ನಿತ್ಯ ಭವಿಷ್ಯ: ಎಚ್ಚರ ಈ ರಾಶಿಯವರಿಗಿಂದು ವಿದ್ಯುತ್ ಉಪಕರಣದಿಂದ ತೊಂದರೆ

Nitya-Bhavishya-vvani-1
Published on

ಮೇಷ: ಕ್ರೀಡಾಪಟುವಿನ ಕನಸು ಸಾಕಾರವಾಗಲಿದೆ. ಪತ್ರಕರ್ತರು, ಸಾಹಿತಿಗಳಿಗೆ ಗೌರವ ಸನ್ಮಾನ. ತಿನಿಸು ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 9

ವೃಷಭ: ಹೊಸ ಹೋಟೆಲ್ ಪ್ರಾರಂಭಕ್ಕೆ ಯೋಚನೆ. ಪಿತ್ರಾರ್ಜಿತ ಆಸ್ತಿ ವಿಭಾಗವಾಗಲಿದೆ. ವಿವಾದದಿಂದಾಗಿ ವಿದೇಶ ಪ್ರಯಾಣ ರದ್ದು. ಶುಭಸಂಖ್ಯೆ: 7

ಮಿಥುನ: ಸಕ್ಕರೆ ಕಾಯಿಲೆ ಉಲ್ಬಣವಾಗಲಿದೆ. ಅಪರಿಚಿತದಿಂದ ಸಹಾಯ ದೊರೆಯಲಿದೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ. ಶುಭಸಂಖ್ಯೆ: 3

ಕಟಕ: ವಾಹನ ದುರಸ್ತಿಗೆ ಹಣ ಖರ್ಚಾಗಲಿದೆ. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಗೃಹ ನಿರ್ಮಾಣ ಪೂರ್ಣಗೊಳ್ಳಲಿದೆ. ಶುಭಸಂಖ್ಯೆ: 4

ಸಿಂಹ: ವಿಚ್ಛೇದನ ಕಟ್ಟಳೆ ಇತ್ಯರ್ಥಗೊಳ್ಳಲಿದೆ. ಮಹಿಳೆಯರ ಅಭಿಲಾಷೆಗಳು ಈಡೇರಲಿವೆ. ಸಂಗಾತಿಯ ವರ್ತನೆ ಬದಲಾಗಲಿದೆ. ಶುಭಸಂಖ್ಯೆ:9

ಕನ್ಯಾ: ಹಳೆಯ ಸ್ನೇಹಿತೆಯ ಭೇಟಿ. ಚಲನಚಿತ್ರ ನಟರಿಗೆ ವಿಶೇಷ ಅವಕಾಶ ಲಭಿಸಲಿದೆ. ವಾಣಿಜ್ಯ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ:7

ತುಲಾ: ಸೈನಿಕ ವೃತ್ತಿ ಕ್ಷೇತ್ರದಲ್ಲಿ ಅವಕಾಶ ದೊರೆಯಲಿದೆ. ರಾಜಕೀಯವಾದ ಪ್ರಗತಿ ಪ್ರಾರಂಭ. ವಿದ್ಯುತ್ ಉಪಕರಣದಿಂದ ತೊಂದರೆ. ಶುಭಸಂಖ್ಯೆ:1

ವೃಶ್ಚಿಕ: ಬಂಧುಗಳೊಂದಿಗೆ ಮನಸ್ತಾಪ ಉಂಟಾಗಲಿದೆ. ಪ್ರೀತಿ ಪ್ರೇಮದಲ್ಲಿ ಯಶಸ್ಸು ಸಿಗಲಿದೆ. ಕೊಟ್ಟ ಸಾಲ ಮರುಪಾವತಿಯಾಗಲಿದೆ. ಶುಭಸಂಖ್ಯೆ:2

ಧನುಸ್ಸು: ಸಹಕಾರಿ ಬ್ಯಾಂಕ್ ಉದ್ಯೋಗಿಗಳಿಗೆ ಗ್ರಾಹಕರಿಂದ ಕಷ್ಟ. ಕಾರು ಖರೀದಿಗೆ ಯೋಜನೆ. ನೂತನ ನಿವೇಶನ ಖರೀದಿ ನೋಂದಣಿ. ಶುಭಸಂಖ್ಯೆ:5

ಮಕರ: ಕೂಡಿಟ್ಟ ಹಣದ ಸದ್ವಿನಿಯೋಗ. ಸಂಗಾತಿ ಜತೆಗಿನ ಕಲಹ ತಾರಕಕ್ಕೆ ಹೋದೀತು. ವಾಣಿಜ್ಯ, ಕಾನೂನು ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ:3

ಕುಂಭ: ಮಾತೃಮೂಲದ ಆಸ್ತಿಗೆ ಸಹೋದರಿಯೊಂದಿಗೆ ವಾಗ್ವಾದ. ಕಾರ್ವಿುಕರ ಅಸಹಕಾರ, ನಷ್ಟ. ನೆರೆೆಯವರ ಸಹಕಾರದಿಂದ ಪ್ರಗತಿ. ಶುಭಸಂಖ್ಯೆ:1

ಮೀನ: ವಿಚ್ಛೇದಿತರಿಗೆ ವಿವಾಹ ಯೋಗ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ. ಅಶುಭ ಸುದ್ದಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net