

ಮೇಷ: ದಿನಸಿ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ. ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ. ಅಡ್ಡಿ ನಿವಾರಣೆ ಆಗಲಿದೆ. ಶುಭಸಂಖ್ಯೆ: 5
ವೃಷಭ: ಕಲಾವಿದರಿಗೆ ಪುರಸ್ಕಾರ. ಸ್ವ-ಉದ್ಯೋಗದಲ್ಲಿ ಪ್ರತಿಸ್ಪರ್ಧಿಗಳಿಂದ ಕಿರಿಕಿರಿ. ಮಕ್ಕಳ ಅಧ್ಯಯನದ ಆಸಕ್ತಿಯಲ್ಲಿ ಬದಲಾವಣೆ. ಶುಭಸಂಖ್ಯೆ:8
ಮಿಥುನ: ಪಿತೃದೇವತೆಗಳ ಪೂಜೆಯಿಂದ ಸಮಾಧಾನ. ಉಪನ್ಯಾಸಕರಿಗೆ ಹೆಚ್ಚಿದ ಜವಾಬ್ದಾರಿ. ಸಮಾಧಾನ ತರುವ ಘಟನೆ ನಡೆಯಲಿದೆ. ಶುಭಸಂಖ್ಯೆ:3
ಕಟಕ: ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸಿನತ್ತ ದಾಪುಗಾಲು. ವೈವಾಹಿಕ ಜೀವನದಲ್ಲಿ ಸಂತೃಪ್ತಿ. ಪಾಲುದಾರಿಕೆಯಲ್ಲಿ ಆರ್ಥಿಕ ಸುಧಾರಣೆ. ಶುಭಸಂಖ್ಯೆ: 6
ಸಿಂಹ: ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಕಲಾವಿದರಿಗೆ ಹೊಸ ಅವಕಾಶಗಳು ಸಿಗಲಿವೆ. ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನೆ. ಶುಭಸಂಖ್ಯೆ:4
ಕನ್ಯಾ: ಅವಶ್ಯಕತೆಗೆ ತಕ್ಕಂತೆ ಆರ್ಥಿಕ ಸಮತೋಲನ ಸಾಧಿಸುವಿರಿ. ಹುಟ್ಟಿದೂರಿನಿಂದ ಶುಭವಾರ್ತೆ ಕೇಳುವಿರಿ. ಸಾರಿಗೆ ನೌಕರರಿಗೆ ಬಡ್ತಿ. ಶುಭಸಂಖ್ಯೆ: 2
ತುಲಾ: ಪ್ರಗತಿಯಿಂದ ಮಾನಸಿಕ ಧೈರ್ಯ ಹೆಚ್ಚಾಗಲಿದೆ. ಬಂಧುಗಳೊಂದಿಗೆ ಪರಸ್ಪರ ಸಹಾಯ. ಮಗಳಿಗೆ ಉತ್ತಮ ಸಂಬಂಧ ಬರಲಿದೆ. ಶುಭಸಂಖ್ಯೆ:4
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲ. ಕುಟುಂಬದ ಹಿರಿಯರ ಆರೋಗ್ಯ ಸುಧಾರಿಸಲಿದೆ. ಸಂಸ್ಕೃತ ಅಧ್ಯಯನದಲ್ಲಿ ಉನ್ನತ ಶಿಕ್ಷಣ ಅವಕಾಶ. ಶುಭಸಂಖ್ಯೆ:5
ಧನಸ್ಸು: ಸಮಾಧಾನದ ವರ್ತನೆಯಿಂದ ಪ್ರಶಂಸೆ ಗಳಿಸುವಿರಿ. ನ್ಯಾಯಾಲಯದ ವ್ಯವಹಾರದಲ್ಲಿ ಮಂದಗತಿ. ಬಂಧುಗಳಿಂದ ನೆರವು. ಶುಭಸಂಖ್ಯೆ: 9
ಮಕರ: ಸಾರ್ವಜನಿಕ ರಂಗದಲ್ಲಿ ಕಾರ್ಯಸಿದ್ಧಿ. ಸಮುದ್ರದ ಉತ್ಪನ್ನಗಳ ವ್ಯಾಪಾರಿಗಳಿಗೆ ಹೇರಳ ಲಾಭ. ಧಾರ್ವಿುಕ ಪ್ರವೃತ್ತಿ ಹೆಚ್ಚಲಿದೆ. ಶುಭಸಂಖ್ಯೆ: 6
ಕುಂಭ: ಸಮಾಜ ಸೇವಾ ಕಾರ್ಯದಲ್ಲಿ ಆಸಕ್ತಿ . ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆಯ ಸಾಧ್ಯತೆ. ಉನ್ನತ ಶಿಕ್ಷಣ ಆಸಕ್ತರಿಗೆ ಶುಭ. ಶುಭಸಂಖ್ಯೆ:2
ಮೀನ: ಹೊಸ ಯೋಜನೆ ಸ್ಥಗಿತ. ಹಳೆಯ ವಿವಾದಕ್ಕೆ ರ್ತಾಕ ಅಂತ್ಯ. ಕೃಷಿ ಉತ್ಪನ್ನಗಳಿಂದ ಲಾಭ. ಪಿತ್ರಾರ್ಜಿತ ಆಸ್ತಿ ಹಂಚಿಕೆ ಸಾಧ್ಯತೆ. ಶುಭಸಂಖ್ಯೆ:6