

ಮೇಷ: ಕಾರ್ಖಾನೆ ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ. ವೈದ್ಯ ವೃತ್ತಿಯವರಿಗೆ ಲಾಭ. ವೃತ್ತಿ ಶಿಕ್ಷಣ ವ್ಯಾಸಂಗದಲ್ಲಿ ಹಿನ್ನಡೆ. ಶುಭಸಂಖ್ಯೆ: 6
ವೃಷಭ: ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡುವುದು ಬೇಡ. ಪರರ ಮಾತಿಗೆ ಕಿವಿ ಕೊಡಬೇಡಿ. ಗೆಳೆಯರಿಂದ ಸಾಲದ ಸಹಾಯ. ಶುಭಸಂಖ್ಯೆ: 2
ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ. ಪುತ್ರಿಗೆ ವಿವಾಹ ಸಿದ್ದಿ. ಮನೆಯಲ್ಲಿ ಸಂತಸದ ವಾತಾವರಣ. ನಿಮ್ಮ ಪರ ಕೋರ್ಟ್ ತೀರ್ಪು. ಶುಭಸಂಖ್ಯೆ:3
ಕಟಕ: ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಆಸ್ತಿ ನೋಂದಣಿ ಕಾರ್ಯಗಳಲ್ಲಿ ಜಯ. ಆಕಸ್ಮಿಕ ಖರ್ಚು. ಸ್ನೇಹಿತರೊಂದಿಗೆ ಔತಣಕೂಟ. ಶುಭಸಂಖ್ಯೆ: 1
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ರಾಜಕೀಯ ವ್ಯಕ್ತಿಗಳಿಗೆ ವಿಶೇಷದಿನ. ಹಣ ಬಂದರೂ ಉಳಿಯದು. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:8
ಕನ್ಯಾ: ಅವಶ್ಯಕತೆಗೆ ತಕ್ಕಂತೆ ಹಣ ಬರುವುದು. ಉತ್ತಮ ವಹಿವಾಟು. ವೈವಾಹಿಕ ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಶುಭಸಂಖ್ಯೆ:6
ತುಲಾ: ಅಮೂಲ್ಯ ವಸ್ತು ಸಂಗ್ರಹಿಸುವಿರಿ. ಸಂಗಾತಿಯ ಭಾವನೆಗೆ ಸ್ಪಂದಿಸಿ. ಉದ್ಯೋಗಸ್ಥ ಸ್ತ್ರೀಯರು ತಾಳ್ಮೆಯಿಂದ ಇದ್ದರೆ ಲಾಭ. ಶುಭಸಂಖ್ಯೆ:7
ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ. ಗಾಯಕರಿಗೆ ಚಂಚಲ ಸ್ವಭಾವದಿಂದ ಅವಕಾಶ ಕೈ ತಪ್ಪುವುದು. ವಿದೇಶ ಯಾತ್ರೆ ಕನಸು ನನಸು. ಶುಭಸಂಖ್ಯೆ:2
ಧನಸ್ಸು: ಮಿತ್ರರಿಂದ ಹಣದ ಸಹಾಯ. ನ್ಯಾಯಾಲಯದ ವಿಚಾರದಲ್ಲಿ ಕಾರ್ಯಸಾಧನೆ. ಸ್ತ್ರೀಯರಿಗೆ ಅಧಿಕಾರ-ಪ್ರಾಪ್ತಿಯಾಗುವುದು. ಶುಭಸಂಖ್ಯೆ:3
ಮಕರ: ಆದಾಯದಲ್ಲಿ ಏರುಪೇರು ಆದೀತು. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಚಲನಚಿತ್ರ ಕ್ಷೇತ್ರದ ನೃತ್ಯಪಟುಗಳಿಗೆ ವಿಶೇಷ ದಿನ. ಶುಭಸಂಖ್ಯೆ: 4
ಕುಂಭ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಆತ್ಮೀಯರಿಂದ ಸಹಾಯ ಸಿಗುವುದು. ಸ್ಥಿರಾಸ್ತಿ ಖರೀದಿ ಮಾಡುವ ಸಾಧ್ಯತೆ. ಪ್ರಿಯ ಜನರ ಭೇಟಿ. ಶುಭಸಂಖ್ಯೆ:1
ಮೀನ: ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮನಃಶಾಂತಿ. ಚಾಲಕ ವೃತ್ತಿಯವರಿಗೆ ಲಾಭ. ಶುಭಸಂಖ್ಯೆ: 9