ನಿತ್ಯಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ವಿವಾಹ ನಿಶ್ಚಯ

Nitya Bhavisya Vijayavani
Published on

ಮೇಷ: ಮಹಿಳೆಯರಿಗೆ ಋಣಾತ್ಮಕ ಚಿಂತನೆ ಕಾಡಲಿದೆ. ಹೂವು ಹಣ್ಣು ವ್ಯವಹಾರದಲ್ಲಿ ಅಧಿಕ ಲಾಭ. ಕಿರುಚಿತ್ರ ನಿರ್ದೇಶಕರಿಗೆ ಕಿರಿಕಿರಿ. ಶುಭಸಂಖ್ಯೆ:5

ವೃಷಭ: ಕೋರ್ಟ್ ಕೆಲಸಗಳು ವಿಳಂಬ. ಕೊಟ್ಟ ಹಣ ತಿರುಗಿ ಬರಲಿದೆ. ಉತ್ತಮ ಹುದ್ದೆ ಪ್ರಾಪ್ತಿ. ಇಷ್ಟದೇವರನ್ನು ಇಷ್ಟಪಟ್ಟು ಪೂಜಿಸಿ. ಶುಭಸಂಖ್ಯೆ:7

ಮಿಥುನ: ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ಆಟಗಾರರಿಗೆ ವಿದೇಶ ಪ್ರವಾಸ. ಪತ್ರಕರ್ತರಿಗೆ ಅಪಘಾತ ಸಾಧ್ಯತೆ, ಹುಷಾರು. ಶುಭಸಂಖ್ಯೆ: 2

ಕಟಕ: ಸೌಂದರ್ಯ ವರ್ಧಕ ತಯಾರಕರಿಗೆ ನಷ್ಟಭೀತಿ. ನೂತನ ನಿವೇಶನ ಖರೀದಿಗೆ ನಿರ್ಧಾರ. ಮಹಿಳಾ ಉದ್ಯಮಕ್ಕಾಗಿ ಪ್ರಯಾಣ. ಶುಭಸಂಖ್ಯೆ:9

ಸಿಂಹ: ಜೇನು, ರೇಷ್ಮೆ ಕೃಷಿಯಲ್ಲಿ ಅಭಿವೃದ್ಧಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಗೃಹ ನಿರ್ಮಾಣದ ಅಡೆತಡೆ ನಿವಾರಣೆ. ಶುಭಸಂಖ್ಯೆ:2

ಕನ್ಯಾ: ಹರಾಜಿನಲ್ಲಿ ನಿಮ್ಮ ಪರವಾಗಿ ನಿರ್ಧಾರ. ಕಟ್ಟಡ ನಿರ್ಮಾಣ ಮಾಡುವವರಿಗೆ ಆಘಾತ. ಅವಿವಾಹಿತರಿಗೆ ವಿವಾಹ ನಿಶ್ಚಯ. ಶುಭಸಂಖ್ಯೆ:6

ತುಲಾ: ಮಹಿಳೆಯರಿಗೆ ಹೊಸ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪ್ರರೀಕ್ಷೆಯಲ್ಲಿ ಪ್ರಗತಿ. ಉಪನ್ಯಾಸಕರಿಗೆ ಬಡ್ತಿಯಲ್ಲಿ ತಡೆ. ಶುಭಸಂಖ್ಯೆ:2

ವೃಶ್ಚಿಕ: ಸಹೋದ್ಯೋಗಿಗಳಿಂದ ಸಹಾಯ. ಸಾಂಪ್ರದಾಯಿಕ ಔಷಧ ವ್ಯಾಪಾರದಲ್ಲಿ ಲಾಭ. ಅಲಂಕಾರ ಸಾಮಗ್ರಿಗಳಿಂದ ಚರ್ಮರೋಗ. ಶುಭಸಂಖ್ಯೆ:4

ಧನಸ್ಸು: ಹಿತಶತ್ರುಗಳ ಕಾಟ. ರಂಗ ಕಲಾವಿದರಿಗೆ ಪುರಸ್ಕಾರ. ದಿನದ ಅಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ:8

ಮಕರ: ಸಹೋದ್ಯೋಗಿಗಳ ಸಹಾಯದಿಂದ ಕೀರ್ತಿ. ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ. ಉದ್ಯೋಗ ಅರಸುವಲ್ಲಿ ಯಶಸ್ವಿ. ಶುಭಸಂಖ್ಯೆ:3

ಕುಂಭ: ಛಾಯಾಗ್ರಾಹಕರು, ಸಿನಿಮಾ ಉದ್ಯೋಗಿಗಳಿಗೆ ಅಧಿಕ ಹಣ ಸಂಪಾದನೆ. ಪ್ರಭಾವಿಗಳ ಸಂಪರ್ಕ. ಬದುಕಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ:7

ಮೀನ: ಪಿತ್ರಾರ್ಜಿತ ಆಸ್ತಿಯ ಕಲಹ ತಾರಕಕ್ಕೆ. ವಕೀಲ ವೃತ್ತಿ ಪರರಿಗೆ ಸಮಾಜದಲ್ಲಿ ಮನ್ನಣೆ. ಆದಾಯ ತೆರಿಗೆ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net