ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದಿನಾಂತ್ಯದಲ್ಲಿ ಶುಭ ಸುದ್ದಿ

Nitya Bhavisya Vijayavani
Published on

ಮೇಷ: ದೇವರು ಮತ್ತು ಆಧ್ಯಾತ್ಮಿಕ ಚಿಂತನೆಗಳು. ಧಾರ್ವಿುಕ ಸಮಾರಂಭಕ್ಕೆ ಅಧಿಕ ಖರ್ಚು. ಮಿತ್ರರಿಂದ ಅನುಕೂಲವಾಗಲಿದೆ. ಶುಭಸಂಖ್ಯೆ: 5

ವೃಷಭ: ಪಾಲುದಾರಿಕೆಯಲ್ಲಿ ಕಿರಿಕಿರಿ. ಮಾನಸಿಕ ಗೊಂದಲದಿಂದ ಅವಕಾಶ ವಂಚಿತರಾಗುವಿರಿ. ದಿನಾಂತ್ಯದಲ್ಲಿ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ: 9

ಮಿಥುನ: ಯಂತ್ರೋಪಕರಣಗಳ ವ್ಯಾಪಾರದಲ್ಲಿ ಉತ್ತಮ ಧನಾಗಮನ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ತಂದೆ ಮಕ್ಕಳಲ್ಲಿ ಕಿರಿಕಿರಿ. ಶುಭಸಂಖ್ಯೆ: 1

ಕಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಮುನ್ನಡೆಯಾಗುವುದು. ಸೋಮಾರಿತನದಿಂದ ನಷ್ಟವಾದೀತು. ಆಟೋಟ ಸ್ಪರ್ಧೆಯಲ್ಲಿ ಗೆಲುವು. ಶುಭಸಂಖ್ಯೆ: 7

ಸಿಂಹ: ದೈಹಿಕ ಅಸಮರ್ಥತೆ ವಿಪರೀತ ಕಾಡುವುದು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಆಗಬಹುದು. ಅಧ್ಯಾತ್ಮದ ಕಡೆ ಒಲವು ಹೆಚ್ಚುವುದು. ಶುಭಸಂಖ್ಯೆ:3

ಕನ್ಯಾ: ಬಂಧುಗಳು ಮತ್ತು ಆತ್ಮೀಯರಿಂದ ಕಿರಿಕಿರಿಯಾಗುವುದು. ರಾಜಕೀಯ ವ್ಯಕ್ತಿಗಳಿಗೆ ಓಡಾಟ. ಬಂಧುಗಳಿಂದ ವಿರೋಧ. ಶುಭಸಂಖ್ಯೆ: 4

ತುಲಾ:ಉದ್ಯೋಗದ ಅಸ್ಥಿರತೆ ತೀವ್ರವಾಗಿ ಕಾಡಲಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಆಗಬಹುದು. ಆರ್ಥಿಕ ಸಂಕಷ್ಟ ಕಾಡೀತು. ಶುಭಸಂಖ್ಯೆ:8

ವೃಶ್ಚಿಕ: ಹೆಣ್ಣುಮಕ್ಕಳಿಂದ ಅನುಕೂಲ ಒದಗಿಬರಲಿದೆ. ವಿದ್ಯುತ್ ಕ್ಷೇತ್ರದ ಕಾರ್ವಿುಕರಿಗೆ ಬಡ್ತಿ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ. ಶುಭಸಂಖ್ಯೆ: 2

ಧನಸ್ಸು: ಮಕ್ಕಳಿಗೆ ಉತ್ತಮ ಅವಕಾಶ ಸಿಗಲಿದೆ, ಕಾರ್ವಿುಕರ ಅಭಾವದಿಂದ ಕೃಷಿ ಫಸಲು ನಷ್ಟ. ವಾಹನ ಅಪಘಾತವಾಗುವ ಸಂಭವ. ಶುಭಸಂಖ್ಯೆ: 5

ಮಕರ: ಕಾನೂನು ಉಲ್ಲಂಘಿಸಿ ದಂಡ ಕಟ್ಟುವ ಸಾಧ್ಯತೆ. ಅಪರಿಚಿತರಿಂದ ಮೋಸ. ಶುಭಯೋಗ ಪ್ರಾಪ್ತಿ. ಕಾರ್ವಿುಕರಿಂದ ಸಮಸ್ಯೆ. ಶುಭಸಂಖ್ಯೆ: 3

ಕುಂಭ: ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ. ಸಾಲ ಮಾಡುವ ಪರಿಸ್ಥಿತಿ. ಉತ್ತಮ ಸ್ನೇಹಿತರ ಪರಿಚಯ. ಶುಭಸಂಖ್ಯೆ: 9

ಮೀನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಬಂಧುಗಳಿಂದ ಮಾನಹಾನಿ ಸಾಧ್ಯತೆ. ಆಧ್ಯಾತ್ಮಿಕ ಚಿಂತನೆ ಕಡೆ ಮನಸ್ಸು. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net