

ಮೇಷ: ಹೊಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆತ್ಮೀಯರ ಸಹಕಾರ ಲಭ್ಯವಾಗುವುದು. ಹಣಕಾಸಿನ ವ್ಯವಹಾರದಲ್ಲಿ ಬೆಳವಣಿಗೆ. ಶುಭಸಂಖ್ಯೆ:5
ವೃಷಭ: ಮನೆಯಲ್ಲಿ ಸಂತಸದ ವಾತಾವರಣ. ಹಳೇ ಸ್ನೇಹಿತರ ಭೇಟಿ. ಸರ್ಕಾರಿ ಕೆಲಸಗಳಲ್ಲಿ ಅಲ್ಪ ತೊಂದರೆಗಳಿದ್ದರೂ ದಿನ ಅನುಕೂಲ. ಶುಭಸಂಖ್ಯೆ: 7
ಮಿಥುನ: ವಾಣಿಜ್ಯ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಆಲೋಚನೆಗಳಲ್ಲಿ ಸ್ಥಿರತೆ ಇರಲಿ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಶುಭಸಂಖ್ಯೆ: 1
ಕಟಕ: ಕುಟುಂಬ ಸದಸ್ಯರಿಂದ ಸಹಕಾರ. ಕೆಲಸದಲ್ಲಿ ಗಣನೀಯ ಬೆಳವಣಿಗೆ. ಆರೋಗ್ಯದ ವಿಷಯದಲ್ಲಿ ವಿಶೇಷ ಕಾಳಜಿ ಅಗತ್ಯ. ಶುಭಸಂಖ್ಯೆ:3
ಸಿಂಹ: ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ. ಅತಿಯಾದ ಖರ್ಚು ತಪ್ಪಿಸಿಕೊಳ್ಳಿ. ಅಪರಿಚಿತರಿಂದ ಆರ್ಥಿಕ ಲಾಭವಾಗುವುದು. ಶುಭಸಂಖ್ಯೆ: 7
ಕನ್ಯಾ: ವೃತ್ತಿಜೀವನದಲ್ಲಿ ಒತ್ತಡ. ಕುಟುಂಬದಲ್ಲಿ ಸಣ್ಣ ಮನಸ್ತಾಪ ಬರುವ ಸಾಧ್ಯತೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆದಾಯವಿದೆ. ಶುಭಸಂಖ್ಯೆ: 6
ತುಲಾ: ಹೂಡಿಕೆ ವ್ಯವಹಾರದಲ್ಲಿ ಆರ್ಥಿಕ ಪ್ರಗತಿ. ಮಾನಸಿಕ ಶಾಂತಿ ದೊರೆತು ಸಂತೋಷ ಹೆಚ್ಚಳ. ಹೈನೋತ್ಪನ್ನ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ವೃಶ್ಚಿಕ: ಹೊಸ ಯೋಜನೆಗಳು ಯಶಸ್ಸು ಕಾಣುವವು. ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಿ. ದಿನದ ಅಂತ್ಯದಲ್ಲಿ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ: 2
ಧನಸ್ಸು: ಪ್ರೇಮ ಸಂಬಂಧದಲ್ಲಿ ಸಿಹಿ ಕ್ಷಣ. ವಾಣಿಜ್ಯ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ನಟರಿಗೆ ಸಾರ್ವಜನಿಕ ವಲಯದಲ್ಲಿ ಕೀರ್ತಿ. ಶುಭಸಂಖ್ಯೆ:8
ಮಕರ: ಆರೋಗ್ಯದಲ್ಲಿ ಸುಧಾರಣೆಯಾಗಿ ಸಮಾಧಾನ. ಗೃಹ ನಿರ್ವಣಕ್ಕೆ ಹಿರಿಯರ ಸಹಕಾರ. ಚಿಕ್ಕದೊಂದು ಯಾತ್ರೆಯ ಸಂಭವ. ಶುಭಸಂಖ್ಯೆ: 1
ಕುಂಭ: ಸ್ನೇಹಿತರ ಸಹಾಯ ದೊರೆತು ಸಾರ್ಥಕ ಕೆಲಸ. ಹೊಸ ಕಲಿಕೆಗೆ ಅವಕಾಶ. ಸ್ವ- ಉದ್ಯೋಗಸ್ಥ ಮಹಿಳೆಯರಿಗೆ ಅನಿರೀಕ್ಷಿತ ಲಾಭ.ಶುಭಸಂಖ್ಯೆ:9
ಮೀನ: ಮನೋಭಾವದಲ್ಲಿ ಸಮತೋಲನ. ಹಣಕಾಸಿನ ವಿಚಾರಗಳಲ್ಲಿ ಶ್ರದ್ಧೆ ಇರಲಿ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಶುಭಸಂಖ್ಯೆ:4