ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ಧಿ

Nitya Bhavisya Vijayavani
Published on

ಮೇಷ: ಹೊಸ ವ್ಯಾಪಾರ ಆರಂಭಿಸುವ ಯೋಚನೆ ಬರಲಿದೆ. ಮಾಧ್ಯಮ ಕ್ಷೇತ್ರದ ಉದ್ಯೋಗಿಗಳಿಗೆ ನಷ್ಟ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8

ವೃಷಭ: ಸಾವಯವ ಕೃಷಿಕರಿಗೆ ಗೌರವ, ಮನ್ನಣೆ ಸಿಗಲಿದೆ. ಮಾತೃಮೂಲವಾದ ಆಸ್ತಿಯಲ್ಲಿ ನಷ್ಟ. ಹಳೆಯ ಸ್ನೇಹಿತನ ಭೇಟಿಯಾಗುವುದು. ಶುಭಸಂಖ್ಯೆ: 9

ಮಿಥುನ: ಉದರ ಸಂಬಂಧಿ ರೋಗ ಕಾಡಲಿದೆ. ನಾಟ್ಯ ಮತ್ತು ಸಂಗೀತ ಶಿಕ್ಷಕರಿಗೆ ಆರ್ಥಿಕ ಲಾಭವಾಗುವುದು. ಅಡಿಕೆ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 9

ಕಟಕ: ನಾಲ್ಕು ಚಕ್ರದ ವಾಹನ ಖರೀದಿಗೆ ನಿರ್ಧಾರ. ಬಹುದಿನದ ನಂತರ ಮಗಳ ವಿವಾಹ ಸಿದ್ದಿ. ಹೋಟೆಲ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 7

ಸಿಂಹ:  ಅವಿವಾಹಿತರಿಗೆ ಶುಭ. ಉದ್ಯೋಗಸ್ಥ ಮಹಿಳೆಯರ ಅಭಿಲಾಷೆ ಈಡೇರಲಿದೆ. ದುಡುಕು ಸ್ವಭಾವದಿಂದ ಅವಕಾಶ ತಪ್ಪುವುದು. ಶುಭಸಂಖ್ಯೆ: 9

ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ. ಕಿರುಚಿತ್ರ ನಿರ್ದೇಶಕರಿಗೆ ಹೆಚ್ಚಿದ ಒತ್ತಡ. ಸೈನಿಕ ವೃತ್ತಿಗೆ ಆಯ್ಕೆಯಾಗಲಿದ್ದೀರಿ. ಶುಭಸಂಖ್ಯೆ: 6

ತುಲಾ: ನೂತನ ಗೃಹ ಆರಂಭಕ್ಕೆ ಚಾಲನೆ. ಹಣಕಾಸಿನ ಮುಗ್ಗಟ್ಟು ಕಾಡಲಿದೆ. ಸ್ನೇಹಿತರ ಮಧ್ಯೆ ಕಲಹವಾದೀತು. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:3

ವೃಶ್ಚಿಕ: ರಹಸ್ಯ ವಿಷಯಗಳು ಬಯಲಾಗಲಿವೆ. ಪ್ರೀತಿ ಪ್ರೇಮದ ಬಲೆಗೆ ಸಿಲುಕುವ ಸಾಧ್ಯತೆಯಿದೆ. ಸಾಲ ಕೊಡುವಾಗ ಎಚ್ಚರಿಕೆ ಇರಲಿ. ಶುಭಸಂಖ್ಯೆ: 3

ಧನಸ್ಸು: ಸಹಕಾರಿ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆಯಾಗುವುದು. ನೂತನ ಗೃಹ ಆರಂಭಕ್ಕೆ ಚಾಲನೆ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 3

ಮಕರ: ಅವಿವಾಹಿತ ಮಗಳಿಗೆ ವಿವಾಹಸಿದ್ಧಿ. ವಿದೇಶ ಪ್ರಯಾಣಕ್ಕೆ ಇದ್ದ ಅಡೆತಡೆ ನಿವಾರಣೆ. ಚಿನ್ನ-ಬೆಳ್ಳಿ ಖರೀದಿಯಲ್ಲಿ ನಷ್ಟ ಸಾಧ್ಯತೆ. ಶುಭಸಂಖ್ಯೆ: 2

ಕುಂಭ: ಪಿತ್ರಾರ್ಜಿತ ಆಸ್ತಿಗೆ ರ್ತಾಕ ಅಂತ್ಯ. ಕಾರ್ವಿುಕರ ಸಮಸ್ಯೆಯಿಂದ ಕೃಷಿ ಚಟುವಟಿಕೆ ಕುಸಿತ, ಸ್ವಗ್ರಾಮಕ್ಕೆ ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 2

ಮೀನ: ಉದ್ಯೋಗ ಸಂಬಂಧಿ ಬದಲಾವಣೆಗೆ ಒಗ್ಗಿಕೊಳ್ಳದ ಮನಸ್ಥಿತಿ. ಬಟ್ಟೆ ಅಂಗಡಿ ಮಾಲೀಕರಿಗೆ ನಷ್ಟ. ಪ್ರಭಾವಿ ವ್ಯಕ್ತಿ ಗಳ ಸಂಪರ್ಕ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net