

ಮೇಷ: ಕುಟುಂಬದ ಮದುವೆಯಲ್ಲಿ ತೊಡಗಿಸಿಕೊಳ್ಳುವಿರಿ. ನಿಮ್ಮ ನಿರ್ಧಾರಕ್ಕೆ ಹಿತೈಷಿಗಳಿಂದ ಬೆಂಬಲ. ರಾಜಕೀಯದಲ್ಲಿ ಗೊಂದಲ. ಶುಭಸಂಖ್ಯೆ: 5
ವೃಷಭ: ಸ್ನೇಹಿತೆಯೊಂದಿಗೆ ಮಾತಿನ ಚಕಮಕಿ. ಆರ್ಥಿಕ ಸ್ಥಿತಿ ಬಿಗಡಾಯಿಸಲಿದೆ. ಹೃದಯ ಸಂಬಂಧಿ ಅನಾರೋಗ್ಯ, ಆಸ್ಪತ್ರೆಗೆ ದಾಖಲು. ಶುಭಸಂಖ್ಯೆ: 9
ಮಿಥುನ: ಬಂಧುಗಳೊಂದಿಗೆ ಕಲಹ. ಮನೆ ನವೀಕರಣಕ್ಕೆ ಖರ್ಚು. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸುವುದು ಅಪೇಕ್ಷಣೀಯ. ಶುಭಸಂಖ್ಯೆ: 9
ಕಟಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಬದಲಾವಣೆ. ಹೊಸ ಹೋಟೆಲ್ ಪ್ರಾರಂಭಕ್ಕೆ ನಿರ್ಧಾರ. ಶುಭಸಂಖ್ಯೆ: 2
ಸಿಂಹ: ಧಾರ್ವಿುಕ ಕ್ಷೇತ್ರದವರಿಗೆ ಆದಾಯ ವೃದ್ಧಿಸುವುದು. ವಸ್ತ್ರ ವ್ಯಾಪಾರಿಗಳಿಗೆ ಅನಿರೀಕ್ಷಿತ ಧನ ಲಾಭ. ಷೇರು ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ: 6
ಕನ್ಯಾ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಆದೀತು. ಶ್ರಮಕೆ ತಕ್ಕ ಫಲ. ಸುಖ ಭೋಜನ. ಶುಭಸಂಖ್ಯೆ: 7
ತುಲಾ: ವಿಚ್ಛೇದಿತರಿಗೆ ಮರು ವಿವಾಹ ಯೋಗ, ಯಾರನ್ನೂ ಹೆಚ್ಚಾಗಿ ನಂಬಬೇಡಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಿಂದ ಮುಕ್ತಿ. ಶುಭಸಂಖ್ಯೆ: 4
ವೃಶ್ಚಿಕ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಆರ್ಥಿಕ ಚೇತರಿಕೆ. ಆನ್ಲೈನ್ ಖರೀದಿಯಲ್ಲಿ ಮೋಸ. ಪೆಟ್ಟಾಗುವ ಸಾಧ್ಯತೆ. ಶುಭಸಂಖ್ಯೆ: 2
ಧನಸ್ಸು: ಸಹಕಾರಿ ಬ್ಯಾಂಕ್ ನೌಕರರಿಗೆ ವರ್ಗ. ಸ್ತ್ರೀಯರಿಗೆ ಅಧಿಕಾರ ಲಭ್ಯ. ಆಸ್ತಿ ಮಾರಲು ಇದ್ದ ಅಡ್ಡಿನಿವಾರಣೆ. ಸ್ನೇಹಿತನಿಂದ ಸಹಾಯ. ಶುಭಸಂಖ್ಯೆ: 1
ಮಕರ: ಆಧ್ಯಾತ್ಮಿಕ ಮತ್ತು ಯೋಗ ವಿಚಾರಗಳಲ್ಲಿ ಆಸಕ್ತಿ. ವೀಸಾ ಸಮಸ್ಯೆಯಿಂದ ಪ್ರಯಾಣ ರದ್ದು. ಉದ್ಯೋಗಸ್ಥ ಸ್ತ್ರೀಯರಿಗೆ ಶುಭ ದಿನ. ಶುಭಸಂಖ್ಯೆ: 9
ಕುಂಭ: ಸಹವರ್ತಿಗಳಿಗೆ ಸಹಾನುಭೂತಿ ತೋರುವಿರಿ. ಕಾನೂನು ವಿದ್ಯಾರ್ಥಿಗಳಲ್ಲಿ ಪ್ರಗತಿ. ಮನಸ್ಸಿನಲ್ಲಿದ್ದ ಭಯ ಭೀತಿ ನಿವಾರಣೆ. ಶುಭಸಂಖ್ಯೆ: 2
ಮೀನ: ಸ್ವಯಂಕೃತ ಅಪರಾಧದಿಂದ ಪಶ್ಚಾತ್ತಾಪ. ಗೃಹ ನಿರ್ವಣಕ್ಕೆ ತಡೆ. ಮನೆಯಲ್ಲಿ ಶುಭ ಸುದ್ದಿ ಕೇಳುವಿರಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 6