಕಾರಿಗಳು ಭೇಟಿ ನೀಡುವರು. ಹೊಸ ಉದ್ಯಮಕ್ಕೆ ಸಾಲ ಸಿಗಲಿದೆ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ. ಶುಭಸಂಖ್ಯೆ: 6
ಮಕರ: ಮಕ್ಕಳ ಸಾಧನೆಯಿಂದ ಹೆಮ್ಮೆ. ಪೊಲೀಸ್ ವೃತ್ತಿಗೆ ಆಯ್ಕೆ ಸಾಧ್ಯತೆ. ಕಲ್ಪನೆಯಲ್ಲಿ ವಿಹರಿಸುವಿರಿ. ಸಂಜೆ ಆತ್ಮೀಯರ ಭೇಟಿ. ಶುಭಸಂಖ್ಯೆ: 4
ಕುಂಭ: ಆಸ್ತಿ ಮಾರಾಟದ ಯೋಚನೆ ಕಾರ್ಯಗತ. ಪ್ರಯಾಣದಲ್ಲಿ ವಸ್ತು ಹುಷಾರು. ಬಂಧುಗಳ ಸಹಾಯದಿಂದ ಸಾಲ ತೀರಿಸುವಿರಿ. ಶುಭಸಂಖ್ಯೆ:8
ಮೀನ: ವಿದ್ಯಾಭ್ಯಾಸ ನಿಮಿತ್ತ ವಿದೇಶ ಪ್ರಯಾಣ. ಹೊಸ ವೈದ್ಯರ ಭೇಟಿ, ಸೂಕ್ತ ಚಿಕಿತ್ಸೆ. ಗೃಹ ನಿರ್ಮಾಣ ಕೆಲಸ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ:9