ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅಪರಿಚಿತರಿಂದ ಸಹಾಯ

Nitya Bhavisya Vijayavani
Published on

ಮೇಷ: ವಿಚ್ಛೇದನ ಪ್ರಕರಣ ವಿಳಂಬವಾಗುವ ಸಾಧ್ಯತೆ. ಬಟ್ಟೆ ಗಿರಣಿಯ ಮಾಲೀಕರಿಗೆ ನಷ್ಟ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 8

ವೃಷಭ: ಬಂಧುಗಳೊಂದಿಗೆ ಮನಸ್ತಾಪ. ಇವೆಂಟ್ ಮ್ಯಾನೇಜ್ಮೆಂಟ್ ನಡೆಸುವವರಿಗೆ ಅನಿರೀಕ್ಷಿತ ಧನ ಲಾಭ. ವೈದ್ಯ ವೃತ್ತಿಯಲ್ಲಿ ಯಶಸ್ಸು. ಶುಭಸಂಖ್ಯೆ: 4

ಮಿಥುನ: ಮಗಳ ವಿವಾಹ ನಿಶ್ಚಯವಾಗುವುದು. ಆಹಾರ ಪದಾರ್ಥಗಳ ವ್ಯಾಪಾರಸ್ಥರಿಗೆ ನಷ್ಟವಾಗುವ ಸಾಧ್ಯತೆ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 1

ಕಟಕ: ಸಾಲ ತೆಗೆದುಕೊಳ್ಳುವಲ್ಲಿ ಯಶಸ್ಸು. ಸೌಂದರ್ಯವರ್ಧಕ ವ್ಯಾಪಾರದಲ್ಲಿ ನಷ್ಟ. ಸ್ವಯಂ ಉದ್ಯೋಗಿ ಮಹಿಳೆಗೆ ವಿಶೇಷ ದಿನ. ಶುಭಸಂಖ್ಯೆ: 2

ಸಿಂಹ:  ಹೊಸ ಹೂಡಿಕೆದಾರರ ಆಗಮನ. ಕಿರುಚಿತ್ರ ನಟರಿಗೆ ವೇದಿಕೆ ಲಭ್ಯ. ವೃತ್ತಿಪರ ಗಾಯಕರಿಗೆ ಅವಮಾನವಾಗುವ ಸಾಧ್ಯತೆ. ಶುಭಸಂಖ್ಯೆ: 6

ಕನ್ಯಾ: ಸರ್ಕಾರಿ ಕಚೇರಿಯ ಉದ್ಯೋಗಸ್ಥ ಸ್ತ್ರೀಯರಿಗೆ ವರ್ಗಾವಣೆ. ಆರಕ್ಷಕ ವೃತ್ತಿಯವರಿಗೆ ಭಡ್ತಿ ಸಿಗಲಿದೆ. ಸಂಗಾತಿಗೆ ಅನಾರೋಗ್ಯ. ಶುಭಸಂಖ್ಯೆ: 1

ತುಲಾ: ವಿದೇಶದಲ್ಲಿರುವ ಮಗನಿಂದ ಶುಭವಾರ್ತೆ. ಬೇಜಾರಿನಿಂದ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ. ಕಲಾವಿದರಿಗೆ ಗೌರವ. ಶುಭಸಂಖ್ಯೆ: 4

ವೃಶ್ಚಿಕ: ಸಮುದ್ರದ ಉತ್ಪನ್ನ ವ್ಯಾಪಾರದಲ್ಲಿ ಲಾಭ. ರೆಸ್ಟೋರೆಂಟ್ ಹೊಸದಾಗಿ ಪ್ರಾರಂಭ ಮಾಡುವಿರಿ. ಸ್ವಗ್ರಾಮಕ್ಕೆ ಪ್ರಯಾಣಿಸುವಿರಿ. ಶುಭಸಂಖ್ಯೆ: 5

ಧನಸ್ಸು: ಯಾಂತ್ರಿಕ ಜೀವನದಿಂದ ಖಿನ್ನತೆ. ವೈದ್ಯಕೀಯ ಕ್ಷೇತ್ರದ ಕೆಲಸಗಾರರಿಗೆ ಉದ್ಯೋಗ ನಷ್ಟದ ಭೀತಿ. ಶಿಲ್ಪಿಗಳಿಗೆ ವಿಶೇಷ ಪುರಸ್ಕಾರ. ಶುಭಸಂಖ್ಯೆ: 3

ಮಕರ: ಕುಟುಂಬ ಸಮೇತ ತೀರ್ಥಯಾತ್ರೆಗೆ ನಿರ್ಧಾರ. ನನೆಗುದಿಗೆ ಬಿದ್ದ ಕೆಲಸಕ್ಕೆ ಪುನರ್​ಚಾಲನೆ. ರೇಷ್ಮೆ, ಜೇನು ಕೃಷಿಕರಿಗೆ ಸುದಿನ.ಶುಭಸಂಖ್ಯೆ: 7

ಕುಂಭ: ಜ್ಯುವೆಲ್ಲರಿ ಮಳಿಗೆ ಮಾಲೀಕರಿಗೆ ಲಾಭ. ದಿನಸಿ ವ್ಯಾಪಾರದಲ್ಲಿ ನಷ್ಟ. ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ರದ್ದು ಆದೀತು. ಶುಭಸಂಖ್ಯೆ: 6

ಮೀನ: ಟ್ರಾವೆಲ್ಸ್ ಏಜೆನ್ಸಿ ಮಾಲೀಕರಿಗೆ ಲಾಭ. ಅಲಂಕಾರಿಕ ವಸ್ತು ಮಳಿಗೆಯವರಿಗೆ ಕೆಲಸಗಾರರ ಸಮಸ್ಯೆ. ಕೃಷಿಕರಿಗೆ ಸೌಲಭ್ಯ ಸಿಗಲಿದೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net