ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕೈ ಹಾಕಿದ ಕೆಲಸಗಳಲ್ಲಿ ಜಯ

Nitya Bhavisya Vijayavani
Published on

ಮೇಷ: ರಿಯಲ್ ಎಸ್ಟೇಟ್​ನವರಿಗೆ ಲಾಭ. ಧಾರ್ವಿುಕ ವ್ಯಾಸಂಗದಲ್ಲಿ ಪ್ರಗತಿಯಾಗಲಿದೆ. ಆಕಸ್ಮಿಕ ಧನಾಗಮನವಾಗಿ ಸಂತೋಷ. ಶುಭಸಂಖ್ಯೆ:5

ವೃಷಭ: ಆಸ್ತಿ ನೋಂದಣಿ ಕಾರ್ಯಗಳಲ್ಲಿ ವಿಳಂಬ. ಹಿತಶತ್ರುಗಳಿಂದ ತೊಂದರೆ. ಬಂಧುಗಳೊಂದಿಗೆ ನಿಷ್ಠುರ. ಅನವಶ್ಯಕ ಅಲೆದಾಟ. ಶುಭಸಂಖ್ಯೆ:9

ಮಿಥುನ: ಅಹಾರ ಧಾನ್ಯಗಳ ವ್ಯಾಪಾರ. ಭೂ ವ್ಯವಹಾರಗಳಲ್ಲಿ ಪ್ರಗತಿ. ಸಹೋದ್ಯೋಗಿಗಳಿಂದ ತೊಂದರೆ. ಆರೋಗ್ಯದ ಸಮಸ್ಯೆ.ಶುಭಸಂಖ್ಯೆ:1 

ಕಟಕ: ದಾಂಪತ್ಯದಲ್ಲಿ ಅನ್ಯೋನ್ಯತೆ. ಅಧಿಕಾರಿಗಳಿಂದ ಪ್ರಶಂಸೆ. ಆಹಾರ ಸೇವನೆಯಿಂದ ಅನಾರೋಗ್ಯ. ದುಷ್ಟ ಜನರಿಂದ ಕಿರುಕುಳ. ಶುಭಸಂಖ್ಯೆ:1

ಸಿಂಹ: ಔತಣ ಕೂಟಕ್ಕೆವಿಪರೀತ ಖರ್ಚು. ದೃಷ್ಟಿ ದೋಷ ಕಾಡಲಿದೆ. ಬ್ಯಾಂಕ್ ಉದ್ಯೋಗದಲ್ಲಿ ಬಡ್ತಿ. ದ್ರವ್ಯ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:2

ಕನ್ಯಾ: ಉಪನ್ಯಾಸಕರಿಗೆ ಮತ್ತು ಶಿಕ್ಷಕರಿಗೆ ಶ್ರಮಕ್ಕೆ ತಕ್ಕ ಫಲ. ಕೈ ಹಾಕಿದ ಕೆಲಸಗಳಲ್ಲಿ ಜಯ. ವಾಹನದಿಂದ ತೊಂದರೆ ಆಗಲಿದೆ. ಶುಭಸಂಖ್ಯೆ:9

ತುಲಾ: ಹಣದ ತೊಂದರೆ ಉಂಟಾಗಬಹುದು. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವ ಸಾಧ್ಯತೆ. ಪತ್ನಿಗೆ ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ:1

ವೃಶ್ಚಿಕ: ಸ್ನೇಹಿತರಿಂದ ಸಾಲ ತೀರಿಸಲು ಸಹಾಯ. ಧಾರ್ವಿುಕ ವಿಚಾರಗಳಲ್ಲಿ ಆಸಕ್ತಿ. ಸಂಗೀತ ಕಲಾವಿದರಿಗೆ ವೇದಿಕೆ ಲಭ್ಯವಾಗಲಿದೆ. ಶುಭಸಂಖ್ಯೆ: 3

ಧನಸ್ಸು: ಪ್ರಯತ್ನದಿಂದ ಕಾರ್ಯಸಿದ್ಧಿ. ಮಾನಸಿಕ ನೆಮ್ಮದಿ. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಬದಲಾವಣೆ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ:6

ಮಕರ: ಉದ್ಯೋಗ ಸ್ಥಳದಲ್ಲಿ ಇಲ್ಲಸಲ್ಲದ ತಕರಾರು. ಸಾರ್ವಜನಿಕವಾಗಿ ಅವಮಾನ. ಶೀತ ಸಂಬಂಧೀ ರೋಗ. ಹಳೆಯ ಸ್ನೇಹಿತರ ಭೆೇಟಿ. ಶುಭಸಂಖ್ಯೆ: 7

ಕುಂಭ: ಶೈಕ್ಷಣಿಕ ಕ್ಷೇತ್ರದ ಉದ್ಯೋಗಿಗಳಿಗೆ ವೇತನ ಹೆಚ್ಚಾಗಲಿದೆ. ಐಟಿ ಉದ್ಯೋಗದಲ್ಲಿ ಸಮಸ್ಯೆ. ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ಶುಭಸಂಖ್ಯೆ: 4

ಮೀನ: ಷೇರು ವ್ಯವಹಾರದಲ್ಲಿ ಲಾಭ. ಕೆಲಸಗಾರರಿಂದ ನಂಬಿಕೆ ದ್ರೋಹ. ಚಾಂಚಲ್ಯದಿಂದ ಸುವರ್ಣ ಅವಕಾಶ ವಂಚಿತರಾಗುವಿರಿ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net